222 KANARESE SELECTIONS-PART III ಸುದಾಮನ ಮಕ್ಕಳು, ಆತನು ನಿನ್ನ ತಾಯಿಯನ್ನು ಭೀಮಭೂಪಾಲಕನಿಗೂ ನನ್ನನ್ನು ಚೇದಿದೇಶಾಧೀಶನಾದ ವೀರಬಾಹುಕನಿಗೂ ಕೊಟ್ಟು ವಿವಾಹವನ್ನು ಮಾಡಿದನು. ನಿನ್ನ ತಾಯಿಯು ತವರುಮನೆಗೆ ಬಂದಾಗ ಚಿಕ್ಕತನದಲ್ಲಿ ನಿನ್ನನ್ನು ನೋಡಿದ್ದೆನು. ಆದು ದರಿಂದ ನೀನು ಈ ಮನೆಗೂ ನಿನ್ನ ತಂದೆಯ ಮನೆಗೂ ಭೇದವೆಣಿಸಬೇಡ. ಈ ಐಶ್ನ ರ್ಯವನ್ನೆಲ್ಲವನ್ನೂ ನಿನ್ನ ದನ್ನಾಗಿ ಎಣಿಸು ಅಂದಳು. ಆಗ ದಮಯಂತಿಯು ತನ್ನ ಚಿಕ್ಕಮ್ಮನಿಗೆ ನಮಸ್ಕಾರವನ್ನು ಮಾಡಿ-- ಎಲೆ, ತಾಯೆ ! ನನ್ನ ಸ್ವರೂಪವನ್ನು ತಿಳಿಯದಿದ್ದರೂ ಮಗಳೋಪಾದಿಯಲ್ಲಿ ನೀನು ಕಾಪಾಡಿದುದರಿಂದಲೇ ಇಷ್ಟು ದಿವಸಗಳ ವರೆಗೂ ನಿನ್ನ ಮನೆಯಲ್ಲಿ ಸುಖವಾಗಿ ಇದ್ದೆನು, ನನ್ನ ಮಗಳಾದ ಇಂದ್ರಸೇನೆಯು ತಾಯಿ ತಂದೆಗಳನ್ನು ಅಗಲಿ ಬಹುಕಾಲ ವಾಯಿತು. ಹೇಗಿರುವಳೋ ತಿಳಿಯಲಿಲ್ಲ, ನಿನ್ನ ಮನಸ್ಸಿನಲ್ಲಿ ನನಗೆ ಪ್ರಿಯವನ್ನು ಮಾಡಬೇಕೆಂದು ಎಣಿಸಿದರೆ ನನ್ನನ್ನು ಶೀಘ್ರದಲ್ಲಿ ವಿದರ್ಭ ನಗರಕ್ಕೆ ಕಳುಹಿಸಬೇಕೆ ನಲು ಆ ದೇವಿಯು--ಹಾಗೇ ಆಗಲಿ ಎಂದು ತನ್ನ ಮಗನಾದ ಸುಬಾಹುಕ ನನ್ನು ಕರೆತರಿಸಿ ಈ ಸಂಗತಿಯನ್ನು ಆತನಿಗೆ ತಿಳಿಸಿ ಕನ್ಯಾಮಣಿಯನ್ನು ಸಲ್ಲ ಕೈಯಲ್ಲಿ ಕೂರಿಸಿ ಅನೇಕ ದಾಸದಾಸೀ ಜನಗಳನ್ನೂ ಬೇಕಾದ ವಸ್ತುಗಳನ್ನೂ ಕೊಟ್ಟು ಅಂಗರಕ್ಷೆಗೆ ಚತುರ್ಬಲವನ್ನು ಜೊತೆಗೊಳಿಸಿ ಕಳುಹಿಸಲು ದಮಯಂ ತಿಯು ಶೀಘ್ರವಾಗಿ ತನ್ನ ತವರು ಮನೆಗೆ ಹೋಗಿ ತನ್ನ ಮಕ್ಕಳನ್ನೂ ತಾಯಿತಂದೆ ಗಳನ್ನೂ ನೆಂಟರಿಷ್ಟರನ್ನೂ ತನ್ನ ಸಂಗಾತಿಗಳನ್ನೂ ನೋಡಿ ಸಂತೋಷಪಟ್ಟಳು ಆ ಬಳಿಕ ಭೀಮಭೂಪಾಲಕನು ವಸುದೇವನಿಗೆ ಸಾವಿರ ಹಸುಗಳನ್ನೂ ಅನೇಕ ಧನಕ ನಕ ರತ್ನ ಗಳನ್ನೂ ಊರುಂಬಳಿಗಳನ್ನೂ ಕೊಟ್ಟನು. ಮಾರನೆಯ ದಿವಸ ದಮಯಂತಿಯು ತನ್ನ ತಾಯಿಯನ್ನು ಕುರಿತು ಎಲ್, ತಾಯೇ! ನಾನು ಪ್ರಾಣದೊಡನೆ ಇರಬೇಕೆಂದು ನೀನು ಎಣಿಸಿದರೆ ಬ್ರಾಹ್ಮಣರನ್ನು ಕಳುಹಿಸಿ ನಳನು ಇರುವ ಎಡೆಯನ್ನು ಹುಡುಕುವುದಕ್ಕೆ ಯತ್ನ ವನ್ನು ಮಾಡಿಸೆಂದು ನುಡಿಯಲು ಆಕೆಯು ಈ ಮಾತನ್ನು ಕೇಳಿ ಗದ್ದದ ಕರದೊಡನೆ ಕೂಡಿ ಬದಲು ಮಾತನ್ನು ಆಡಲಾರದೆ ಕಣ್ಣೀರುಗಳನ್ನು ಧಾರೆಯಾಗಿ ಸುರಿಸುತ್ತಾ ಭೀಮಭೂಪಾಲ ಕನ ಎಡೆಗೆ ಬಂದು- ಎಲೈ ರಾಜೇಂದ್ರನೇ! ನಿನ್ನ ಮಗಳು ತನ್ನ ಗಂಡನಾದ ನಳನನ್ನು ಅಗಲಿ ಇರುವುದರಿಂದ ಬಹಳ ದುಃಖಾಕ್ರಾಂತೆಯಾಗಿ ಚಿಂತಿಸುತ್ತಾ ಆತನನ್ನು ಹುಡು ಕುವುದಕ್ಕೆ ಜನರನ್ನು ಕಳುಹಿಸಬೇಕೆಂದು ಖಂಡಿತವಾಗಿ ಹೇಳುತ್ತಾಳೆ ಎನ್ನಲು ಭೀಮನರೇಂದ್ರನು ತನ್ನ ಬಳಿಯಲ್ಲಿ ಇರುವ ಬ್ರಾಹ್ಮಣರನ್ನು ಕರೆದು ನೀವೆಲ್ಲರೂ ಇಳೆಯ ಮೇಲೆ ತಿರುಗಿ ನಳನನ್ನು ಅವನಿರುವ ಎಡೆಯನ್ನು ಗೊತ್ತು ಮಾಡಿ ಕೊಂಡು ಬನ್ನಿರಿ ಎಂದು ಅಪ್ಪಣೆಯನ್ನು ಕೊಡಲು ಅವರು ದಮಯಂತಿಯ ಬಳಿಗೆ ಬಂದು ನಿನ್ನ ಪತಿಯನ್ನು ಹುಡುಕುವುದಕ್ಕೆ ಹೋಗುತ್ತೇವೆ ಎಂದು ಹೇಳಿದರು. ದಮಯಂತಿಯು ಆ ಬ್ರಾಹ್ಮಣರನ್ನು ನೋಡಿ--ನೀವು ದಿಕ್ಕು ದಿಕ್ಕುಗಳಿಗೆ ಹೋಗಿ ಹತ್ತು ಮಂದಿ ಕೂಡಿರುವ ಚಾವಡಿಗಳನ್ನು ಹೊಕ್ಕು--ನೀನು ಧರ್ಮವನ್ನು ತಿಳಿದವರಲ್ಲಿ ಪ್ರಸಿದ್ದ ನಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೪
ಗೋಚರ