212 KANARESE SELECTIONS-PART III ಒಪ್ಪಿಸಿ ಆ ಮೇಲೆ ನಿನ್ನ ಮನಸ್ಸು ಬಂದ ಕಡೆಗೆ ಹೋಗು ಎಂದು ಹೇಳಲು ಆ ವಾರ್ಷೇಯನು ಆ ಮಾತನ್ನು ಮಂತ್ರಿಗಳಿಗೆ ತಿಳಿಸಿದನು, ಅವರೆಲ್ಲರೂ ಏಕಾ ಲೋಚನೆಯನ್ನು ಮಾಡಿ ನಿಶ್ಚಯಿಸಿ ಹಾಗೇ ಮಾಡು ಎಂದು ನುಡಿದರು ತರು ವಾಯು ವಾರ್ಮೇಯನು ಆ ಶಿಶುಗಳನ್ನು ರಥದ ಮೇಲೆ ಕೂರಿಸಿಕೊಂಡು ಕುಂಡಿನ ಪಟ್ಟಣಕ್ಕೆ ಹೋಗಿ ಭೀಮಭೂಪಾಲಕಸಿಗೆ ಒಪ್ಪಿಸಿ ಆತನ ಅಪ್ಪಣೆಯನ್ನು ತೆಗೆದು ಕೊಂಡು ನಳನಿಗೆ ಬಂದ ಅನರ್ಧವನ್ನು ಯೋಚಿಸಿ ಸಂಕಟಪಡುತ್ತಾ ನಳನಲ್ಲಿ ಆಶೆ ಯನ್ನು ತೊರೆದು ನಾನು ಇನ್ನು ಎಲ್ಲಿಗೆ ಹೋಗಬೇಕೆಂದು ಯೋಚಿಸಿ ಕಡೆಗೆ ಅಯೋಧ್ಯಾ ಪಟ್ಟಣಕ್ಕೆ ಹೋಗಲು 'tಲ್ಲಿಗೆ ಆರಸಾದ ಋತುಪರ್ಣ ರಾಜನು ಆತನ ಸಾರಧಿತನದ ಜಾಣತನವನ್ನು ನೋಡಿ ಮೆಚ್ಚಿ ಬೇಕಾದ ವಸ್ತುಗಳನ್ನು ಕೊಟ್ಟು ಬಹುಮಾನದಿಂದ ಆತನನ್ನು ತನ್ನ ಸಾರಥ್ಯದ ಕೆಲಸದಲ್ಲಿ ಇಟ್ಟು ಕೊಂಡನು ಇತ್ರಲಾ ಪುಷ್ಕರನು ನಳನನ್ನು ನೋಡಿ ನಿನ್ನ ಬೊಕ್ಕಸ ಮೊದಲಾದುವುಗ ಇನ್ನೂ ರಾಜ್ಯವನ್ನೂ ಜೂಜಿನಲ್ಲಿ ಗೆದ್ದೆನು. ಪಂತವನ್ನು ಒಡ್ಡುವುದಕ್ಕೆ ಮತ್ತೇನೂ ನಿನ `ಲ್ಲ ನಿನ್ನ ಹೆಂಡತಿಯಾದ ದಮಯಂತಿ ಒಬ್ಬಳು ಇದ್ದಾಳೆ, ಅವಳನ್ನು ಪಂತಕ್ಕೆ ಒಡ್ಡು ವುದಕ್ಕೆ ನಿನಗೆ ಮನಸ್ಸಿದ್ದರೆ ಒಡ್ಡು ಆಡುವಣ ಅ೦ದನು ಆ ಮಾತುಗಳಿಂದ ನಳನ ಎದೆಯ ಸೀಳಿದಂತಾಗಲು ಕೆಲವು ಹೊತ್ತು ಸುಮ್ಮನೆ ಇದ್ದು ಆ ಮೇಲೆ ಆತನನ್ನು ಕೋಪದಿಂದ ದುರದುರನೆ ನೋಡಿ-ಎಲೈ, ನರಾಧಮನೇ ! ನನಗೆ ಇನ್ನೂ ಬೇಕಾ ದಷ್ಟು ಧನಗಳಿವೆ ಎಂದು ನುಡಿದು ಒಂದಾದ ಮಾಂಗಲ್ಯ ಸೂತ್ರ ಹೊರತಾಗಿ ದಮ ಯಂತಿಯು ಧರಿಸಿ ಇದ್ದ ಮಿಕ್ಕಿ ಒಡವೆಗಳನ್ನೂ ತಾನು ಹೊದೆದಿದ್ದ ವಸ್ತ್ರಗಳನ್ನೂ ಪಂಕಕ್ಕೆ ಒಡ್ಡಿ ಎಲ್ಲವನ್ನೂ ಸೋತು ಉಟ್ಟ ಬಟ್ಟೆ ಯಲ್ಲಿಯೇ ಪಟ್ಟಣವನ್ನು ಬಿಟ್ಟು ಹೋಗುವಲ್ಲಿ ದಮಯಂತಿಯ ಸಂಗಡಲೇ ಒ೦ದಳು ಅವರಿಬ್ಬರೂ ಹೋಗಿ ಆ ರಾತ್ರಿಯಲ್ಲಿ ಪಟ್ಟಣದ ಸಮೀಪದಲ್ಲಿರಲು ದುಷ್ಟನಾದ ಪುಸ್ತರನು--ಯಾರಾದರೂ ನಳನಿಗೆ ಅನ್ನೋದಕಗಳಿಂದ ಉಪಚಾರವನ್ನು ಮಾಡಿದರೆ ಅವರನ್ನು ಕೊಲ್ಲಿಸುತ್ತೇನೆ ಎಂದು ಪಟ್ಟಣದಲ್ಲಿ ಸಾರಿಸಿದುದರಿಂದ ನಳದಮಯಂತಿಯರಿಗೆ ಒಬ್ಬರಾದರೂ ಭೋಜ ನಾದ್ಯುಪಚಾರಗಳನ್ನು ಮಾಡಿಸದೆ ಹೋದರು. ಆಗ ದಮಯಂತಿಯ ನಳನೂ ಸಾಯಂಸಂಧ್ಯಾ ಕರ್ಮವನ್ನು ನೆರವೇರಿಸಿ ಕೊಂಡು ಜಲಪಾನವನ್ನು ಮಾಡಿ ಹಸಿವಿನಿಂದ ಪೀಡಿತರಾಗಿ ಪ್ರಾತಃಕಾಲವಾದ ಮೇಲೆ ಮುಂದೆ ಬರುತ್ತಿರುವಲ್ಲಿ ಚಿನ್ನದ ರೆಕ್ಕೆಗಳಿಂದ ಕೂಡಿರುವ ಕೆಲವು ಹಕ್ಕಿಗಳು ನಳನ ಸವಿಾಪಕ್ಕೆ ಹಾರಿಬರಲು ಅವುಗಳನ್ನು ನೋಡಿ ಈ ಹಕ್ಕಿಗಳನ್ನು ಹಿಡಿದು ಕೊಂಡರೆ ಹೊಟ್ಟೆ ತುಂಬಾ ಅನ್ನವೂ ವ್ರಯಕ್ಕೆ ಚಿನ್ನವೂ ದೊರೆಯುತ್ತದೆ ಎಂದು ಎಣಿಸಿ ತಾನು ಉಟ್ಟಿರುವ ಬಟ್ಟೆ ಯನ್ನು ಕಳೆದು ಹೊಂಚುಹಾಕಿ ಅವುಗಳ ಮೇಲೆ ಕೌಚಲು ಆ ಹಕ್ಕಿಗಳು ಆ ಬಟ್ಟೆ ಯನ್ನು ಎತ್ತಿ ಕೊಂಡು ಆಕಾಶಕ್ಕೆ ಹಾರಿಹೋದವು. ಆಗ ನಳನು ಬೆತ್ತಲೆ ನಿಂತು ನಾಚಿಕೆಯಿಂದ ಮೊಗವನ್ನು ಬೊಗ್ಗಿಸಿಕೊಂಡಿರುವುದನ್ನು ನೋಡಿ ಆ ಹಕ್ಕಿಗಳು-ಎಲೈ, ನರೇಂದ್ರನೆ ! ನಮ್ಮನ್ನು ದಾಳಗಳು ಎಂದು ತಿಳಿದು ಕೊ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೪
ಗೋಚರ