ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 233 ನಳನು ಇದೆಲ್ಲವನ್ನು ನೋಡಿ ಆಶ್ಚರ್ಯಭರಿತನಾಗಿ ದಮಯಂತಿಯಲ್ಲಿ ಸಂಶ ಯವನ್ನು ಬಿಟ್ಟು ಕಾರ್ಕೊಟಕವನ್ನು ನೆನೆದು ಅವನು ಕೊಟ್ಟ ಎರಡು ಬಟ್ಟೆಗಳನ್ನು ಉಟ್ಟು ಹೊದೆದು ಕೊಂಡು ಆಕ್ಷಣವೇ ತನ್ನ ಮೊದಲಿನ ಚಲುವಾದ ಮೈಯ್ಯನ್ನು ಧರಿಸಿಕೊಂಡು ಹೊಳೆಯುತ್ತಿದ್ದನು. ಅದನ್ನು ದಮಯಂತಿಯು ನೋಡಿ ತನ್ನ ಗಂಡ ನನ್ನು ಬಿಮ್ಮನೆ ತಬ್ಬಿಕೊಂಡು ಕೂಗಿ ಅಳಲು ಆತನೂ ಹಾಗೆಯೇ ಅವಳನ್ನು ತಬ್ಬಿ ಕೊಂಡು ಅಳುತ್ತಾ ಸಮಾಧಾನವನ್ನು ಮಾಡಿ ಲಾಲಿಸಲು ಧೂಳಿಯಿಂದ ತುಂಬಿದ ಮೈಯುಳ್ಳ ದಮಯಂತಿಯು ನಳನ ಎದೆಯಲ್ಲಿ ತನ್ನ ಮೊಗವನ್ನು ಇಟ್ಟು ಕಣ್ಣೀರು ಗಳನ್ನು ತುಂಬಿಕೊಂಡಿದ್ದಳು ಆಗ ಇದೆಲ್ಲವನ್ನೂ ದಮಯಂತಿಯ ತಾಯಿಯು ಕಂಡು ಭೀಮಭೂಪಾಲಕನಿಗೆ ತಿಳಿಸಿದಳು. ಆತನು ಈ ವರ್ತಮಾನವನ್ನು ಕೇಳಿ ಸಂತೋಷಪಟ್ಟು ತನ್ನ ಮಡದಿಯನ್ನು ಕುರಿತು-ಆ ಗಂಡ ಹೆಂಡರಿಗೆ ನಾಳಿನ ಬೆಳಿಗ್ಗೆ ಮಂಗಳಸ್ನಾನವನ್ನು ಮಾಡಿಸಿ ದಿವ್ಯ ವಸ್ತ್ರಾಭರಣಗಳಿಂದ ಅಲಂಕರಿಸು. ಆಮೇಲೆ ನಾನು ಬಂದು ನೋಡುವೆನು ಎಂದು ಹೇಳಿ ಕಳುಹಿಸಿದನು. ಆ ರಾತ್ರಿಯಲ್ಲಿ ನಳನೂ ದಮಯಂತಿಯ ತಾವು ತಾವು ಪಟ್ಟ ಕಷ್ಟಗಳನ್ನು ಒಂದು ಕಥೆಯಾಗಿ ಒಬ್ಬರೊಬ್ಬರಿಗೆ ಹೇಳಿಕೊಳ್ಳುತ್ತಾ ಚಂದ್ರನಿಂದ ಮೆರೆಯುವ ರಾತ್ರಿಯಂತೆಯೂ ಕಮಲಿನಿಯಿಂದ ಕಳಕಳಿಸುವ Sಳದಂತೆಯ ಸುಖವಾಗಿದ್ದರು. ಮಾರಣೆಯ ದಿವಸದ ಬೆಳಿಗ್ಗೆ ನಳನು ದಮಯಂತಿಯೊಡನೆ ಕೂಡಿ ಮಂಗಳಸ್ನಾನವನ್ನು