ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 KANARESE SELECTIONS-PART III ಕೈಯಿಂದ ಹಿಡಿದ ಮಾತ್ರದಿಂದಲೇ ಅದರಲ್ಲಿ ಬೆಂಕಿಯು ಧಗ್ಗೆ೦ದು ಉರಿಯುತ್ತದೆ. ಆತನು ಬೆಂಕಿಯನ್ನು ಕೈಯಲ್ಲಿ ಹಿಡಿದರೂ ಸುಡುವುದಿಲ್ಲ, ಆತನು ಎಷ್ಟು ನೀರು ಬೇಕೆಂದರೂ ಅಷ್ಟು ನೀರು ಬರುತ್ತದೆ. ಇದಲ್ಲದೆ ಇನ್ನೊಂದು ಆಶ್ಚರವನ್ನೂ ನೋಡಿ ದೆನು. ಆತನು ಬಾಡಿದ ಹೂವುಗಳನ್ನು ಕೈಯಿಂದ ಹಿಡದರೆ ಅವೆಲ್ಲವೂ ಬಾಡದೆ ಪರಿಮಳದಿಂದ ಘುಮುಧುಮಿಸುತ್ತವೆ ಅಂದಳು. ಅನಂತರದಲ್ಲಿ ದಮಯಂತಿಯು-ಎಷ್ಟು ವಿಧದಲ್ಲಿ ಪರೀಕ್ಷಿಸಿ ನೋಡಿದರೂ ನಳನೇ ಹೌದೆಂದು ನಿಶ್ಚಯವಾಗುತ್ತದೆ. ಆತನಿಗೆ ಇಂಥಾ ಕೀಳು ರೂಪು ಉಂಟಾಗು ವುದಕ್ಕೆ ಏನು ನಿಮಿತ್ತ ವೋ ಎಂದು ಸಂಶಯಪಡುತ್ತಾ ತಿರಿಗಿ ಕೇಶಿನಿಯನ್ನು ಕರೆದು- ನೀನು ಹೋಗಿ ಬಾಹುಕನು ಬೇಯಿಸಿದ ಮಾಂಸವನ್ನು ಆತನು ತಿಳಿಯದ ಹಾಗೆ ಬೇಗ ತೆಗೆದು ಕೊಂಡು ಬಾ ಎಂದು ಹೇಳಿಕಳುಹಿಸಲು ಅವರಂತೆ ಅವಳು ಹೋಗಿ ಅತ್ಯುಷ್ಣ ವಾದ ಮಾಂಸವನ್ನು ತೆಗೆದು ಕೊಂಡು ಬಂದು ದಮಯಂತಿಗೆ ಕೊಡಲು ಆಕೆಯು ಆ ಬಾಡನ್ನು ತಿಂದು ಮೊದಲು ನಳನು ಬೇಯಿಸಿದ ಬಾಡಿನ ರುಚಿಯನ್ನು ತಿಳಿದಿದ್ದವಳಾದುದರಿಂದ ಈ ಬಾಹುಕನೇ ನಳನೆಂದು ನಿಶ್ಚಯಿಸಿ ತನ್ನ ಮಗನನ್ನೂ ಮಗಳನ್ನೂ ಕೇಶಿನಿಯ ಸಂಗಡ ಕೂಡಿಸಿ ಬಾಹುಕನ ಬಳಿಗೆ ಕಳುಹಿ ಸಲು ಆತನು ಇವರನ್ನು ನೋಡಿ ತನ್ನ ಕೂಸುಗಳೆಂದು ತಿಳಿದು ಬೇಗಬಂದು ತಬ್ಬಿ ಕೊಂಡು ಅವರನ್ನು ಮುದ್ದಾಡಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ದೇವಕುಮಾ ರಕರೋಪಾದಿಯಲ್ಲಿ ಇರುವ ತನ್ನ ಮಕ್ಕಳನ್ನು ನೋಡಿ ಧೀರೋದಾತ್ತ ನಾಯಕನಾ ದರೂ ದುಃಖವನ್ನು ಸಹಿಸಲಾರದೆ ನಾಚಿಕೆಯನ್ನು ತೊರೆದು ಹೆಚ್ಚಾಗಿ ಪ್ರಳಾಪಿಸಿ ಆ ಮಕ್ಕಳನ್ನು ಕೇಶಿನಿಯ ವಶಕ್ಕೆ ಕೊಟ್ಟು ಅವಳನ್ನು ನೋಡಿ - ನನಗೂ ಇಂಧ ಇಬ್ಬರು ಮಕ್ಕಳುಂಟು, ಈ ಮಕ್ಕಳನ್ನು ನೋಡಿ ಅವರನ್ನು ನೆನಸಿಕೊಂಡು ದುಃಖದಿಂದ ಕೇಶ ಪಟ್ಟಿ ನು. ದೇಶಾಂತರದಿಂದ ಬಂದ ನನ್ನ ಬಳಿಗೆ ಬಾರಿಬಾರಿಗೂ ನೀನು ಹೀಗೆ ಇರುತ್ತಾ ಇದ್ದರೆ ನೋಡಿದವರಿಗೆ ಸಂದೇಹ ಉಂಟಾಗುವುದು. ಇನ್ನು ನೀನು ಇಲ್ಲಿ ಇರದೆ ಬೇಗ ಮನೆಗೆ ಹೋಗು ಎನಲು ಅವಳು ಹೋಗಿ ಆ ಮಾತನ್ನೆಲ್ಲಾ ದಮಯಂತಿಗೆ ತಿಳಿಸಿ ದಳು. ಆಕೆಯು ಅವಳನ್ನು ನೋಡಿ ನೀನು ನನ್ನ ತಾಯಿಯ ಬಳಿಗೆ ಹೋಗಿ ಈ ಬಾಹುಕನನ್ನು ಬಹು ಪ್ರಕಾರವಾಗಿ ಪರೀಕ್ಷಿಸಿದೆನು. ರೂಪದಲ್ಲಿ ವಿಕಾರವಾಗಿ ತೋರುವುದು ಒಂದೆ ಹೊರತಾಗಿ ಮಿಕ್ಕ ಎಲ್ಲಾ ನಡತೆಯಲ್ಲಿಯ ಈತನೇ ನಳ ನೆಂದು ನಿಲ್ಲೆ ಯವಾಗಿ ತಿಳಿಯಒಂದಿತು ನಾನು ಆತನ ಕಡೆ ಮಾತನಾಡಿದರೆ ಎಲ್ಲಾ ತಿಳಿಯುತ್ತದೆ ನೀನು ಈ ಸಂಗತಿಯನ್ನು ಅರಸನಿಗೆ ಅರಿಕೆಮಾಡಿಯಾದರೂ ಮಾಡದೆ ಯಾದರೂ ಆತನನ್ನು ಇಲ್ಲಿಗೆ ಕರತರಿಸಿದರೆ ನಾನು ಮಾತನಾಡೇನು, ಅಲ್ಲದಿದ್ದರೆ ಆತನ ಬಳಿಗೆ ನನ್ನನ್ನು ಕಳುಹಿಸಿದರೆ ಹೋಗಿ ಬಂದೇನು ಎಂದು ನಾನು ಹೇಳಿದುದಾಗಿ ಅರಿಕೆ ಮಡಿ ಬಾ ; ಹೋಗು ಎಂದು ಕಳುಹಿಸಲು ಅವಳು ಹಾಗೆ ಹೋಗಿ ರಾಣಿಗೆ ಅರಿಕೆ ಮಾಡಲು ಆ ದೇವಿಯು ಭೀಮಭೂಪಾಲಕನಿಗೆ ಬನ್ನವಿಸಿದುದಕ್ಕೆ ಆತನು - ದಮಯಂತಿಗೆ ಈ ವಿಷಯವ ಹೇಗೆ ಉಚಿತವಾಗಿ ತೋರುತ್ತದೋ ಹಾಗೆ