ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

218 KANARESE SELECTIONS-PART III ಎತ್ತಿ ಹಾಕು ಎಂದು ಒಂದು ಹೆಬ್ಬೆಟ್ಟಿನ ಗಾತ್ರ ಶರೀರಿಯಾಗಿ ಇರಲು ಆಗ ನಳನು ಆ ಕರ್ಕೊಟಕನನ್ನು ಕೈಯ್ಯಲ್ಲಿ ಇಟ್ಟುಕೊಂಡು ಕಾಡುಗಿಚ್ಚನ್ನು ದಾಟಿ ನಿರ್ಬಾಧಕ ವಾದ ಒಂದು ಪ್ರದೇಶದಲ್ಲಿ ಇರಿಸುವುದಕ್ಕೆ ಹೋದನು. ಆಗ ಕರ್ಕೊಟಕನು ನಳನು ನೋಡಿಎಲೈ, ಮಹಾತ್ಯ ನೇ ! ಇನ್ನೂ ಕೆಲವು ದೂರ ಎತ್ತಿ ಕೊಂಡು ಹತ್ತು ಹೆಜ್ಜೆಗಳನ್ನು ಎಣಿಸಿ ಅಲ್ಲಿ ನನ್ನನ್ನು ನಿಲ್ಲಿಸಿದರೆ ನಿನಗೆ ಶ್ರೇಯಸ್ಸುಂಟಾಗುತ್ತದೆ ಎನಲು ನಳನು ಅದೇ ಪ್ರಕಾರವಾಗಿ ಇರಿಸಿದ ಕಾಲ ದಲ್ಲಿ ಕರ್ಕೊಟಕನು ನಳನನ್ನು ಕಚ್ಚಲು ಆಗ ನಳನ ಸೌಂದರ್ಯವೆಲ್ಲಾ ಕೆಟ್ಟು ಹೋಗಿ ವಿಕಾರವಾದ ಮೈಯುಳ್ಳವನಾಗಲು ಆಶ್ಚರ್ಯಪಟ್ಟು ನಿಜರೂಪದಿಂದ ಹೊಳೆಯುತ್ತಿರುವ ಕರ್ಕೊಟಕವನ್ನು ನೋಡಿ ಮಾಡತಕ್ಕೆ ಕಾರ್ಯವು ತೋರದೆ ಸುಮ್ಮನೆ ನಿಂತು ಇದ್ದನು. ಆಗ ಕರ್ಕೊಟಕನು ನಳನಿಗೆ ಸಮಾಧಾನವನ್ನು ಮಾಡಿ ಎಲೈ, ರಾಜಶ್ರೇಷ್ಟನೇ 1 ಹೆಚ್ಚಾದ ನಿನ್ನ ಚೆಲುವನ್ನು ಲೋಕದ ಜನರು ಕಾಣದೆ ಇರುವುದಕ್ಕಾಗಿ ಹೀಗೆ ಮಾಡಿದೆನು, ನನ್ನ ನಂಜು ನಿನ್ನ ಮೈಯೊಳಗೆ ಎಷ್ಟು ದಿನಗಳವರೆಗೂ ಇರುವುದೋ ಅಷ್ಟು ದಿನ ಪರಿಯಂತರವೂ ಕಷ್ಟವನ್ನು ಅನುಭವಿಸಿ ಅದು ಹೋದ ಬಳಿಕ ಸುಖದಲ್ಲಿ ಇರುತ್ತಿ ಮತ್ತು ಹಾವು ಚೇಳು ಮೊದಲಾದ ವಿಷ ಜಂತುಗಳ ನಂಜಿನ ದೆಸೆಯಿಂದ ನಿನಗೆ ತೊಂದರೆಯು ಇಲ್ಲದೆ ಇರುವ ಹಾಗೆ ನನ್ನ ನಂಜನ್ನು ನಿನ್ನ ಶರೀರದಲ್ಲಿ ಇರಿಸಿ, ನಿನ್ನನ್ನು ಕಾಪಾಡಿದ್ದೇನೆ. ನಿನಗೆ ಹಗೆಗಳ ದೆಸೆಯಿಂದ ಭಯವಿಲ್ಲ, ನನ್ನ ಮಹತ್ವದಿಂದ ನಿನಗೆ ಬ್ರಹ್ಮಜ್ಞಾನವು ಬರುತ್ತಿದೆ. ನೀನು ಯುದ್ಧದಲ್ಲಿ ಎಲ್ಲಾ ಹಗೆಗಳನ್ನೂ ಕೊಂದು ಜಯಿಸು. ಈ ಹೊತ್ತು ಮೊದಲುಗೊಂಡು ನೀನು ಸೂತವಂಶದಲ್ಲಿ ಹುಟ್ಟಿದವನಾದ ಬಾಹುಕನು ಎಂಬ ಹೆಸ ರುಳ್ಳವನು ಎಂದು ಹೇಳಿಕೊಳ್ಳುತ್ತಾ ಅಯೋಧ್ಯಾಧಿಪತಿಯಾಗಿಯ ಮಹಾನುಭಾ ವನಾಗಿಯೂ ಅಕ್ಷ ಹೃದಯವನ್ನು ತಿಳಿದಿರುವವನಾಗಿಯೆ ಇರುವ ಋತುಪರ್ಣ ರಾಜನ ಬಳಿಗೆ ಹೋಗು. ನೀನು ಆತನಿಗೆ ಅಶ್ವ ಹೃದಯವಿದ್ದೆಯನ್ನು ಹೇಳಿ ಆತನಿಂದ ಅಕ್ಷ ಹೃದಯವನ್ನು ತಿಳಿದುಕೋ, ಆ ರಾಯನು ನಿನ್ನಲ್ಲಿ ಪ್ರೀತಿಯನ್ನು ಮಾಡಿ ನಿನಗೆ ಸಂಗಡಿಗನಾಗಿರುವನು. ನೀನು ಅಕ್ಷ ಹೃದಯವನ್ನು ಯಾವಾಗ ತಿಳಿಯುತ್ತೀಯೋ ಆಗಲೇ ನಿನ್ನ ಕ್ಷೇಶಗಳೆಲ್ಲವೂ ಹೋಗಿ ಶ್ರೇಯಸ್ಸನ್ನು ಪಡೆದು ರಾಜ್ಯಾಭಿಷಿಕ್ತನಾಗಿ ಹೆಂಡತಿ ಮಕ್ಕಳೊಡನೆ ಕೂಡಿ ಸುಖವಾಗಿರುವಿ. ಇದೆಲ್ಲವೂ ನಿಜವೆಂದು ನಂಬು. ಇದೋ ! ಈಗ ನಿನಗೆ ಎರಡು ಬಟ್ಟೆಗಳನ್ನು ಕೊಡುತ್ತೇನೆ. ಇವುಗಳನ್ನು ತೆಗೆದುಕೊ. ನಿನ್ನ ನಿಜಾಕಾರವು ಯಾವಾಗ ಬರಬೇಕೆಂದು ನೀನು ಎಣಿಸುತ್ತಿಯೋ ಆಗ ನನ್ನನ್ನು ನೆನೆದು ಇವುಗಳನ್ನು ಹೊದಿದು ಕೊಂಡರೆ ಮೊದಲಿನಂತೆ ಬಲು ಚೆಲುವನಾಗುತ್ತೀ ಎಂದು ನುಡಿದು ಆ ದಿವ್ಯವಸ್ಯವನ್ನು ಕೊಟ್ಟು ಅಂತರ್ಧಾನವಾಯಿತು. ಆ ಬಳಿಕ ನಳನು ಅಲ್ಲಿಂದ ಹೊರಟು ಹತ್ತನೆಯ ದಿವಸಕ್ಕೆ ಅಯೋಧ್ಯಾ ಪತಿ ಯಾದ ಋತುಪರ್ಣರಾಜನ ಸವಿಾಪಕ್ಕೆ ಬಂದು--ಎಲೈ, ಅರಸೇ ! ನಾನು ಬಾಹು ಕನೆಂಬ ಹೆಸರುಳ್ಳವನು ಕುದುರೆಗಳನ್ನು ತಿದ್ದುವುದರಲ್ಲಿ ನನಗೆ ಸಮಾನನಾದವನು