224 KANARESE SELECTIONS-PART III ಎ ಕಿ. ಧರ್ಮವುಳ್ಳ ಕುಲಸ್ತ್ರೀಯರು ತಮ್ಮನ್ನು ತಾವೇ ಕಾಪಾಡಿಕೊಂಡು ಸ್ವರ ಕ್ಕೆ ಹೋಗು ವರು ಮತ್ತು ಗಂಡನನ್ನು ಅಗಲಿದ ಪತಿವ್ರತೆಯರು ತಮ್ಮ ಒಳ್ಳೆಯ ನಡತೆ ಎಂಬ ಅಂಗಿಯಿಂದ ರಕ್ಷಿತರಾಗಿ ಪ್ರಾಣಗಳನ್ನು ತಾಳಿಕೊಂಡಿರುವರೇ `ಹೊರತು ಗಂಡಂದಿ ರನ್ನು ಹೀಯಾಳಿಸುವುದಿಲ್ಲ, ಅವನು ಕಾಲಗತಿಯಿಂದ ರಾಜ್ಯ ಕೋಶಗಳೇ ಮೊದಲಾದ ಸಕಲ ಸಂಪತ್ತುಗಳನ್ನೂ ಕಳಕೊಂಡು ದುಃಖದಿಂದ ಬುದ್ದಿ ಕೊಟ್ಟು ಮುಂದೋರದೆ ಮಢನಾಗಿ ಹುಚ್ಚನಂತೆ ಕಾಡಿನಲ್ಲಿ ಬಿಟ್ಟು ಹೋದನು. ಆದರೂ ಅವನಲ್ಲಿ ಪತಿವ್ರತೆ ಯಾದ ನೀನು ಕೋಪವನ್ನು ಮಾಡುವುದು ಧರ್ಮವಲ್ಲವು. ಅವನು ಹೊದೆದಿದ್ದ ಬಟ್ಟೆಯನ್ನು ಹಕ್ಕಿಯು ಎತ್ತಿ ಕೊಂಡು ಹೋದುದರಿಂದ ತನ್ನ ಮಾನವನ್ನು ಕಾಪಾಡಿ ಕೊಳ್ಳುವುದಕ್ಕೋಸ್ಕರ ಅರ್ಧವಾಗಿ ಒಟ್ಟಿಯನ್ನು ಹರಿದುಕೊಂಡು ಹೋದಮಾತ್ರಕ್ಕೆ ತಪ್ಪನ್ನೆಣಿಸಿ ಹೀಗೆ ಆತನ ಮೇಲೆ ಕೋಪಿಸಬಹುದೇ ? ಕುಲಸ್ತ್ರೀಯರಿಗೆ ಸಕಲ ಧರವೂ ಗಂಡನಿಂದಲೇ ಎಂದು ನೀನು ತಿಳಿದು ಆತನು ನಿನ್ನನ್ನು ಕಾಪಾಡಿದರೂ ಕಾಪಾಡದೆ ಹೋದರೂ ರಾಜ್ಯ ಹೀನನಾಗಿ ಸಕಲೈಶ್ವರಗಳನ್ನೂ ತೊರೆದು ಕ್ಷೇಶಗಳನ್ನು ಅನುಭವಿ ಸುತ್ತಾ ನಿನ್ನಲ್ಲಿ ತಾನು ಮಾಡಿದ ತಪ್ಪುಗಳನ್ನು ನೆನೆದು ನೆನೆದು ತನ್ನೊ ಳಗೆ ತಾನೇ ಕರಗುವಂಧಾವನ ಮೇಲೆ ತಪ್ಪೆಣಿಸಬಹುದೇ ? ಎಂದು ನುಡಿದನು, ಆ ಮೇಲೆ ಇದೆಲ್ಲ ವನ್ನು ನಿನಗೆ ತಿಳಿಸಿದ್ದೇನೆ. ಇನ್ನು ನೀನು ಈ ವಿಷಯವನ್ನು ಅರಸಿಗೆ ಅರಿಕೆ ಮಾಡಿ ನಿನ್ನ ಮನಸ್ಸಿಗೆ ತೋರಿದ ರೀತಿಯಲ್ಲಿ ನಡಿಸು ಅಂದನು. ಆಗ ದಮಯಂತಿಯು ತನ್ನ ತಾಯಿಯ ಸವಿಾಪಕ್ಕೆ ಹೋಗಿ ಈ ಸುದ್ದಿಯನ್ನೆಲ್ಲಾ ಹೇಳಿ ಪರ್ಣಾದನೆಂಬ ವಿಪ್ರನಿಗೆ ವಿವಿಧ ವಿತ್ತಾದಿಗಳನ್ನು ಕೊಡಿಸಿ-ನಳನು ಇಲ್ಲಿಗೆ ಬರುವಾಗ ನಿನಗೆ ಬೇಕಾದ ಬಹುಮಾನಗಳನ್ನು ಮಾಡಿಸುತ್ತೇನೆ. ಗಂಡನಗಲಿದ ನನಗೆ ಗಂಡನೊಡನೆ ಕೂಡುವಂತೆ ಉಪಕಾರವನ್ನು ಮಾಡಿದೆ. ಇಂಧಾ ಉಪಕಾರವನ್ನು ಮಾಡುವವರು ಯಾರು ? ಎಂದು ಹಿತವಾದ ನುಡಿಗಳನ್ನು ನುಡಿದು ಕಳುಹಿಸಲು ಆತನು--ನಿನಗೆ ಶುಭವಾ. 'ಗಲಿ ! ಎಂದು ಆಶೀದ್ವಾದವನ್ನು ಮಾಡಿ ಕೃತಕೃತ್ಯನಾಗಿ ತನ್ನ ಮನೆಗೆ ಹೋದನು ತರುವಾಯ ದಮಯಂತಿಯು ತನ್ನ ತಾಯಿಯನ್ನು ಕುರಿತು-ಎಲ್, ತಾಯೇ ! ಈಗ ನಾನು ಒಂದು ಆಲೋಚನೆಯನ್ನು ಹೇಳುತ್ತೇನೆ. ನಾನು ಚೆನ್ನಾಗಿ ಒದುಕಬೇಕೆಂಬ ಆಶೆಯು ನಿನಗೆ ಇದ್ದರೆ ನಾನು ಹೇಳುವ ಈ ಮಾತನ್ನು ನನ್ನ ತಂದೆಗೆ ಹೇಳದೆ ನಿನ್ನ ಮನಸ್ಸಿನಲ್ಲಿಯೇ ಇರಿಸಿಕೊಂಡಿರು, ಮೊದಲು ನನ್ನನ್ನು ನಿಮ್ಮೊಡನೆ ಕೂಡಿಸಿದ ವಸುದೇವನೆಂಬ ಬ್ರಾಹ್ಮಣನನ್ನು ಅಯೋಧ್ಯಾ ಪಟ್ಟಣದಲ್ಲಿ ಋತುಪಣ್ಣ ರಾಜನ ಸನ್ನಿ ಧಾನದಲ್ಲಿರುವ ನನ್ನ ಗಂಡನನ್ನು ಕರತರಿಸುವುದಕ್ಕೆ ಕಳುಹಿಸಬೇಕು ಎಂದು ಆತನನ್ನು ಕರತರಿಸಿ ತನ್ನ ತಾಯಿ ಕೇಳುತ್ತಿರಲು ಆತನನ್ನು ಕುರಿತು ಎಲೈ, ಬ್ರಾಹ್ಮಣೋತ್ತಮನೇ ! ನೀನು ಅಯೋಧ್ಯಾ ಪತಿಯಾದ ಋತುಪಣ್ಣರಾಜನ ಸನ್ನಿಧಾನಕ್ಕೆ ಹೋಗಿ--ನಳನು ಜೂಜಿನಲ್ಲಿ ಪರಾಜಿತನಾಗಿ ಎಲ್ಲೋ ಹೊರಟು ಹೋದನು. ಎಲ್ಲಿ ಹುಡುಕಿದರೂ ಕಾಣಿಸದೆ ಇರುವುದರಿಂದ ಆ ದಮಯಂತಿಗೆ ತಿರಿಗಿ ಸ್ವಯಂವರವನ್ನು ಮಾಡುತ್ತಲಿದ್ದಾರೆ. ಸಮಸ್ತರಾದ ಅರಸುಗಳೂ ಕುಂಡಿನ ನಗ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೬
ಗೋಚರ