ಕಧಾಸಂಗ್ರಹ-೩ನೆಯ ಭಾಗ 217 ತೇನೆ. ಒಂದು ವೇಳೆ ನಿನ್ನ ಗಂಡನು ಎಲ್ಲಾ ದೇಶಗಳಲ್ಲಿಯೂ ತಿರುಗಿ ತನಗೆ ತಾನೇ ಇಲ್ಲಿಗೆ ಬಂದರೆ ಮತ್ತೂ ಲೇಸು ಎಂದು ಹೇಳಲು ಅದಕ್ಕೆ ದಮಯಂತಿಯ. ಎಲೈ, ದೇವೀ ! ನನ್ನ ಸವಿಾಪದಲ್ಲಿ ಇರು ಎಂದು ನುಡಿದೆಯಲ್ಲಾ ! ನನ್ನ ಅಭಿಪ್ರಾ ಯವನ್ನು ಕೇಳು ತಿಂದು ಮಿಕ್ಕುದನ್ನು ತಿನ್ನುವುದೂ ಒಬ್ಬನ ಕಾಲು ತೊಳೆಯು ವದೂ ಇವು ಮೊದಲಾದ ಕೀಳು ಕೆಲಸಗಳನ್ನು ನಾನು ಎಂದಿಗೂ ಮಾಡುವವಳಲ್ಲ. ನನ್ನ ಗಂಡನನ್ನು ಹುಡುಕುವುದಕ್ಕೆ ಹೋಗುವ ಜನರೊಡನೆ ಮಾತ್ರ ನಾನು ಮಾತಾ ಡುವುದೇ ಹೊರತು ಮತ್ತೊಬ್ಬರ ಸಂಗಡ ಮಾತಾಡುವದಿಲ್ಲ, ಯಾರಾದರೂ ನನ್ನ ಮೇಲೆ ಕಣ್ಣಿಟ್ಟರೆ ನೀನು ಅವರನ್ನು ದಂಡಿಸಬೇಕು. ಹೀಗಾದರೆ ನಿನ್ನ ಬಳಿಯಲ್ಲಿಯೇ ಇರುವೆನು. ಇಲ್ಲದಿದ್ದರೆ ಇರಲಾರೆನು ಎನಲು ಅದನ್ನು ಆ ಅರಸಿನ ತಾಯಿಯು ಕೇಳಿ ಬಹಳ ಸಂತೋಷಪಟ್ಟು--ಎಲೇ, ಭಾಮಾಮಣಿಯೇ ! ನೀನು ಪತಿವ್ರತೆಯರ ಶಿಖಾಮಣಿಯಾಗಿದ್ದೀ, ನಿನ್ನ ಮನಸ್ಸಿನಲ್ಲಿ ಇದ್ದ ರೀತಿಯಲ್ಲಿಯೇ ನಾನು ನಡಿಸುತ್ತೇನೆ ನೀನು ಸ್ವಲ್ಪವೂ ಯೋಚನೆಯನ್ನು ಮಾಡಬೇಡ ಎಂದು ಹೇಳಿ ಸಮಾಧಾನ ಪಡಿಸಿ ತನ್ನ ಮಗಳಾದ ಸುನಂದೆಯನ್ನು ಕರೆದು--ಲೋಕಸುಂದರಿಯಾದ ಈ ಸೈಳೇಂದ್ರಿಯ ನೀನೂ ಒಂದೇ ಪ್ರಾಯದವರಾದುದರಿಂದ ಸ್ವಲ್ಪವಾದರೂ ಭೇದವಿಲ್ಲದೆ ಸಂಗಾತಿಗ ಳಾಗಿರಿ ಎಂದು ಕಟ್ಟು ಮಾಡಿ ಕಳುಹಿಸಲು ದಮಯಂತಿಯು ಆ ರಾಜಪುತ್ರಿಯಾದ ಸುನಂದೆಯೊಡನೆ ಕೂಡಿ ಯಾವಾಗಲೂ ತನ್ನ ಗಂಡನ ಚರಿತ್ರೆಗಳನ್ನು ಕಥೆಗಳಾಗಿ ಅವಳೊಡನೆ ಹೇಳಿಕೊಳ್ಳುತ್ತಾ ಇದ್ದಳು. ಇತ್ತಲಾ ನಳನು ದಮಯಂತಿಯನ್ನು ಬಿಟ್ಟು ಆಚೆಗೆ ನಡೆಯುವ ಸಮಯದಲ್ಲಿ ನಿಬಿಡವಾದ ಅರಣ್ಯ ಮಾರ್ಗದಲ್ಲಿ ಭಯಂಕರವಾದ ಕಾಡುಗಿಚ್ಚು ಸುತ್ತಿಕೊಂಡು ಕಾಡನ್ನು ಸುಡುತ್ತಿರುವಲ್ಲಿ ಅದರ ನಟ್ಟನಡುವೆ ಪುಣ್ಯಶ್ಲೋಕನಾದ ನಳಮಹಾರಾ ಜನೇ ! ನಳಮಹಾರಾಜನೇ ! ಬೇಗನೆ ಇಲ್ಲಿಗೆ ಬಾ ಎಂದು ತನ್ನ ಹೆಸರನ್ನು ಹಿಡಿದು ಕೂಗಿ ಕರೆಯುವ ಧ್ವನಿಯನ್ನು ಕೇಳಿ ಈತನು ದಯಾದ್ರ್ರಹೃದಯನಾಗಿ-ಹೆದರ ಬೇಡ ! ಹೆದರಬೇಡ ಇದೇ ಇದೋ ! ಬಂದೆನು ಎಂದು ನುಡಿಯುತ್ತಾ ಆ ಕಾಡುಗಿಚ್ಚಿನ ನಡುವೆ ಹೊಕ್ಕು ಅಲ್ಲಲ್ಲಿ ನೋಡುತ್ತಿರಲು ಒಂದು ತಾಸಿನಲ್ಲಿ ಸುತ್ತಿ ಕೊಂಡು ಬಿದ್ದಿರುವ ಒಂದು ಘಟಸರ್ಪವು ಅತಿಭಯದಿಂದ ಮೈಯನ್ನು ನಡುಗಿ ಸುತ್ತಾ-ಎಲೈ, ರಾಜೇಂದ್ರನೇ! ನಾನು ಕರ್ಕೊಟಕನೆಂಬ ಮಹಾ ನಾಗೇಂದ್ರನು. ಮೊದಲು ನಾನು ತಪೋನಿಧಿಯಾಗಿ ನಿರಪರಾಧಿಯಾಗಿರುವ ಒಬ್ಬ ಬ್ರಾಹ್ಮಣನಿಗೆ ಅಪ ಕಾರವನ್ನು ಮಾಡಿದುದರಿಂದ ಆತನು ಕೋಪಿಸಿಕೊಂಡು-ನಳನು ನಿನ್ನನ್ನು ನೋಡುವ ಪರಿಯಂತರವೂ ಆಚೆಗೆ ಹೋಗುವುದಕ್ಕೆ ಸಾಮಧವಿಲ್ಲದೆ ಕಲ್ಲಿನ ಹಾಗೆ ಇಲ್ಲಿಯೇ ಬಿದ್ದಿರು ಎಂದು ಶಪಿಸಿದನು. ಆದಕಾರಣ ನಾನು ಇಲ್ಲಿಂದ ಮೇಲಕ್ಕೆ ಏಳಲಾರನು. ನೀನು ನನ್ನನ್ನು ಈ ಕಾಡುಗಿಚ್ಚಿನಿಂದ ಆಚೆಗೆ ತೆಗೆದು ಕಾಪಾಡಿದರೆ ನಿನಗೆ ಹಿತವನ್ನು ಮಾಡುವೆನು, ನಾನು ಹಾವುಗಳೊಳಗೆ ಬಲ್ಲಿದನು, ಬೆಟ್ಟದಂತಿರುವ ನನ್ನ ಮೈಯನ್ನು ಸ್ವಲ್ಪವಾಗಿ ಮಾಡಿ ಕೊಂಡು ನಿನಗೆ ತೋರಿಸಿದ್ದೇನೆ. ನನ್ನನ್ನು ಬೆಂಕಿಯಿಂದ ಆಚೆಗೆ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೯
ಗೋಚರ