ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 227 ಹೋಗಿ ಅದನ್ನು ತೆಗೆದುಕೊಂಡು ಬರುವ ಪರಿಯಂತರವೂ ಇಲ್ಲಿ ತೇರನ್ನು ಕ್ಷಣಮಾತ್ರ ನಿಲ್ಲಿಸೆನಲು ನಳನು ಆತನನ್ನು ನೋಡಿ-ಎಲೈ, ರಾಜೇಂದ್ರನೇ ! ನೀನು ಹೊದೆದಿದ್ದ ಶಲ್ಯವು ಬಿದ್ದ ಎಡೆಗೆ ಇಲ್ಲಿಗೂ ಐದು ಹರದಾರಿಯ ದೂರ ಉಂಟು. ಅದನ್ನು ತೆಗೆದುಕೊಂಡು ಬರುವುದಕ್ಕೆ ಆಗುವುದಿಲ್ಲ ಅಂದನು. ಅಗ ಋತುಪರ್ಣನು ಸಂತೋ ಷಪಟ್ಟು ಬಹಳ ಹಣ್ಣುಗಳಿಂದ ಕೂಡಿರುವ ಒಂದು ತಾರೆಯ ಮರವನ್ನು ನೋಡಿ ನಳನನ್ನು ಕುರಿತು ಎಲೈ, ಬಾಹುಕನೇ ? ಎಣಿಸುವುದರಲ್ಲಿ ನನಗೆ ಒಹಳ ಸಾಮರ್ಥ್ಯ ಉಂಟು. ಲೋಕದಲ್ಲಿ ಸಕಲಜನರೂ ಸ್ವಲ್ಪವಾದ ಲೆಕ್ಕವನ್ನು ಅರಿತಿರುವರೇ ಹೊರ ತಾಗಿ ಸಂಪೂರ್ಣವಾಗಿ ತಿಳಿದವರಲ್ಲ. ಈ ಗಣಿತವಿದ್ಯೆಯು ನನ್ನಲ್ಲಿ ಉಂಟು, ಅದನ್ನು ನಿನಗೆ ಹೇಳುತ್ತೇನೆ ; ಕೇಳು, ಈ ತಾರೆಯ ಮರದಲ್ಲಿ ಇರುವ ಎಲೆ ಕಾಯಿಗಳ ಲೆಕ್ಕವನ್ನು ಹೇಳುವೆನು ಈ ಮರದಲ್ಲಿ ಉದುರಿರುವ ಎಳೆ ಕಾಯಿಗಳ ಲೆಕ್ಕವನ್ನು ತಿಳಿಸುವೆನು ; ಕೇಳು. ಆದರೆ ನೀನು ಅವೆಲ್ಲವನ್ನೂ ಲೆಕ್ಕ ಮಾಡಿ ಪರೀಕ್ಷಿಸುವುದಕ್ಕೆ ಸಾಮರ್ಥ್ಯವಿಲ್ಲದೆ ಇರುವದರಿಂದ ಈ ಎರಡು ಕೊಂಬೆಗಳಲ್ಲಿ ಮಾತ್ರ ಎರಡು ಸಾವಿ ರದ ತೊಂಭತ್ತೈದು ಕಾಯಿಗಳಿವೆ ಎನಲು ಆ ನಳನು ರಧದಿಂದ ಇಳಿದು ಮರವನ್ನು ಏರಿ ಕೊಂಬೆಗಳೆರಡರ ಫಲಗಳನ್ನೂ ಲೆಕ್ಕ ಮಾಡಿ ಆಶ್ಚರ್ಯಪಟ್ಟು ಋ ತುಪರ್ಣನನ್ನು ನೋಡಿ--ನೀನು ಎಷ್ಟು ಹಣ್ಣುಗಳಿವೆ ಎಂದು ಹೇಳಿದೆಯೋ ಅಷ್ಟೇ ಹಣ್ಣುಗಳು ಅವೆ, ಯಾವ ವಿದ್ಯೆಯಿಂದ ನಿನಗೆ ಈ ಮಹಿಮೆಯು