ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 KANARESE SELECTIONS-PART III ಆಲೋಚಿಸಿ ಬ್ರಾಣ್ಮಣರನ್ನು ಕರತರಿಸಿ ಅವರಿಗೆ ಅನೇಕ ದ್ರವ್ಯಗಳನ್ನು ಕೊಟ್ಟು ನೀವು ಸರ್ವ ದೇಶಗಳಿಗೂ ಹೋಗಿ ನಳನನ್ನ ದಮಯಂತಿಯನ್ನೂ ಹುಡುಕಿ ಇಲ್ಲಿಗೆ ಕರಕೊಂಡು ಬನ್ನಿರಿ, ಕರಕೊಂಡು ಬಂದಂಥಾವರಿಗೆ ಪಟ್ಟಣಗಳಿಗೆ ಸಮಾನವಾದ ಗ್ರಾಮಗಳ ಸರ್ವಮಾನ್ಯವನ್ನೂ ಸಾವಿರ ಆಕಳುಗಳನ್ನೂ ಒಹಳ ದ್ರವ್ಯಗಳನ್ನೂ ಕೊಡುವೆನು. ಹಾಗೆ ಹುಡುಕುವಾಗ ನಳನನ್ನಾ ದರೂ ದಮಯಂತಿಯನ್ನಾದರೂ ನೋಡಿ ಕರತಂದವರಿಗೆ ಅಧವಾ ಕರೆದಾಗ ಅವರು ಇಲ್ಲಿಗೆ ಬಾರದೆ ಹೋದರೆ ಅವರ ಯೋಗಕ್ಷೇಮವನ್ನು ತಿಳಿದು ಹೇಳಿದಂಧಾವರಿಗೆ ಸಾವಿರ ಹಸುಗಳನ್ನೂ ಕೆಲವು ಮೊಹರಗಳನ್ನೂ ಕೊಡುತ್ತೇನೆ ಎಂದು ಹೇಳಲು ಬ್ರಾಹ್ಮಣರು ಅದಕ್ಕೆ ಸಂತೋಷ ಪಟ್ಟು ಹೊರಟು ದಿಕ್ಕು ದಿಕ್ಕಿಗೆ ಹೋಗಿ ಹುಡುಕುತ್ತಾ ಇದ್ದರು ಅವರಲ್ಲಿ ವಸು ದೇವನೆಂಬ ಬ್ರಾಹ್ಮಣನು ಅಲ್ಲಲ್ಲಿ ಹುಡುಕುತ್ತಾ ಪ್ರತಿದಿನವೂ ಪ್ರಯಾಣಗಳನ್ನು ಮಾಡುತ್ತಾ ಬಂದು ಸುಬಾಹುರಾಜನ ಪಟ್ಟಣವನ್ನು ಹೊಕ್ಕು ಅರಮನೆಯಲ್ಲಿ ಪ್ರಣಾ ಹವಾಚನೆಯನ್ನು ಮಾಡುವುದಕ್ಕೆ ಹೋಗುವ ಪುರೋಹಿತರ ಸಂಗಡ ತಾನೂ ಅತಃಪುರಕ್ಕೆ ಹೋಗಿ ಒಡವಾಗಿ ಗಂಡನ ಚಿ೦ತೆಯಿ೦ದಲೇ ಕರಗುತ್ತಾ ಸುನಂದೆಯೊ ಡನೆ ಕೂಡಿರುವ ದಮಯಂತಿಯನ್ನು ನೋಡಿ ಹೊಗೆಯ ತಂಡದಿಂದ ಮುಚ್ಚಿ ಲ್ಪಟ್ಟ ಬೆಂಕಿಯ ಉರಿಯ ಹಾಗೆ ಇರುವ ಮಲಿನವಾದ ಮೈಯ್ಯುಳ್ಳ ಆ ಹೆಂಗಸನ್ನು ಗುರುತುಗಳಿಂದಲೇ ದಮಯಂತಿಯೆಂದು ನಿಶ್ಚಯಿಸಿ ಸರಾಗಸುಂದರಿಯಾಗಿಯ ಜಗನ್ನೋಹನಾಕಾರಿಣಿಯಾಗಿಯ ತಾವರೆಯ ಎಸಳಿನ ಹಾಗಿರುವ ಕಣ್ಣುಗಳು ಇವಳಾಗಿಯ ಮನೆ ಧನ ಹೆಂಡತಿಯಾದ ರತಿಯ ಹಾಗೆ ಚಲುವೆಯಾಗಿಯ ಚಂದ್ರ ಕಳೆಯೋಪಾದಿಯಲ್ಲಿ ಹೊಳೆಯುವವಳಾಗಿಯೂ ಇದ್ದ ಈಕೆಯು ಈಗ ಗಂಡನ ವಿಯೋ ಗದಿಂದ ಕ೦ದಿ ಕುಂದಿದವಳಾಗಿ ರಾಹುವಿನಿಂದ ಹಿಡಿಯಲ್ಪಟ್ಟ ಚಂದ್ರಮಂಡಲವುಳ್ಳ ಹುಣ್ಣಿಮೆಯ ರಾತ್ರಿಯನ್ನು ಹೋಲುತ್ತಾಳೆ ಮತ್ತು ಭೀಮಭೂಪಾಲನೆಂಬ ಕೊಳದಲ್ಲಿ ಹುಟ್ಟಿ ದೈವವು ತನ್ನನ್ನು ಕಿತ್ತು ಹಾಕಲು ಕೆಸರಿನಿಂದ ಕೂಡಿ ಬಾಡಿರುವ ಕಮಲಲ ತೆಗೆ ಸರಿಯಾಗಿದ್ದಾಳೆ ಮತ್ತು ಅಲ್ಪ ವಾದ ಸೆಳವು ಉಳ್ಳ ಹೊಳೆಗೂ ಚಳಿಗಾಲದಲ್ಲಿ ದಳಗಳು ಉದುರಿ ಹೋಗಿರುವ ಕಮಲಗಳಿಗೂ ಆನೆಗಳಿಂದ ಕಲ ಕಲ್ಪಟ್ಟ ಕೊಳಗೆ ಳಿಗೂ ಸಮಾನವಾದ ವಿಕಾರಸ್ಥಿತಿಯುಳ್ಳವಳಾಗಿದ್ದಾಳೆ ಮೊದಲು ಸಕಲಾಭರಣಗ ಳನ್ನು ತೊಟ್ಟಿ ದಂಥಾವಳು ಈಗ ಆಭರಣಹೀನಳಾಗಿದ್ದಾಳೆ ಪಟ್ಟಿ ಪೀತಾಂಬರ ಗಳನ್ನು ಉಟ್ಟಿ ದಂಧಾವಳು ಈಗ ಮಾಸಿದ ಬಟ್ಟೆಯನ್ನು ಉಟ್ಟಿದ್ದಾಳೆ ಗಂಡನನ್ನು ತಿರಿಗಿ ನೋಡೇನು ಎಂಬ ಅಭಿಲಾಷೆಯಿ೦ದ ಶರೀರವನ್ನು ಧರಿಸಿದ್ದಾಳೆ, ಇಂಧಾ ದಮಯಂತಿಯನ್ನು ಬಿಟ್ಟು ನಳನು ದುಃಖದಿಂದ ಬದುಕಿ ಇದ್ದಾನೋ ಇಲ್ಲವೋ ತಿಳಿಯದು. ಇವಳನ್ನು ನೋಡಿದರೆ ನನ್ನ ೦ಥಾವನಿಗೂ ಹೃದಯವು ತಪಿಸುತ್ತದೆ. ಈಕೆಯು ಇಂಥಾ ದುಃಖದ ಕಡಲನ್ನು ದಾಟಿ ರೋಹಿಣಿಯು ಚಂದ್ರನೊಡನೆ ಕೂಡಿದ ತೆರದಿಂದ ನಳನೊಡನೆ ಯಾವಾಗ ಕೂಡುವಳೋ ತಿಳಿಯದು ನಳನು ಈಕೆಯೊಡನೆ ಕೂಡಿದರೆ ಹಗೆಗಳಿಂದ ಅಪಹೃತವಾದ ರಾಜ್ಯವು ತಿರಿಗಿ ಲಭಿಸಿದಂತೆ