ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ ನೆಯ ಭಾಗ 215 ದುಷ್ಟ ಜನಗಳಿಂದಲೂ ಕೂಡಿರುವ ನಾನಾ ವಿಧವಾದ ಧಾತುಗಳಿಂದ ಪ್ರಕಾಶಮಾನ ವಾಗಿ ಬಹಳ ಉದ್ದವಾದ ಶಿಖರಗಳೊಡನೆ ಕೂಡಿರುವ ದೊಡ್ಡ ದೊಡ್ಡ ಬೆಟ್ಟ ಗಳುಳ್ಳ ಮಹಾ ವನದಲ್ಲಿ ತನ್ನ ಗಂಡನನ್ನು ಹುಡುಕುತ್ತಾ ಹಂಬಲಿಸುತ್ತಾ ತುಸವಾದರೂ ಹೆದರದೆ ಬಂದು ಎತ್ತರವಾದ ಒಂದು ಕಲ್ಲಿನ ಮೇಲೆ ಕುಳಿತು...ಎಲೈ, ಪ್ರಾಣಪ್ರಿ ಯನೆ ! ನಳಜಗವರ್ತಿಯೇ ! ಇಂಧಾ ಸರೈನವಾದ ಅತಿಘೋರಾರಣ್ಯದಲ್ಲಿ ನಿನ್ನ ಸ್ನೇ ಹಂಬಲಿಸುತ್ತಿರುವ ನನ್ನನ್ನು ಏಕೆ ಹೀಗೆ ಉಪೇಕ್ಷೆ ಮಾಡುತ್ತೀ ? ಅತಿಕ್ರೂರವಾದ ಹುಲಿಯು ನನ್ನ ಬಳಿಗೆ ಬಂದು ಕೋರದಾಡೆಗಳಿಂದ ರೂಡಿರುವ ಭಯಂಕರವಾದ ಬಾಯಿಯನ್ನು ಬಿಟ್ಟು ನನ್ನನ್ನು ಹೆದರಿಸುತ್ತಿದೆ. ಈ ಸಮಯದಲ್ಲಿಯಾದರೂ ಬಂದು ನನ್ನನ್ನು ಕಾಪಾಡಬೇಡವೇ ? ನಿನಗಿಂತಲೂ ಪ್ರಿಯಳು ನನಗಿಲ್ಲವೆಂದು ನೀನು ಮೊದಲು ನನ್ನೊಡನೆ ಹೇಳುತ್ತಿದ್ದೆಯಲ್ಲಾ ! ಆ ಮಾತುಗಳೆಲ್ಲಾ ಈಗ ಸಟೆಯಾಗಬ ಹುದೇ ? ಎಂದು ಅರ್ಧ ವಸ್ತ್ರವನ್ನು ಉಟ್ಟು ಕೊಂಡು ನಳನನ್ನ ಕುರಿತು ಹಂಬಲಿ ಸುತ್ತಾ ಗುಂಪನ್ನು ಆಗಲಿರುವ ಜಿಂಕೆಯ ಹಾಗೆ ಮೊರೆಯಿಡುತ್ತಾ ಶೋಕದಿಂದ ಕೊರಗುತ್ತಾ ಈ ಪ್ರಕಾರ ಮರುದಿವಸಗಳನ್ನು ಕಳೆದು ಆ ಮೇಲೆ ಒಂದು ಪುಣ್ಯಾ ಶ್ರಮವನ್ನು ನೋಡಿ ಅಲ್ಲಿಗೆ ಹೋಗಿ ಬೃಗು ವಸಿಷ್ಠ ಅತ್ರಿ ಮುನಿಗಳಿಗೆ ಸಮಾನರಾಗಿ ಯ ಅನ್ನಾ ಹಾರವನ್ನು ಬಿಟ್ಟವರಾಗಿಯ ನೀರನ್ನೂ ಗಾಳಿಯನ್ನೂ ತರಗೆಲೆಗಳನ್ನೂ ತಿಂದುಕೊಂಡು ನಾರು ಸೀರೆಗಳನ್ನು ಟ್ಟು ಕೃಷ್ಣಾಜಿನವನ್ನು