ಉಂಟಾಯಿತೋ ಆ ವಿದ್ಯೆ ಯನ್ನು ನನಗೆ ತಿಳಿಸು. ನನ್ನಲ್ಲಿರುವ ಅಶ್ವಹೃದಯ ಜ್ಞಾನವಿದ್ಯೆ ಯನ್ನು ನಿನಗೆ ತಿಳಿಸು ತೇನೆ ಎನಲು ಋತುಪರ್ಣನು--ಹಾಗೇ ಆಗಲೆಂದು ಸಮ್ಮತಿಸಿ ಆತನನ್ನು ನೋಡಿ--ನಿನಗೆ ಅಕ್ಷ ಹೃದಯ ವಿದ್ಯೆಯನ್ನು ಈಗ ಹೇಳುತ್ತೇನೆ ನಿನ್ನ ಅಶ್ವಹೃದಯ ಎದೆಯು ನಿನ್ನಲ್ಲಿಯೇ ಇರಲಿ ನನಗೆ ಬೇಕಾದಾಗ ತೆಗೆದುಕೊಳ್ಳುತ್ತೆನೆ ಎಂದು ನುಡಿದು ನಳನಿಗೆ ಸಾಂಗವಾಗಿ ಅಕ್ಷಹೃದಯ ವಿದ್ಯೆಯನ್ನು ಉಪದೇಶಿಸಿದನು. ಆ ಬಳಿಕ ಅಕ್ಷ ವಿದ್ಯಾಸಮರ್ಧನಾದ ನಳನ ಶರೀರದ ದೆಸೆಯಿಂದ ಕಲಿಪುರುಷನು ಕರ್ಕೊ ಟಕನ ಎಷದಿಂದಲೂ ದಮಯಂತಿಯ ಶಾಪದಿಂದಲೂ ತನ್ನನಾಗಿ ಭೂಮಿಯಲ್ಲಿ ಬೀಳಲು ನಳನು ನೋಡಿ ಆತನಿಂದ ಒಹು ಕಾಲ ತೊಂದರೆಯನ್ನು ಹೊಂದಿದವನಾ ದುದರಿಂದ ಅವನನ್ನು ಶಪಿಸುವುದಕ್ಕೆ ಎಣಿಸಿದನು ಅದಕ್ಕೆ ಅವನು ಬೆದರಿ ಗಡಗಡನೆ ನಡುಗುತ್ತಾ ಕೈಮುಗಿದು- ಎಲೈ, ಮಹಾತ್ಮನೇ ! ನನ್ನನ್ನು ಶಪಿಸಬೇಡ, ನಿನಗೆ ಬಹು ಕೀರ್ತಿ ಉಂಟಾಗುವಂತೆ ಮಾಡುತ್ತೇನೆ. ಮೊದಲು ನಿನ್ನನ್ನು ಅಗಲಿದ ಸಮ ಯದಲ್ಲಿ ದಮಯಂತಿಯು ಶಪಿಸಿದುದರಿಂದಲೂ ಕರ್ಕೊಟಕನ ವಿಷದಿಂದಲೂ ಬಹಳ ಪೀಡಿತನಾಗಿ ಇದ್ದೇನೆ, ನಿನ್ನನ್ನು ಶರಣನನ್ನಾಗಿ ಹೊಂದಿದ್ದೇನೆ. ಲೋಕದಲ್ಲಿ ಯಾವ ಜನರಾಗಲಿ ನಿನ್ನ ಹೆಸರನ್ನು ನೆನೆದರೆ ಅವರಿಗೆ ನನ್ನ ಬಾಧೆಗಳು ಇಲ್ಲದೆ ಹೋಗಲಿ ಎಂದು ಬೇಡಿಕೊಳ್ಳಲು ನಳನು ದಯಾಶಾಲಿಯಾದುದರಿಂದ ಮನ್ನಿಸಿಬಿಟ್ಟನು, ಕಲಿ ಪುರುಷನು ಹತ್ತಿರದಲ್ಲಿರುವ ತಾರೆಯ ಮರವನ್ನು ಹತ್ತಿ ಮರಸಿಕೊಂಡನು. ಆದುದ ರಿಂದಲೇ ತಾರೆಯ ಮರವು ಅಯೋಗ್ಯವೆನಿಸಿಕೊಂಡಿತು.