ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 13 ಎಂಬುದಾಗಿ ಹೇಳಿ ಮಾಯವಾದುವು ಆ ಮೇಲೆ ನಳನು ದಮಯಂತಿಯನ್ನು ನೋಡಿ-ನಾನು ಬೆತ್ತಲೆ ಬರುವುದಕ್ಕೆ ನಾಚಿಕೊಳ್ಳುತ್ತೇನೆ. ಇದೋ ! ನಿಮ್ಮ ತಂದೆ ಯದಾದ ಕುಂಡಿನ ನಗರವು ಕಾಣುತ್ತದೆ ನೀನು ಅಲ್ಲಿಗೆ ಹೋಗು ಎಂದು ಹೇಳಲು ದಮಯಂತಿಯು ಆ ವಾಕ್ಯವನ್ನು ಕೇಳಿ ಶೋಕಾರೆಯಾಗಿ ಕಣ್ಣೀರುಗಳನ್ನು ಸುರಿ ಸುತ್ತಾ ಗದ್ದದ ಕ೦ರಿಯಾಗಿ ತನ್ನ ವಲ್ಲಭನನ್ನು ಕುರಿತು--ನೀನು ಮನಸ್ಸಿನಲ್ಲಿ ನೆನಸಿ ರುವುದನ್ನು ನಾನು ನೋಡಿದರೆ ನನ್ನ ಅ೦ಗೋಪಾಂಗಗಳೆಲ್ಲಾ ಛಿನ್ನ ಭಿನ್ನ ಗಳಾಗುತ್ತವೆ. ಹೃದಯವು ತಲ್ಲಣಿಸುತ್ತದೆ. ರಾಜ್ಯವನ್ನು ಬಿಟ್ಟು ಉಡುವುದಕ್ಕೆ ಬಟ್ಟೆ ಇಲ್ಲದೆ ದುಃಖಿ ತನಾಗಿರುವ ನಿನ್ನನ್ನು ಜನರಹಿತವಾದ ಈ ಕಾಡಿನಲ್ಲಿ ಬಿಟ್ಟು ಹೋಗುವೆನೇ ? ಹಸಿವಿ ನಿಂದ ದುಃಖಿಸುತ್ತಿರುವ ನಿನ್ನ ಸಮೀಪದಲ್ಲಿಯೇ ಇದ್ದು ಕೊಂಡು ನಿನ್ನ ಮನಸ್ಸಿನ ಕ್ಷೇಶವನ್ನು ಹೋಗಲಾಡಿಸುವನು ಲೋಕದಲ್ಲಿ ಗಂಡಂದಿರ ಕಷ್ಟವನ್ನು ಪರಿಹರಿಸು ವುದಕ್ಕೆ ಹೆಂಡತಿಗಿಂತಲೂ ಮತ್ತೊಬ್ಬರು ಹಿತರಿಲ್ಲ ಎಂದು ನೀವೇ ಹೇಳಿರುವೆಯ ಅ ವೇ? ಎಂದು ನುಡಿಯಲು ನಳನು ಆಕೆಯ ಮಾತನ್ನು ಕೇಳಿ...... ನೀನು ನಿಜವಾಗಿ ಹೇಳಿದೆ. ನಾನು ನಿನ್ನನ್ನು ಪರಿಹರಿಸಬೇಕೆಂದು ಎಣಿಸಿದವನಲ್ಲ, ನನ್ನಲ್ಲಿ ಆ ಸಂಶಯ ವನ್ನು ಎಂದಿಗೂ ಮಾಡಬೇಡ ನನ್ನ ಪ್ರಾಣಗಳನ್ನಾದರೂ ಬಿಟ್ಟೆನಲ್ಲದೆ ನಿನ್ನನ್ನು ಅಗಲಿ ಇರಲಾರೆನು ಅಂದನು. ಆ ಮಾತಿಗೆ ದಮಯಂತಿಯು- ನಾನು ಅದನ್ನು ಬಲ್ಲೆನು, ವಿದರ್ಭದೇಶದ ಮಾರ್ಗವನ್ನು ತೋರಿಸಿದುದರಿಂದ ನನ್ನ ಹೃದಯವು ತಲ್ಲಣಿಸುತ್ತಿದೆ ಆದರೆ ನಾವಿ ಬ್ಬರೂ ಎದರ್ಭದೇಶಕ್ಕೆ ಹೋದರೆ ನನ್ನ ತಂದೆಯಾದ ಭೀಮಭೂಪಾಲಕನು ನಮ್ಮನ್ನು ಪ್ರೀತಿಸಿ ಸಕಲ ವಸ್ತುಗಳನ್ನೂ ಕೊಡುತಾನೆ ಆದುದರಿಂದ ಸುಖವಾಗಿ ಇರಬಹುದು. ಇದು ನಿನ್ನ ಚಿತ್ರಕ್ಕೆ ಸಮ್ಮತವಾದರೆ ಆ ಪ್ರಕಾರವೇ ಮಾಡಬಹುದು ಎನಲು ನಳನು -ಅದು ಯುಕ್ಯವೇ ಸರಿ ! ಆದರೆ ನಾನು ಮೊದಲು ಸ್ವಯಂವರಕ್ಕೆ ಸಕಲ ವೈಭವ ದಿ೦ದ ಹೋಗಿ ಇದ್ದೆನು ಈಗ ಇ೦ಧಾ ಬಡತನದಿಂದ ಕೂಡಿ ನಿನಗೆ ಬಹಳ ದುಃಖ ವಾಗುವ ಹಾಗೆ ಅಲ್ಲಿಗೆ ಹೋಗುವುದು ತಕ್ಕುದಲ್ಲವು ಎಂದು ದಮಯಂತಿಯನ್ನು ಸಮಾಧಾನಪಡಿಸಿದನು ಅನಂತರದಲ್ಲಿ ಇಬ್ಬರೂ ಕೂಡಿ ಹಸಿವು ನೀರಡಿಕೆಗಳಿ೦ದ ಸಂಕಟಪಡುತ್ತಾ ಒಂದು ಸ್ಥಳಕ್ಕೆ ಹೋದರು ನಳನು ವಸ್ತ್ರಹೀನನಾದಕಾರಣ ಧೂಳಿ ಗಳಿಂದ ವ್ಯಾಪ್ತವಾದ ಶರೀರವುಳ್ಳವನಾಗಿ ನೆಲದಲ್ಲಿಯೇ ಬಿದ್ದು ಕೊಳ್ಳಲು ದಮಯಂ ತಿಯು ಆತನನ್ನು ತಬ್ಬಿಕೊಂಡು ಅವನ ಬಳಿಯಲ್ಲಿಯೇ ಮಲಗಿದಳು ಆಗ ನಳನುಈ ಕೋಮಲೆಯು ಹೀಗೆ ಕಷ್ಟ ಪಡುವುದನ್ನು ನೋಡುವ ನನ್ನ ಎರಡು ಕಣ್ಣುಗಳೂ ಒಡೆದು ಹೋಗುವುದಿಲ್ಲವಲ್ಲಾ ! ಈಕೆಯ ಕಷ್ಟವನ್ನು ನೋಡುತ್ತಾ ಬದುಕುವದ ಕ್ಕಿಂತಲೂ ಪ್ರಾಣವನ್ನು ಬಿಡುವುದು ಲೇಸು. ಇವಳು ನನ್ನ ಜೊತೆಯಲ್ಲಿ ಇರುವ ವರೆಗೂ ಇವಳಿಗೆ ಈ ಸಂಕಟವು ತಪ್ಪುವದಿಲ್ಲ, ನಾನು ಅವಳನ್ನು ಅಗಲಿ ಹೋದರೆ ಇವಳು ತನ್ನ ತಂದೆಯ ಸವಿಾಪಕ್ಕೆ ಹೋಗಿ ಸುಖದಿಂದ ಇರುವಳು ಎಂದು ನಿಶ್ಚಯಿಸಿ ಅವಳು ಉಟ್ಟಿದ್ದ ಬಟ್ಟೆಯಲ್ಲಿ ಅರ್ಧವನ್ನು ತಾನು ಹರಿದು ಕೊಂಡು ಅವಳಿಗೆ ಎಚ್ಚರ