ಕಥಾಸಂಗ್ರಹ.೩ ನೆಯ ಭಾಗ 231 ಮಾಡಲಿ ಎಂದು ತನ್ನ ಹೆಂಡತಿಗೆ ಹೇಳಿ ಕಳುಹಿಸಲು ಆಗ ತಾಯಿ ತಂದೆಗಳ ಅಪ್ಪ ಣೆಯಿಂದ ದಮಯಂತಿಯು ದೂತಿಯನ್ನು ನೋಡಿ-ಎಲೆ, ಕೇಶಿಸೀ ! ನೀನು ಬಾರಿ ಬಾರಿಗೂ ತಿರುಗುತ್ತಿದ್ದೇನೆ ಎಂದು ಬೇಸರಪಡದೆ ನನ್ನ ತಾಯಿಯೋಪಾದಿಯಲ್ಲಿ ನನಗೆ ಪ್ರಿಯವನ್ನು ಮಾಡು ನೀನು ಪುನಃ ಬಾಹುಕನ ಸವಿಾಪಕ್ಕೆ ಹೋಗಿ--ನಿನ್ನನ್ನು ಭೀಮನರೇಂದ್ರನು ಕರಕೊಂಡು ಬರಹೇಳಿದನು ಎಂದು ಹೇಳಿ ಆತನನ್ನು ಅಂತಃಪು: ರಕ್ಕೆ ಕರಕೊಂಡು ಬಾ ಎಂದು ಕಳುಹಿಸಿದಳು. ಅವಳು ಹೋಗಿ ಹಾಗೆ ಆತನನ್ನು ಕರೆಯಲು ನಳನು ಮುಹೂರ್ತಮಾ ತ್ರವು ತನ್ನ ಮನಸ್ಸಿನಲ್ಲಿ ವಿಚಾರಿಸಿ ಇದನ್ನು ನೋಡಬೇಕು ಎಂದು ಎಣಿಸಿ ಆ ದೂತಿಯ. ಸಂಗಡಲೇ ದಮಯಂತಿಯ ಮನೆಗೆ ಬರಲು ಆಗ ವಿಕೃತಾಕಾರನಾಗಿರುವ ನಳನನ್ನು ನೋಡಿ ಕಾವಿಯ ಬಟ್ಟೆ ಯನ್ನೂ ಜಡೆಗಳನ್ನೂ ಧರಿಸಿ ಮಲಿನ ಗಾತ್ರಳಾಗಿರುವ ದಮ ಯಂತಿಯು--ಎಲೈ, ಬಾಹುಕನೇ ! ಲೋಕದಲ್ಲಿ ಧರಜ್ಞನಾದ ಪುರುಷನು ಮಹಾ ರಣ್ಯದ ನಡುವೆ ಮಗ್ಗ ಅಲ್ಲಿ ನಿದ್ದೆ ಹೋಗುತ್ತಿರುವ ತನ್ನ ಪ್ರಿಯ ಭಾರೆಯನ್ನು ಬಿಟ್ಟು ಹೋದುದನ್ನು ನೀನು ಎಲ್ಲಾದರೂ ಕಂಡು ಕೇಳಿ ಉಂಟೇ ? ನಿರಪರಾಧಿಯಾಗಿಯ ಪ್ರಿಯಾಂಗನೆಯಾಗಿಯೂ ಹಸಿವು ಬಾಯಾರಿಕೆಗಳಿಂದ ಕಂಗೆಟ್ಟಿರುವವಳೂ ಆಗಿರುವ ಧಮ್ಮ ಪತ್ನಿ ಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವುದು ಪುಣ್ಯಶ್ಲೋಕನಾದ ನಳಮಹಾ ರಾಜನಿಗೆ ಹೊರತಾಗಿ ಮತ್ತೊಬ್ಬನಿಗೆ ಸಲ್ಲುವುದೇ ? ಮೊದಲು ತನ್ನ ಸ್ವಯಂವರಕ್ಕೆ ಇಂದ್ರಾದಿ ದಿಕ್ಷಾಲಕರು ಬರುವಲ್ಲಿ ಅವರೆಲ್ಲರನ್ನೂ ಬಿಟ್ಟು ಮೊದಲೇ ಹಂಸಗಳ ದೆಸೆ ಯಿಂದ ತನ್ನ ಗುಣಗಳ ಹೆಚ್ಚಿಗೆಯನ್ನು ಕೇಳಿದುದರಿಂದ ಅಗ್ನಿ ಸಾಕ್ಷಿ ಯಾಗಿ ವರಿಸಿದು ದನ್ನು ಎಣಿಸದೆ ಮಕ್ಕಳುಳ್ಳವಳಾಗಿಯ ಪ್ರಿಯಪತ್ನಿ ಯಾಗಿಯ ಇರುವವಳನ್ನು ಕಾಡಿಗೆ ತನ್ನ ಸಂಗಡಲೇ ಬಂದಳಲ್ಲ ಎಂದು ಸ್ವಲ್ಪವಾದರೂ ಕರುಣಿಸದೆ ಕಷ್ಟ ಕೈ ಗುರಿಯಾಗಿ ಮಲಗಿದ್ದವಳನ್ನು ಮೋಸದಿಂದ ಮರಸಿಬಿಟ್ಟು ಹೋಗುವುದು ತನ್ನ ಂಥಾ ವನಿಗೆ ತಕ್ಕುದೇ ? ಎಂದು ಮದ್ಘಾಟನವಾಗಿ ಮಾತಾಡುವ ಮಡದಿಯ ಮಾತು ಗಳನ್ನು ಕೇಳಿ ಕಣ್ಣೀರುಗಳು ಸಂತತಧಾರೆಯಾಗಿ ಸುರಿಯಲು ಸುಂದರಿಯಾದ ಆಕೆ ಯನ್ನು ಕುರಿತು ಎಲೈ, ಕಲ್ಯಾಣಿಯೇ ! ಮೊದಲು ಕಾಡಿನಲ್ಲಿ ನಿನ್ನೊ ಬ್ಬಳನ್ನೇ ಬಿಟ್ಟು ಹೋದ ಪಾಪಿಷ್ಠನಾದ ನಳನು ನಾನೇ ಎಂದು ತಿಳು ಕೋ ಸಕಲ ರಾಜ್ಯವನ್ನೂ ಕಳೆದುಕೊಂಡು ನಿನ್ನನ್ನು ಕಾಡಿನಲ್ಲಿ ಬಿಟ್ಟು ಹೋಗುವುದು ಕಲಿಪುರುಷನ ಪ್ರೇರಣೆ ಯಿಂದ ಬಂದಿತು ಎಂದು ತಿಳುಕೋ, ನಾನು ವಸ್ತ್ರಹೀನನಾಗಿ ಒಬ್ಬನೇ ಕಾಡಿಗೆ ಹೋದ ಮೇಲೆ ಕುಲವತಿಯಾದ ನೀನು ಕೋಪಿಸಿಕೊಂಡು ಕಲಿಪರುಷನನ್ನು ಶಪಿಸಿದ ವಳಾದುದರಿಂದ ಆತನು ನಿನ್ನ ಕಾಪಾಗ್ನಿ ಯಿಂದ ಸುಡಲ್ಪಟ್ಟವನಾಗಿಯೂ ನನ್ನ ತಪೋ ಜ್ವಾಲೆಯಿಂದ ತಪ್ತನಾಗಿಯ ಆಪತ್ತುಗಳು ಬಿಟ್ಟು ಹೋಗುವ ಕಾಲವಾದುದರಿಂದ ನನ್ನೊಡಲಲ್ಲಿ ಇರದೇ ಹೋದನು, ನಾನು ನಿನ್ನ ನಿಮಿತ್ತದಿಂದ ಇಲ್ಲಿಗೆ ಬಂದೆನೇ ಹೊರ ತಾಗಿ ನನಗೆ ಮತ್ತೊಂದು ಕಾರ್ಯವೇನಿದೆ ? ಲೋಕದಲ್ಲಿ ತನ್ನಲ್ಲಿ ಎಷ್ಟೋ ಅನುರ ಕನಾಗಿ ಕಣ್ಣಿನ ಸಂಜ್ಞಾ ಮಾತ್ರದಿಂದ ಇಷ್ಟಾ ಪೂರ್ತಿಯನ್ನು ಮಾಡುವ ಪ್ರಿಯಪತಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೩
ಗೋಚರ