ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 KANARESE SELECTIONS—PART III ಎಲ್ಲಿಯೂ ಕಾಣಲಿಲ್ಲ ಅಂದರು. ಆಗ ದಮಯಂತಿಯು ನೀವೆಲ್ಲರೂ ಎಲ್ಲಿಗೆ ಹೋಗು ತಿದ್ದೀರಿ ? ನನಗೆ ತಿಳಿಸಿರಿ ಎಂದು ಕೇಳಿದುದಕ್ಕೆ ನಾವು ಸುಬಾಹು ರಾಜನಿಂದ ಆಳಲ್ಪ ಡುವ ಚೇದಿರಾಜ್ಯಕ್ಕೆ ಲಾಭಾರ್ಧವಾಗಿ ವ್ಯಾಪಾರಕ್ಕೆ ಹೋಗುತ್ತಿದ್ದೇವೆ ಎಂದು ಹೇಳು ದಮಯಂತಿಯು ಅವರ ಕೂಡಲೇ ಹೋಗುತ್ತಿರುವಾಗ ಆ ವರ್ತಕರು ಒಂದು ಕಾಡಿನಲ್ಲಿರುವ ಒಂದು ಕೊಳದ ಸಮೀಪದಲ್ಲಿ ತಮ್ಮ ಬೇಡಿಕೆಯನ್ನು ಬಡಿಸಿ ಶ್ರಮದಿಂದ ಸಕಲರೂ ಮಲಗಿರುವಾಗ ಸವಿಾಪದಲ್ಲಿರುವ ಬೆಟ್ಟದ ಕಿಬ್ಬರಿಯಿಂದ ಕಾಡಾನೆಗಳು ಗುಂಪು ಕೂಡಿ ಆ ಕೊಳದಲ್ಲಿ ನೀರು ಕುಡಿಯುವುದಕ್ಕೆ ಒರುತ್ತಾ ದಾರಿ ಯಲ್ಲಿ ಅಡ್ಡವಾಗಿ ಬಿದ್ದಿರುವ ವರ ಕರೆಲ್ಲರನ್ನೂ ಕಾಲುಗಳಿಂದ ತುಳಿದು ಕೊಂಡು ಬರಲು ಆ ವರ್ತಕರೆಲ್ಲರೂ ನಿದ್ದೆಯಿಂದ ಎದ್ದು ಕಾಡಾನೆಗಳ ಗುಂಪನ್ನು ನೋಡಿ ಕೆಲವರು ಬೆದರಿ ಬೆಚ್ಚಿ ಬೆಂಡಾಗಿ ಹೊದರುಗಳನ್ನು ಹೊಕ್ಕರು. ಇನ್ನು ಕೆಲವರು ಕೊಂಬನ ಗಾಯಗಳಿಂದ ಸೊಂಡಲಿನ ಪೆಟ್ಟುಗಳಿಂದಲೂ ಹತರಾದರು, ಮತ್ತು ಆ ವರ್ತಕರು ತಂದಿದ್ದ ಎತ್ತು ಕುದುರೆ ಕತ್ತೆ ಒಂಟೆಗಳೆಲ್ಲವೂ ಸಾಲು ದಾವಣಿಗಳನ್ನು ಕಿತ್ತುಕೊಂಡು ಬೆದರಿ ನಾನಾ ದಿಕ್ಕುಗಳಿಗೆ ಓಡಿಹೋದವು, ಈ ಪ್ರಕಾರದಿಂದ ಆನೆ ಗಳು ವರ್ತಕರನ್ನು ಹತಮಾಡಲು ಮಾರನೆಯ ದಿವಸ ಹತಶೇಷಗಾದ ವರ್ತಕರು ದುಃಖಪಡುತ್ತಾ ಅಲ್ಲಿಂದ ಹೊರಟರು. ಅವರೊಡನೆಯೇ ದಮಯಂತಿಯ ಹೊರಟು ಕೆಲವು ಪ್ರಯಾಣಗಳು