ಕಥಾಸಂಗ್ರಹ-೩ ನೆಯ ಭಾಗ 219 ಮೂರು ಲೋಕಗಳಲ್ಲಿಯೂ ಇಲ್ಲ. ಇದಲ್ಲದೆ ಒಂದೊಂದು ಕೆಲಸದಲ್ಲಿ ನನ್ನ ಆಲೋ ಚನೆಯನ್ನು ಕೇಳಿದರೆ ಗೊತ್ತಾಗಿ ಹೇಳುವೆನು ಇದಲ್ಲದೆ ಅವ್ರ ದಲ್ಲಿ ಹೆಚ್ಚಾಗಿ ರುಚಿ ಹುಟ್ಟುವ ಹಾಗೆ ಅಡಿಗೆ ಮಾಡುವುದನ್ನೂ ಬಲ್ಲೆನು ಮತ್ತು ಲೋಕದಲ್ಲಿ ಜನರಿಂದ ಮಾಡಕೂಡದ ಕೆಲಸಗಳನ್ನೆಲ್ಲಾ ಸುಲಭವಾಗಿ ಮಾಡುವುದಕ್ಕೆ ನನಗೆ ಸಾಮರ್ಥ್ಯ ವುಂಟು ಎಂದು ಹೇಳಿದನು ಋತುಪರ್ಣರಾಜನು ಆತನ ಮಾತುಗಳನ್ನು ಕೇಳಿ ಸಂತೋಷಪಟ್ಟು--ಎಲೈ, ಬಾಹುಕನೇ ! ನಿನಗೆ ಬೇಕಾದುದನ್ನು ಕೊಡುತ್ತೇನೆ. ನನ್ನ ಸಮ್ಮುಖದಲ್ಲಿಯೇ ಇದ್ದು ಕೊಂಡು ಇಷ್ಟು ಕೆಲಸಗಳನ್ನು ಮಾಡು ಕುದುರೆಗಳು ಯಾವಾಗಲೂ ಬಹು ವೇಗಗಮನದೊಡನೆ ಕೂಡಿರಬೇಕೆಂಬ ಬುದ್ದಿ ಯು ನನಗೆ ಹೆಚ್ಚಾಗಿರುವುದರಿಂದ ನೀನು ಅಶ್ವ ಪರೀಕ್ಷೆ ಯನ್ನು ಒಲ್ಲವನಾದಕಾರಣ ನನ್ನ ಕುದು ರೆಗಳಿಗೆಲ್ಲಾ ಒಡೆಯನಾಗಿ ಇರು, ನಿನಗೆ ತಿಂಗಳೊಂದಕ್ಕೆ ಹತ್ತು ಸಾವಿರ ಮೊಹರು ಳನ್ನು ಸಂಬಳವಾಗಿ ಕೊಡುತ್ತೇನೆ ಈ ವಾರ್ಸ್ಥೆಯನೂ ಈ ಜೀವಲನೂ ನನ್ನ ಅಶ್ವಾ ಧ್ಯಕ್ಷರು ಇವರು ನೀನು ಹೇಳಿದ ಮೇರೆಗೆ ನಡೆದುಕೊಳ್ಳುವ ಹಾಗೆ ಕಟ್ಟುಮಾಡು ತೇನೆ. ಇವರಿಬ್ಬರನ್ನೂ ನಿನ್ನ ಧೀನಮಾಡಿಕೊಂಡು ಸುಖದಿಂದಿರು ಅಂದನು. ಅನಂತರದಲ್ಲಿ ನಳನು ಋತುಪರ್ಣನ ಮಾತುಗಳನ್ನು ಕೈಕೊಂಡು ಅಯೋ ಧ್ಯಾಪಟ್ಟಣದಲ್ಲಿ ವಾರ್ಷ್ಠೆಯನೂ ಜೀವಲನೂ ತನ್ನನ್ನು ಅನುವರ್ತಿಸಿಕೊಂಡಿರಲು ಕುದುರೆಗಳನ್ನು ತಿದ್ದುತ್ತಾ ಪ್ರತಿ ದಿವಸದ ರಾತ್ರಿಯಲ್ಲಿಯ ಚೆಲುವೆಯಾಗಿಯ ಪತಿವ್ರತಾ ಶಿರೋಮಣಿಯಾಗಿಯೇ ಇರುವ ದಮಯಂತಿಯನ್ನು