ಮಾಡಿ ಸಕಲಭೂಷಣ ಭೂಷಿತನೂ ದಿವ್ಯ ಮಾಲ್ಯಾ೦ಬರಾಲಂಕೃತನೂ ಆಗಿ ದಮಯಂ ತಿಯೊಡನೆ ಭೀಮಭೂಪಾಲನ ಒಳಿಗೆ ಹೋಗಿ ನಮಸ್ಕಾರವನ್ನು ಮಾಡಲು ಆತನು ನಳನಲ್ಲಿ ಪುತ್ರವಾತ್ಸಲ್ಯವನ್ನು ಮಾಡಿ ಹಿತವಾದ ನುಡಿಗಳಿಂದ ಅವರನ್ನು ಸಮಾಧಾನಿಸಿ ಈರ್ವರಿಗೂ ಅನೇಕ ವಸ್ತ್ರಭೂಷಣಾದಿಗಳನ್ನು ಕೊಟ್ಟು ಮನ್ನಿಸಲು ಆ ಗಂಡ ಹೆಂಡರು ಚಂದ್ರ ರೋಹಿಣೀ ದೇವಿಯರಂತೆಯ ಅಗ್ನಿಸ್ಯಾಹಾ ದೇವಿಯರಂತೆಯ ನಾರಾಯಣ ಲಕ್ಷ್ಮಿ ದೇವಿಯರಂತೆಯ ಬ್ರಹ್ಮ ಸರಸ್ವತಿಯರಂತೆಯ ಶಿವಪಾ ರ್ವತಿಯರಂತೆಯ ಮೆರೆಯುತ್ತಿದ್ದರು. ಆಗ ಊರು ಜನರೆಲ್ಲರೂ ಅವರಿಬ್ಬರನ್ನೂ ಕಣ್ಣುಗಳಿಂದ ಚೆನ್ನಾಗಿ ನೋಡಿ ಚಂದ್ರನನ್ನು ಕಂಡ ಸಮುದ್ರದಂತೆ ಸಂತೋಷ ದಿಂದ ಉಬ್ಬಿದರು. ಆಗ ಭೀಮಭೂಪಾಲನು ಪಟ್ಟಣವನ್ನೆಲ್ಲಾ ಅಲಂಕಾರಮಾಡಿ ಸಿದನು, ಆ ಬಳಿಕ ನಳನು ಋತುಪರ್ಣರಾಜನನ್ನು ಕರತರಿಸಿ ಬಹುಮಾನಗಳನ್ನು ಮಾಡಿ ಒಳ್ಳೆಯ ಮಾತುಗಳಿಂದ ಸಂತೋಷಪಡಿಸಿದನು. ಬುದ್ದಿ ಸಂಪನ್ನನಾದ ಆತನು ನಳನಿಂದ ಸತ್ತನಾಗಿಯ ನಸುನಗೆಯಿಂದ ಕೂಡಿದ ಮೊಗದಾವರೆಯುತ್ಸವ ನಾಗಿಯೂ ಆತನನ್ನು ಕುರಿತು-ಎಲೈ, ಮಹಾನುಭಾವನೇ ! ದೇವರ ದಯೆಯಿಂದ ಹೆಂಡತಿಯೊಡನೆ ಕೂಡಿದ ನಿನ್ನನ್ನು ನೋಡಿ ನನ್ನ ಕಣ್ಣುಗಳು ಸಫಲಗಳಾದುವ್ರ. ನಾನು ಧನ್ಯನಾದೆನು, ಮೊದಲು ನನ್ನ ಪಟ್ಟಣಕ್ಕೆ ಬಂದು ನೀನು ಅಜ್ಞಾತವಾಸವಾ ಗಿರುವ ಸಮಯದಲ್ಲಿ ನಾನು ಅರಿತಾದರೂ ಅರಿಯದೆಯಾದರೂ ನಿನ್ನಲ್ಲಿ ಏನಾದರೂ ತಪ್ಪು ಮಾಡಿರುವೆನು. ಅದೆಲ್ಲವನ್ನೂ ಸಹಿಸಬೇಕೆಂದನು. ನಳನು ಆತನನ್ನು ನೋಡಿ 16