ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 KANARESE SELECTIONS-PART III ವಾಗದಂತೆ ಮೆಲ್ಲನೆದ್ದು ದುಃಖದಿಂದ ಬಾಸ್ಕೋದಕಗಳನ್ನು ಸುರಿಸುತ್ತಾ--ಅಯ್ಯೋ ವಿಧಿಯೇ ! ಇಂಥಾ ಕಷ್ಟವನ್ನು ಕೊಟ್ಟೆ ಯಾ ? ನೀನೇ ಗತಿ ಎಂದು ಸಹಜವಾಗಿ ನಂಬ ರುವ ಪತ್ನಿ ಯನ್ನು ಮಲಗಿರುವ ಕಾಲದಲ್ಲಿ ವಂಚಿಸಿ ಕಾಡಿನಲ್ಲಿ ಬಿಟ್ಟು ಹೋಗುವ ನನ್ನಂಥಾ ಪಾಪಿಯು ಲೋಕದಲ್ಲಿ ಉಂಟೇ ? ಎಂದು ಹೇಳಿಕೊಳ್ಳುತ್ತಾ ಮಹಾ ದುಃಖ ದಿಂದಲೂ ವ್ಯಧೆಯಿಂದ ಕೂಡಿ ಸ್ವಲ್ಪ ದೂರವನ್ನು ಹೋಗಿ ಪುನಃ ಹಿಂದಿರುಗಿ ಬಂದು ಮುಂದೆ ಹೋಗುವುದಕ್ಕೆ ಕೆಲವು ಹೊತ್ತು ಯೋಚಿಸುತ್ತಾ ನಿಂತಿದ್ದು ಕಲಿ ಪ್ರೇರಣೆಯಿಂದ ತಿರಿಗಿ ಹೋಗಲೆಣಿಸಿ ಈ ಪುಣ್ಯ ಶೀಲೆಯಾದ ಪತಿವ್ರತೆಯನ್ನು ಭೂಮಿ ದೇವಿಯ ವನದೇವತೆಗಳೂ ಸೂರ್ಯ ಚಂದ್ರರೂ ಧರ್ಮದೇವತೆಯ ಅಷ್ಟ ದಿಕ್ಕಾ ಕರೂ ಕಾಪಾಡಲಿ ಎಂದು ನುಡಿದು ಯಾವ ಯೋಚನೆಯ ತೋರದೆ ಕಲಿಯಿಂದ ಪೀಡಿಸಲ್ಪಟ್ಟ ವನಾಗಿ ಹುಚ್ಚನಂತೆ ಮುಂದಕ್ಕೆ ಹೊರಟು ಹೋದನು. ಆಗ ಕೆಲವು ಹೊತ್ತಿನ ಮೇಲೆ ದಮಯಂತಿಯು ಎಚ್ ತವಳಾಗಿ ನಳನನ್ನು ಕಾಣ ದೆ ಕಲ್ಮರಗಳು ಕರಗುವಂತೆ ದುಃಖಪಡುತ್ತಾ-- ಎಲೈ, ಪತಿಯೇ ! ನಿರಪರಾಧಿಯಾದ ನನ್ನನ್ನು ಬಿಟ್ಟು ಹೋಗುವುದು ನಿನಗೆ ಧರ್ಮವೇ ? ಎಂದು ಕೂಗಿ ಅಳುತ್ತಾ ದಿಕ್ಕುದಿ ಕ್ಕಿಗೆ ಬಾಯಿ ಬಿಡುತ್ತಾ ಬಾಯಾರಿ ಗಂಟಲೊಣಗಿ ಹಸಿವಿನಿಂದ ಕಂಗೆಟ್ಟು, ಕಾಡಿನಲ್ಲಿ ಬರುತ್ತಿರಲು ದಾರಿಯಲ್ಲಿ ಬಿದ್ದಿರುವ ಒಂದು ಹೆಬ್ಬಾವು ಅವಳನ್ನು ನುಂಗಿತು. ಆಗ ಹೆಬ್ಬಾವಿನಿಂದ ನುಂಗಲ್ಪಟ್ಟರೂ ನಳನನ್ನು ನೆನೆದು--ಎಲೈ, ಟ್ರಾಣನಾಥನೇ ! ಅನಾ ಧಳಾದ ನಿನ್ನ ಹೆಂಡತಿಯನ್ನು ಈ ಹಾವು ನುಂಗುತ್ತಿರುವಲ್ಲಿ ನೀನು ಬೇಗ ಬಂದು ನನ್ನ ನ್ನು ಯಾಕೆ ಬಿಡಿಸುವುದಿಲ್ಲ ? ನಾನು ಸತ್ತು ಹೋದ ಮೇಲೆ ನಿನಗೆ ಬಂದಿರುವೆ ಈ ಕಷ್ಟವು ಪರಿಹಾರವಾಗಿ ಸಕಲೈಶ್ವರಗಳನ್ನು ಪಡೆದು ನನ್ನನ್ನು ನೆನೆಸಿಕೊಳ್ಳು ವುದರಿಂದುಂಟಾಗುವ ಆ ದುಃಖವನ್ನು ಹೇಗೆ ಸಹಿಸುವಿ ? ಎಂದು ಮೊರೆಯಿಡು ತಿರಲು ಆ ಕಾಡಿನಲ್ಲಿ ತಿರುಗುವ ಒಬ್ಬ ಬೇಡನು ಆ ಮಾತುಗಳನ್ನು ಕೇಳಿ ಬೇಗ ಅಲ್ಲಿಗೆ ಬಂದು ತನ್ನ ಕೈಯ್ಯಲ್ಲಿ ಇದ್ದ ಕತ್ತಿಯಿಂದ ಆ ಹಾವಿನ ಬಾಯನ್ನು ಸೀಳಿ ದಮಯಂ ತಿಯನ್ನು ಬಿಡಿಸಿ ನೀರಿನಿಂದ ಶರೀರವನ್ನು ತೊಳೆಯಿಸಿ ಗಡ್ಡೆ ಗೆಣಸುಗಳನ್ನೂ ಹಣ್ಣು ಗಳನ್ನೂ ಆಹಾರಕ್ಕೆ ತಂದು ಕೊಟ್ಟು-- ನೀನು ಯಾರು ? ಒಬ್ಬಳೇ ಈ ಕಾಡಿಗೆ ಏಕೆ ಬಂದೆ ? ಇಂಥಾ ಕಷ್ಟವು ನಿನಗೆ ಬರುವುದಕ್ಕೆ ಕಾರಣವೇನು ? ಎನಲು ದಮಯಂ ತಿಯು ತನ್ನ ಎಲ್ಲಾ ಸುದ್ದಿಯನ್ನೂ ನಿಜವಾಗಿ ಆ ಬೇಡನಿಗೆ ಹೇಳಿದಳು, ಆ ಬಳಿಕ ಬೇಡನು ಇವಳ ಚೆಲುವನ್ನು ನೋಡಿ ಮನ್ನಧ ವಿಕಾರವುಳ್ಳವನಾಗಿ ಬಲಾತ್ಕಾರದಿಂದ ಹಿಡಿಯಬೇಕೆಂದು ಹತ್ತಿರಕ್ಕೆ ಬರಲು ದಮಯಂತಿಯು ಮಹಾ ಕೋಪದಿಂದ ನಾನು ನಳನೊಬ್ಬನನ್ನೇ ಹೊರತು ಮತ್ತೊಬ್ಬ ಗಂಡಸನ್ನು ಕನಸಿನಲ್ಲಾದರೂ ಎಣಿ ಸದೆ ಇದ್ದವಳಾದರೆ ಈ ದುರಾತ್ಮನು ಈಗಲೇ ನಾಶವಾಗಲಿ ಎಂದು ಶಪಿಸಿದ ಕ್ಷಣದ ಲ್ಲಿಯೇ ಅವನು ಕಾಡುಗಿಚ್ಚಿನಿಂದ ದಹಿಸಲ್ಪಟ್ಟ ಮರದಂತೆ ಇವಳ ಶಾಪಾಗ್ನಿಯಿಂದ ಸುಟ್ಟು ಬೂದಿಯಾದನು, ಆ ಬಳಿಕ ದಮಯಂತಿಯು ಅಲ್ಲಿಂದ ಹೊರಟು ಹುಲಿ ಕರಡಿ ಸಿಂಹ ಶರಭ ಮು೦ತಾದ ದುಷ್ಟ ಮೃಗಗಳಿಂದಲೂ ಕಳ್ಳರು ಬೇಡರು ಮೊದಲಾದ