ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

228 KANARESE SELECTIONS-PART 111 ಆ ಬಳಿಕ ಕಲಿಯಿಂದ ಬಿಡಲ್ಪಟ್ಟ ನಳನು ರಥವನ್ನು ಏರಿ ಕುಂಡಿನ ನಗರಕ್ಕೆ ಹೋಗಲು ದಮಯಂತಿಯು ತನ್ನ ಗಂಡನಾದ ನಳನು ಋತುಪರ್ಣರಾಜನೊಡನೆ ಈಗ ಬರುವನು ಎಂದು ನಡುವಣ ತೊಟ್ಟಿಯ ಮಾಡದ ಮೇಲೆ ಹತ್ತಿ ನಿಂತು ದಾರಿ ಯನ್ನು ನೋಡುತ್ತಿರುವಲ್ಲಿ ಬಾಹುಕವಾಷೆ Fಯರೊಡನೆ ಕೂಡಿ ಬರುವ ಋತುಪ ರ್ಣನನ್ನು ಕಂಡಳು. ಆಗ ನಳನೂ ವಾರ್ಷ್ಠೆಯನೂ ತೇರನ್ನೂ ಕುದುರೆಗಳ ಕಡಿವಾ ಣಗಳನ್ನೂ ಹಿಡಿದು ನಿಲ್ಲಿಸಲು ಋತುಪರ್ಣನು ತೇರಿನಿಂದಿಳಿದು ಭೀಮಭೂಪಾಲ ಸಿಗೆ ಎದುರಾಗಿ ಹೋಗಲು ಆತನು ಈತನನ್ನು ಯಥೋಚಿತವಾಗಿ ಪೂಜಿಸಿ ಹೆಂಗ ಸರು ಅಂತರಾಲೋಚನೆಯಿಂದ ನಡಿಸಿದ ಕೆಲಸವನ್ನು ಸ್ವಲ್ಪವಾದರೂ ತಿಳಿಯದೆ ಇರು ವವನಾದುದರಿಂದ ಒಮ್ಮಿಂದೊಮ್ಮೆ ಬಂದ ಋತುಪರ್ಣನನ್ನು ನೋಡಿ ಕುಶಲಪ್ರಶ್ನೆ ಯನ್ನು ಮಾಡಿ--ನೀನು ಒ೦ದ ಕೆಲಸವೇನು ? ಎಂದು ಕೇಳಿದನು ಆಗ ಋತುಸ ರ್ಣನು ಜಾಣನಾದುದರಿಂದ ಸ್ವಯಂವರಕ್ಕೆ ಒಬ್ಬ ಅರಸನಾದರೂ ಬಾರದೆ ಇರುವ ದನ್ನೂ ಸ್ವಯಂವರಪ್ರಯತ್ನ ವ್ರ ಕೊಂಚವಾದರೂ ಇಲ್ಲದೆ ಇರುವುದನ್ನೂ ಕಂಡು ಮತ್ತೊಂದು ಮಾತನ್ನೂ ಹೇಳದೆ...ಸಿನ್ನನ್ನು ನೋಡಿ ನಮಸ್ಕಾರವನ್ನು ಮಾಡುವ ದಕ್ಕೆ ಬಂದೆನು ಅಂದನು. ಭೀಮಭೂಪಾಲಕನು--ಇಷ್ಟು ಮಾತ್ರಕ್ಕೆ ಇಷ್ಟು ದೂರ ಪ್ರಯಾಣವನ್ನು ಮಾಡುವುದು ಯುಕ್ತವಾಗಿ ತೋರುವುದಿಲ್ಲ, ಇವನು ತನ್ನ ಮನೋ ಗತವನ್ನು ನಿಜವಾಗಿ ತಿಳಿಸಲಿಲ್ಲ ಎಂದು ತನ್ನ ಮನದಲ್ಲಿ ತಿಳಿದುಕೊಂಡು ಆತ ನಿಗೆ ಒಂದು ಬಿಡಾರವನ್ನು ಬಿಡಿಸಿ ಕೊಟ್ಟು ದರಿಂದ ಅಲ್ಲಿ ವಾರ್ಷ್ಠೆಯಸಹಿತನಾಗಿ ಹೋಗಿ ಆ ಮನೆಯಲ್ಲಿ ಇಳಿದು ಕೊಂಡನು. ನಳನು ರಥವನ್ನು ರಧಶಾಲೆಗೆ ತೆಗೆದು ಕೊಂಡು ಹೋಗಿ ಇರಿಸಿ ತಾನೂ ಅದರ ಸಮೀಪದಲ್ಲಿಯೇ ಇದ್ದು ಕೊಂಡಿದ್ದನು ಆಗ ದಮಯಂತಿಯು ತನ್ನ ಬಳಿಯಲ್ಲಿ ಇರುವ ಒಬ್ಬ ದೂತಿಯನ್ನು ಕರೆದು . ಎಲೈ, ಕೇಶಿಸಿಯೇ ! ಋತುಪರ್ಣನ ತೇರಿನ ಬಳಿಯಲ್ಲಿ ಕುಗ್ಗಿದ ತೋಳುಳ್ಳವನಾಗಿ ಏಕೃತಾಕಾರನಾಗಿರುವ ಈತನು ಯಾರೋ ತಿಳಿಯಲಿಲ್ಲ ಈತನನ್ನು ನೋಡಿದ ಮಾತ್ರದಿಂದಲೇ ನನ್ನ ಮನಸ್ಸಿನಲ್ಲಿ ಸಂತೋಷ ಹುಟ್ಟಿದುದರಿಂದ ಇವನು ನಳಸಿರ ಬಹುದೋ ? ಎಂಬ ಸಂಶಯ ಉಂಟಾಗಿದೆ ಸೀನು ಆತನ ಸನ್ನಿಧಾನಕ್ಕೆ ಹೋಗಿ ಸಕ್ಕರೆಯ ಹಾಗೆ ಸಿಹಿಯಾಗಿರುವ ಮಾತುಗಳಿಂದ ಕುಶಲ ಪ್ರಶ್ನೆ ಯನ್ನು ಮಾಡಿ ಆತನು ಕೊಡುವ ಉತ್ತರವನ್ನೂ ಮೊದಲು ಪರ್ಣಾದನು ಹೋಗಿ ನುಡಿದ ವಾಕ್ಯ ಗಳಿಗೆ ಆತನು ಪ್ರತ್ಯುತ್ತರ ಕೊಟ್ಟದ್ದನ್ನೂ ವಿವರವಾಗಿ ತಿಳುಕೊಂಡು ಬಾ ಎಂದು ಕಳುಹಿಸಿ ತಾನು ಮಾಡವನ್ನೇರಿ ನೋಡುತ್ತಿದ್ದಳು, ಅವಳು ಬಾಹುಕನ ಹತ್ತಿರಕ್ಕೆ ಬಂದು ಆತನನ್ನು ಕುರಿತು ಎಲೈ, ಮಹಾತ್ಮನೇ | ಕ್ಷೇಮದಲ್ಲಿ ಇದ್ದೀಯಾ? ಆಯೋಧ್ಯಾ ಪಟ್ಟಣದ ದೆಸೆಯಿಂದ ಹೊರಟು ಎಷ್ಟು ದಿವಸವಾಯಿತು ? ಇಲ್ಲಿಗೆ ಯಾವ ಪ್ರಯೋಜನಕ್ಕೊಸ್ಕರ ಒಂದೆ ? ಇದನ್ನು ತಿಳುಕೊಂಡು ಬಾ ಎಂದು ನಮ್ಮ ಅರಸಿನಮಗಳು ಕಳುಹಿಸಿದ್ದಾಳೆ. ನಿನ್ನ ಸ್ವರೂಪವನ್ನು ನಿಜವಾಗಿ ವಿವರಿಸು ಎನ್ನಲು ಬಾಹುಕನು-ದಮಯಂತಿಯು ನಾಳಿನ ಬೆಳಿಗ್ಗೆ ಎರಡನೆಯ ಸ್ವಯಂವರ