ಧರಿಸಿರುವ ಮುನೀಂದ್ರರ ಬಳಿಗೆ ಹೋಗಿ ನಮಸ್ಕಾರವನ್ನು ಮಾಡಿ ಕೈಮುಗಿದು ನಿಂತುಕೊಂಡಿರಲು ಆ ಮುನಿಗಳು ಇವಳನ್ನು ನೋಡಿ ಇವಳ ಸೌಂದರ್ಯಕ್ಕೂ ಸುಗುಣ ಸುಲಕ್ಷಣಗ ಳಿಗೂ ಬಹಳವಾಗಿ ಆಶ್ಚರ್ಯಪಟ್ಟು--ನೀನು ಯಾರಮ್ಮಾ? ಇಲ್ಲಿಗೆ ಏನು ನಿಮಿತ್ತವಾಗಿ ಒಂದೆ ? ನಮ್ಮಿಂದ ನಿನಗೆ ಆಗತಕ್ಕೆ ಕೆಲಸವೇನು ? ಎಂದು ಕೇಳಲು ತಾನು ಹುಟ್ಟಿ ದುದು ಮೊದಲುಗೊಂಡು ಆ ವರೆಗೆ ನಡೆದ ತನ್ನ ವೃತ್ತಾಂತಗಳನ್ನೆಲ್ಲಾ ಬಿನ್ನ ವಿನಿ ದಳು. ಆ ಮಹಾತ್ಮರು ಈಕೆಯನ್ನು ನೋಡಿ-ಎಲೈ, ತಾಯೇ 1 ನೀನು ಸ್ವಲ್ಪ ದಿವ ಸದೊಳಗೆ ನಿನ್ನ ಗಂಡನನ್ನು ಕಾಣುತ್ತೀಯೆ. ನಿನಗೆ ಇನ್ನು ಮೇಲೆ ಸಕಲ ಶ್ರೇಯ ಸುಗಳೂ ಉಂಟಾಗುತ್ತವೆ ನಿನ್ನ ಗಂಡನು ಹಗೆಗಳನ್ನು ಜಯಿಸಿ ತಿರಿಗಿ ರಾಜ ವನ್ನು ತೆಗೆದು ಕೊಂಡು ನಿನ್ನೊಡನೆ ಸುಖವಾಗಿರುವನು ಎಂದು ಹೇಳಿ ಅಂತರಾ ನರಾದರು ಆಮೇಲೆ ಅಲ್ಲಿಂದ ಹೊರಟು ಬರುತ್ತಾ ಆನೆ ಕುದುರೆಗಳಿಂದ ಕೂಡಿದವರಾಗಿ ಹಲನೀ ಎಂಬ ಒಂದು ನದಿಯನ್ನು ದಾಟುವ ಜನಗಳನ್ನು ನೋಡಿ ಆ ಗುಂಪ ನ್ನು ಸೇರಲು ಅವರಲ್ಲಿ ಧರ್ಮನಿಷ್ಠರಾದ ಕೆಲವರು ಎಲೈ, ತಾಯಿಯೇ ! ನೀನು ಯಾರು ? ನಿನ್ನ ವಿಚಾರವನ್ನು ನಿಜವಾಗಿ ಹೇಳು ಎನಲು ದಮಯಂತಿಯು--ನಾನು ವಿದರ್ಭದೇಶದ ಭೀಮರಾಜನ ಮಗಳು. ನನ್ನ ಹೆಸರು ದಮಯಂತಿಯು, ನನ್ನ ಗಂಡನಾದ ನಳನೆಂಬ ರಾಜಕಂಠೀರವನು ದೈವಸಂಕಲ್ಪದಿಂದ ನನ್ನನ್ನು ಅಗಲಿದ್ದಾನೆ ನಾನು ಅವನನ್ನು ಹುಡುಕುತ್ತಿದ್ದೇನೆ ಎಂದು ಹೇಳಿ ನೀವೇನಾದರೂ ಆ ಮಹಾ ಪುರು ಷನನ್ನು ಎಲ್ಲಿಯಾದರೂ ಕಂಡಿದ್ದೀರಾ ? ಎಂದು ಕೇಳಲು ತಾಯಿಯೇ ! ನಾವು