226 KANARESE SELECTIONS-PART III ಕೃಶಾ೦ಗಗಳಾಗಿಯ ದಾರಿಯನ್ನು ನಡೆಯುವುದಕ್ಕೆ ತಕ್ಕವುಗಳಾಗಿಯ ವೇಗ ದಿಂದ ವಾಯುವನ್ನು ಜಯಿಸುವಂಧವ್ರ ಗಳಾಗಿಯೂ ತೇಜೋಬಲ ಸಮೇತಗಳಾ ಗಿಯ ಇರುವಂಧ ಮತ್ತು ಉತ್ತಮ ಲಕ್ಷಣಗಳು ಗಂಭೀರಧ್ವನಿ ವಿಶಾಲವಾದ ಎದೆ ಮಂಗಳಕರವಾಗಿರುವ ಹತ್ತು ಸುಳಿಗಳು ಇವುಗಳಿಂದ ಪ್ರಕಾಶಮಾನಗಳಾ ಗಿಯ ಇರುವ ಸಿಂಧುದೇಶದಲ್ಲಿ ಹುಟ್ಟಿ ದಂಧ ಚೆನ್ನಾಗಿ ತಿದ್ದಿದ ಕುದುರೆಗಳನ್ನು ತರಲು ಅವುಗಳನ್ನು ನೋಡಿ ಋತುಪರ್ಣನು ಸ್ವಲ್ಪವಾಗಿ ಕೋಪಿಸಿಕೊಂಡು ಎಲೈ, ಸಾರಧಿಯೇ ! ಬಡವಾಗಿ ಅಲ್ಪ ಬಲವುಳ್ಳ ಇಂಧಾ ಕುದುರೆಗಳನ್ನು ಏಕೆ ತಂದೆ ? ನಾವು ಬಹು ಬೇಗ ಹೋಗಬೇಕಲ್ಲವೇ ?” ಎಳೆಯಲಾರದ ಇಂಥಾ ಬಡಕು ದುರೆಗಳನ್ನು ನಮ್ಮ ತೆರಿಗೆ ಕಟ್ಟಿದರೆ ಒಂದೇ ದಿನದಲ್ಲಿ ಬಹು ದೂರವನ್ನು ಹೇಗೆ ಹೋದೇವು ? ಅಂದನು. ಬಾಹುಕನು ಆತನನ್ನು ಕುರಿತು ನಿನ್ನಲ್ಲಿ ನಾನು ಮಾಡಿದ ಪ್ರತಿಜ್ಞೆಯನ್ನು ಇವುಗಳು ನೆರವೇರಿಸುವುವೆಂದು ನನ್ನ ಬುದ್ದಿಗೆ ತಿಳಿದು ನಾನು ತಂದು ಇದ್ದೇನೆ, ನಿನ್ನ ಮನಸ್ಸಿಗೆ ಇವು ಬೇಡವಾದರೆ ನಿನಗೆ ಬೇಕಾದ ಕುದುರೆಗಳನ್ನು ತರಿಸಿ ತೆರಿಗೆ ಕಟ್ಟಿಸು ಎನಲು ಆತನು ಒಳ್ಳೆಯ ಕುಲದಲ್ಲಿ ಹುಟ್ಟಿ ಅತಿವೇಗಶಾಲಿ ಗಳಾದ ನಾಲ್ಕು ಕುದುರೆಗಳನ್ನು ತೆರಿಗೆ ಕಟ್ಟಿಸಿ ರಥದ ಮೇಲೆ ಏರಲು ಅವುಗಳು ಆ ರಥವನ್ನು ಎಳೆಯಲಾರದೆ ಮುಗ್ಗರಿಸಲು ಅವುಗಳನ್ನು ಬಿಚ್ಚಿಸಿ ಲಾಯಕ್ಕೆ ಕಳು ಹಿಸಿ ನಳನು ತಂದಿದ್ದ ಕುದುರೆಗಳನ್ನು ತೇರಿಗೆ ಹೂಡಿಸಿದ ಮೇಲೆ ನಳನು ಕುದುರೆಗಳ ಕಡಿವಾಣಗಳನ್ನು ಬಿಗಿದು ಹಿಡಿದು ಕುತ್ತಿಗೆಗಳನ್ನು ತಟ್ಟಿ ಲಾಲಿಸಿ ತನ್ನ ಸಾರಧಿ ಯಾದ ವಾಷೆ Fಯನನು ಆ ತೇರಿನ ಮೇಲೆ ಕೂಡಿಸಿಕೊಂಡು ನಡಿಸಲು ತೇಜೋ ಬಲಗಳಿಂದ ಕೂಡಿದ ಆ ಕುದುರೆಗಳು ಆಕಾಶಮಾರ್ಗದಲ್ಲಿಯೇ ಅತಿವೇಗದಿಂದ ನಡೆ ಯಲು ಋತುಪರ್ಣನು ಆಶ್ಚರ್ಯಭುತನಾಗಿ ನೋಡುತ್ತಿದ್ದನು. ಆಗ ವಾರ್ಷ್ಠೆಯನು ರಥವೇಗವನ್ನೂ ಬಾಹುಕನ ಅಶ್ವ ಹೃದಯ ಜ್ಞಾನವನ್ನೂ ಆತನು ಕುದುರೆಗಳನ್ನು ನಡಿಸುವ ರೀತಿಯನ್ನೂ ನೋಡಿ--ಈ ಬಾಹುಕನು ಇ೦ದ್ರ ಸಾರಥಿಯಾದ ಮಾತಲಿಯೋ ? ಅಲ್ಲದಿದ್ದರೆ ಮನುಷ್ಯನ ಆಕಾರವನ್ನು ತಾಳಿ ಬಂದಿ ರುವ ಕುದುರೆಗಳ ತತ್ವಜ್ಞಾನವುಳ್ಳ ಶಾಲಿಹೋತ್ರನೋ ? ಅಧವಾ ಈ ವೇಷದಿಂದ ಬಂದಿರುವ ಸಕಲ ಶತ್ರು ಸಂಹಾರಕನಾದ ನಳನೋ ? ಅಲ್ಲ ದಿದ್ದರೆ ನಳನ ಬಳಿಯಲ್ಲಿ ಅಶ್ವಹೃದಯ ಜ್ಞಾನವಿದ್ದೆಯನ್ನು ತಿಳಿದವನೋ ? ಸುಮಾರು ನೋಡಿದರೆ ಬಹುತರ ಪುಣ್ಯಶ್ಲೋಕನಾದ ನಳನೇ ಎಂದು ತೋರುತ್ತದೆ ಇವನಿಗೂ ನಳನಿಗೂ ಒಂದೇ ಪ್ರಾಯವಾಗಿದೆ. ರೂಪದಲ್ಲಿ ಮಾತ್ರ ಭೇದವಾಗಿದೆ. ಆದರೂ ನನ್ನ ಮನಸ್ಸಿಗಂತೂ ನಳನೇ ಎಂದು ತೋರುತ್ತದೆ ಎಂದು ಯೋಚಿಸಿದನು, ಈ ಪ್ರಕಾರದಿಂದ ಹೋಗು ವಂಥಾ ತೇರು ಹೊಳೆಗಳನ್ನೂ ಬೆಟ್ಟ ಗುಡ್ಡಗಳನ್ನೂ ಕಾಡುಗಳನ್ನೂ ಕೊಳಗಳನ್ನೂ ದಾಟಿ ಗಾಳಿಯ ಚ೦ದದಿಂದ ಬಹಳ ವೇಗವಾಗಿ ಹೋಗುತ್ತಿರಲು ಆ ಸಮಯದಲ್ಲಿ ಗು ತುಪರ್ಣನು ತನ್ನ ಉತ್ತರೀಯವು ಜಾರಿ ಭೂಮಿಯಲ್ಲಿ ಬಿದ್ದುದನ್ನು ನೋಡಿ ಎಲೈ, ಸಾರಥಿಯೇ ! ನಾನು ಹೊದೆದಿದ್ದ ಶಲ್ಯವು ಜಾರಿ ಬಿದ್ದಿತು, ವಾರ್ಷ್ಠಯನು
ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೮
ಗೋಚರ