ನೆನೆನೆನೆದು ಮಹಾ ವ್ಯಥೆಯಿಂದ ಕಂಗೆಟ್ಟು ಆ ವನಿತಾಶಿರೋಮಣಿಯು ಮಂದಭಾಗ್ಯನಾದ ನನ್ನನ್ನು ನೆನೆಸುತ್ತಾ ಎಲ್ಲಿ ಮಲಗಿರುವಳೋ ” ಎಂಬ ಈ ಅರ್ಧವುಳ್ಳ ಸಂಸ್ಕೃತ ಶ್ಲೋಕವನ್ನು ಪ್ರತಿದಿವಸವೂ ಹೇಳುತ್ತಿರಲು ಒಂದು ದಿವಸ ಜೀವನು ಅದನ್ನು ಕೇಳಿ-ಎಲೈ, ಬಾಹುಕನೇ ! ನೀನು ದಿನದಿನವೂ ಈ ಶ್ಲೋಕವನ್ನೇ ಹೇಳುತ್ತಾ ಯಾರನ್ನು ನೆನಸಿ: ಕೊ೦ಡು ದುಃಖಪಡುತ್ತೀ ” ಎಂದು ಕೇಳು-ಎಲೈ, ಜೀವಲನೇ ! ಹೆಡ್ಡನಾದ ಒಬ್ಬ ಮನುಷ್ಯನಿಗುವನು ಆತನಿಗೆ ಸಂಪೂರ್ಣಾನುರಾಗವುಳ್ಳ ಒಬ್ಬಳು ಹೆಂಡತಿ ಇರುವಳು ಅವನಿಗೂ ಅವಳಲ್ಲಿ ಬಹು ಪ್ರೀತಿಯು೦ಟು ಆ ಪುರುಷನು ಒಂದು ಕಾರಣದಿಂದ ಮಂದಬುದ್ದಿಯಾಗಿ ಅವಳನ್ನು ಬಿಟ್ಟು ರಾತ್ರಿಯ ಹಗ ಶೋಕಾಗ್ನಿ ಬ೦ದ ತಪ್ಪ ನಾಗಿ ನಿರಂತರವೂ ಹೆಚ್ಚಾದ ದುಃಖವನ್ನು ಅನುಭವಿಸುತ್ತಾನೆ. ಆ ಪಾಪಾತ್ಮನನ್ನು ನೆನೆದು ನಾನು ವ್ಯಸನಪಡುತ್ತೇನೆ ಅವನು ನನಗೆ ಸಂಗಡಿಗನು ಎಂದು ಈ ಪ್ರಕಾರ ನಿಜ ಸ್ಥಿತಿಯನ್ನು ಮರೆಮಾಡಿ ಹೇಳಿ ತನ್ನನ್ನು ಒಬ್ಬರೂ ಅರಿಯದ ಹಾಗೆ ಗುಟ್ಟಾಗಿ ದಮಯಂತಿಯನ್ನು ನೆನೆದು ದುಃಖಪಡು ತ್ತಾ ಅಯೋಧ್ಯಾ ಪಟ್ಟಣದಲ್ಲಿಯೇ ಇದ್ದನು. ಇತ್ತಲಾ ನಳನು ಜೂಜಿನಿಂದ ತನ್ನ ರಾಜ್ಯವನ್ನೂ ಸಕಲ ವಸ್ತುಗಳನ್ನೂ ಕಳ ಕೊಂಡು ಹೆಂಡತಿಯೊಡನೆ ಕೂಡಿ ವನಕ್ಕೆ ಹೋಗಿ ಇಂಥಾ ತಾವಿನಲ್ಲಿ ಇದ್ದಾನೆ ಎಂಬ ಸಮಾಚಾರವನ್ನು ಕೇಳದೆ ಇರುವುದರಿಂದ ಭೀಮಭೂಪಾಲನು ವ್ಯಸನಾಕ್ರಾಂತನಾಗಿ ತನ ಮಗಳಾದ ದಮಯಂತಿಯನೂ ಅಳಿಯನಾದ ನಳನನ ಹುಡುಕಿಸಬೇಕೆಂದು
ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೧
ಗೋಚರ