ಕಳೆದು ಹೋದ ಮೇಲೆ ಚೇದಿದೇಶಾಧಿಪತಿಯಾಗಿರುವ ಸುಬಾಹುರಾಜನ ಪಟ್ಟಣ ವನ್ನು ಸೇರಿ ಒಂದು ದಿವಸ ಸಾಯಂಕಾಲದಲ್ಲಿ ಆ ಪಟ್ಟಣದ ಬಾಗಿಲನ್ನು ಹೊಕ್ಕು ರಾಜಬೀದಿಯಲ್ಲಿ ಹೋಗುವಾಗ ಅರೆವಾಸಿ ಬಟ್ಟೆಯನ್ನು ಉಟ್ಟು ಕ೦ದಿ ಕುಂದಿ ಬಳಲಿ ಬಾಯಾರಿ ಬಡವಾಗಿಯೂ ದೀನೆಯಾಗಿಯ ಕೆದರಿದ ಕೂದಲುಗಳುಳ್ಳವಳಾಗಿಯಣ ಒರುವ ದಮಯಂತಿಯನ್ನು ಸೆಜ್ಜೆಯ ಮೇಲೆ ಇರುವ ಸುಬಾಹುರಾಜನ ತಾಯಿಯು ನೋಡಿ--ಅವಳನ್ನು ಕರಕೊಂಡು ಬನ್ನಿ ಎಂದು ಗೌಡಿಯರನ್ನು ಕಳುಹಿಸಲು ಅವರು ದಮಯಂತಿಯನ್ನು ಕರಕೊಂಡು ಹೋಗಿ ಅರಸಿನ ತಾಯಿಯ ಬಳಿಯಲ್ಲಿ ನಿಲ್ಲಿಸಲು ಆಕೆಯು--ನೀನು ಯಾರಮ್ಮ ? ಎಂದು ಕೇಳಿದುದಕ್ಕೆ ನಾನು ಮನುಷ್ಯ ಸ್ತ್ರೀಯು. ಸೈಳೇ೦ದ್ರಿಯ ಜಾತಿಯಲ್ಲಿ ಹುಟ್ಟಿದವಳು, ನನ್ನ ಗಂಡನು ಅಗಲಿದುದರಿಂದ ನಾನು ಅರಣ್ಯಗಳಲ್ಲಿ ಹಣ್ಣು ಗಡ್ಡೆ ಮೊದಲಾದುವುಗಳನ್ನು ತಿನ್ನು ತಾ ಎಲ್ಲಿ ಸಾಯಂಕಾಲ ವಾದರೆ ಅಲ್ಲಿಯೇ ಮಲಗುತ್ತಾ ಗಂಡನನ್ನು ಹುಡುಕುತ್ತಾ ಹೀಗೆ ಬಂದೆನು. ಎಲ್ಲಿಯ ಗೊತ್ತು ಹತ್ತಲಿಲ್ಲ, ಆತನ ನೆಳಲಿನಂತೆ ಒಂದು ಕ್ಷಣವಾದರೂ ಆತನನ್ನು ಎಡಬಿಡದೆ ಇದ್ದ ನಾನು ಈಗ ಆತನನ್ನು ಕಾಣದೆ ಇಂಥಾ ದುಃಖಕ್ಕೆ ಒಳಗಾದೆನು ಎಂದು ಪಳಪಳನೆ ಕಣ್ಣುಗಳಲ್ಲಿ ನೀರನ್ನು ಸುರಿಸುತ್ತಾ ಅಳಲು ಆ ಅರಸಿನ ತಾಯಿಯ ಬಹಳ ದುಃಖಪಟ್ಟು - ಎಲೇ, ತಾಯಿಯೇ ! ಏನು ನಿಮಿತ್ತ ವೋ ಕಾಣೆ, ನಿನ್ನಲ್ಲಿ ನನಗೆ ಬಹಳ ಪ್ರೀತಿಯುಂಟಾಗಿದೆ. ನೀನು ನನ್ನ ಬಳಿಯಲ್ಲಿಯೇ ಇರು. ಬೇಹಿನವರನ್ನು ಕಳುಹಿಸಿ ನಿನ್ನ ಪತಿಯನ್ನು ನಾಲ್ಕು ದಿಕ್ಕುಗಳಲ್ಲಿಯೂ ಹುಡುಕಿಸು