ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 223 ಗಿಯ ವಿವೇಕಿಯಾಗಿ ಮಹಾ ಕುಲದಲ್ಲಿ ಹುಟ್ಟಿ ದಯಾಸಮೇತನಾಗಿಯ ಸದಾಚಾ ರಸಂಪನ್ನ ನಾಗಿಯ ಇದ್ದರೂ ಧೂರ್ತನೂ ಕೃಪಾರಹಿತನೂ ಆಗಿ ನಿನ್ನಲ್ಲಿಯೇ ತುಂಬಾ ತಿಯುಳ್ಳ ಧರ್ಮಪತ್ನಿ ಯನ್ನು ನಟ್ಟಿರುಳಲ್ಲಿ ನಿದ್ರೆ ಹೋಗುವಾಗ ವಂಚಿಸಿ ಉಟ್ಟ ಬಟ್ಟೆ ಯಲ್ಲಿ ಅರವಾಸಿ ಬಟ್ಟೆಯನ್ನು ಹರಿದುಕೊಂಡು ಆಕೆಯನ್ನು ಕಾಡಿನ ನಡುವೆ ಬಿಟ್ಟು ನೀನು ಎಲ್ಲಿಗೆ ಹೋದೆ ? ನಿನ್ನನ್ನು ಅಗಲಿದುದರಿಂದ ಕ್ಷೇಶಪಡುತ್ತಾ ಆಕೆಯು ನೀನೆಲ್ಲಿ ಬಿಟ್ಟು ಬಂದೆಯೋ ? ಅಲ್ಲಿಯೇ ಇದ್ದು ಕೊಂಡು ನೀನು ಎಂದಿಗೆ ಬರುವೆಯೋ ? ಎಂದು ದಾರಿಯನ್ನು ನೋಡುತ್ತಾ ಅರ್ಧ ವಸ್ತ್ರವನ್ನು ಉಟ್ಟು ಕೊಂಡು ದುಃಖದ ಕಿಚ್ಚಿನಿಂದ ಉರಿಯುವ ಮನಸ್ಸುಳ್ಳವಳಾಗಿ ಇದ್ದಾಳೆ ಹೆಂಡರಿಗೆ ಅನ್ನ ವಸ್ತ್ರಗಳನ್ನು ಕೊಟ್ಟು ಕಾಪಾಡುವುದೂ ಮತ್ತೊಬ್ಬರಿಂದ ತೊಂದರೆ ಬಾರದಹಾಗೆ ರಕ್ಷಿಸುವುದೂ ಗಂಡಂದಿ ರಿಗೆ ಧರ್ಮವು ಎಂಬ ಈ ಎರಡು ಗುಣಗಳನ್ನು ಬಿಟ್ಟು ನೀನು ಆಕೆಯನ್ನು ವಂಚಿಸಿ ಹೋದುದು ಅವಳ ನಿರ್ಭಾಗ್ಯತ್ವದ ದೋಷವೇ ಹೊರತಾಗಿ ನಿನ್ನ ತಪ್ಪಲ್ಲ ಇನ್ನಾದ ರೂ ಅವಳಲ್ಲಿ ದಯಮಾಡಿ ಬದಲು ಮಾತನ್ನು ಆಡೆಂದು ಹೇಳಿ ಆಗ ಅದನ್ನು ಕೇಳಿ ಯಾವನು ಬದಲು ಹೇಳುತ್ತಾನೋ ಆತನು ಐಶ್ವರ್ಯಸಂಪನ್ನನಾಗಿರುವುದನ್ನೂ ಬಡ ವನಾಗಿರುವುದನ್ನೂ ಅರ್ಧ ಕಾಮ ವಶನಾಗಿರುವುದನ್ನೂ ಚೆನ್ನಾಗಿ ತಿಳಿದುಕೊಂಡು ಒನ್ನಿರಿ, ಮತ್ತು ಬೆಂಕಿಯು ಬೆಣ್ಣೆಯನ್ನು ಕರಗಿಸುವ ಹಾಗೆ ನಿಮ್ಮ ಮಾತುಗಳು ಆತನ ಹೃದಯವನ್ನು ಕರಗಿಸಿ ನನ್ನಲ್ಲಿ ಪ್ರೀತಿಯನ್ನು ಹುಟ್ಟಿಸುವಂತೆ ಮಾಡಬೇಕು ಎಂದು ನುಡಿದಳು. ಅವರು--ಹಾಗೇ ಆಗಲಿ ಎಂದು ನಾನಾ ದೇಶಗಳಿಗೆ ಹೋಗಿ ಪಟ್ಟಣ ಗ್ರಾಮ ಹಳ್ಳಿ ಕೊಪ್ಪಲು ಗಿರಿ ಬೆಟ್ಟ ಘಟ್ಟಗಳು ಪ್ರಣಾಶ್ರಮಗಳು ಮಂಟಪ ಸತ್ರ ದೇವಸ್ಥಾನ ರಾಜಸಭೆ ಬ್ರಾಹ್ಮಣರ ಗೋಷ್ಠಿ ಇವೇ ಮೊದಲಾದ ಎಡೆಗಳಲ್ಲಿ ನೆರೆದ ಜನರ ಸಮೂಹದಲ್ಲಿ ದಮಯಂತಿಯು ಹೇಳಿದ ವಾಕ್ಯಗಳನ್ನು ಹೇಳುತ್ತಾ ಆ ಮಾತಿಗೆ ಪ್ರತ್ಯುತ್ತರವನ್ನು ಪಡೆಯದೆ ತಿರಿಗಿ ವಿದರ್ಭ ಪಟ್ಟಣಕ್ಕೆ ಬಂದು ದಮಯಂ ತಿಗೆ ತಿಳಿಸಿ ತಮ್ಮ ತಮ್ಮ ಮನೆಗಳಿಗೆ ಹೋದರು. ಮತ್ತು ಕೆಲವು ದಿವಸದ ಮೇಲೆ ಪರ್ಣಾ ದನೆಂಬ ಒಬ್ಬ ಬ್ರಾಹ್ಮಣನು ದಮ ಯಂತಿಯ ಹತ್ತರಕ್ಕೆ ಒಂದು-ಎಲ್‌, ತಾಯೇ ! ನಾನು ಎಲ್ಲಾ ದೇಶಗಳನ್ನು ರಾತ್ರಿಯ ಹಗಲೂ ತಿರುಗಿ ನಳನನ್ನು ಹುಡುಕುತ್ತಾ ಕಡೆಗೆ ಅಯೋಧ್ಯಾ ಪಟ್ಟಣಕ್ಕೆ ಹೋಗಿ ಅಲ್ಲಿಗೆ ಅರಸನಾದ ಋತುಪರ್ಣನ ಓಲಗದ ಚಾವಡಿಗೆ ಹೋಗಿ ನೀನು ಮೊದಲು ನನಗೆ ಹೇಳಿದ ವಾಕ್ಯಗಳೆಲ್ಲವನ್ನೂ ನುಡಿಯಲು ಎಲ್ಲರೂ ಅದನ್ನು ಕೇಳಿ ಬದಲುತ್ತರವನ್ನು ಕೊಡದೆ ಸುಮ್ಮನೆ ಇದ್ದರು. ಆ ಚಾವಡಿಯಲ್ಲಿ ಇದ್ದ ಋತುಪರ್ ರಾಜನ ಸಾರಥಿಯಾಗಿ ಅಡಿಗೆ ಮಾಡುವುದರಲ್ಲಿಯ ಕುದುರೆಗಳನ್ನು ಚುರುಕಾಗಿ ನಡೆಸುವುದರಲ್ಲಿಯ ಬಹಳ ಗಟ್ಟಿಗನಾದ ಬಾಹುಕನೆಂಬ ಹೆಸರುಳ್ಳ ಒಬ್ಬ ಪುರುಷನು ಎದ್ದು ಹೊರಗೆ ಬಂದು ನನ್ನನ್ನು ಕರೆದು ಏಕಾಂತದಲ್ಲಿ ಹೆಚ್ಚಿದ ಅಳಲಿನಿಂದ ನಿಟ್ಟುಸು ರುಗಳನ್ನು ಬಿಡುತ್ತಾ ಕಣ್ಣೀರನ್ನು ಸುರಿಸುತ್ತಾ ಮೊದಲು ನನ್ನ ಕುಶಲವನ್ನು ಕೇಳಿ ಆ ಮೇಲೆ ಎಲೆ, ಬ್ರಾಹ್ಮಣನೆ ! ಲೋಕದಲ್ಲಿ ಕಷ್ಟ ಕಾಲವು ಬಂದಾಗ್ಗೆ ಪಾತಿವ್ರತ್ಯ