ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

234 KANARESE SELECTIONS-PART III ನಾನು ಇಷ್ಟು ದಿವಸಗಳೂ ನಿನ್ನ ಪಟ್ಟಣದಲ್ಲಿ ಸ್ವರ್ಗಲೋಕದಲ್ಲಿ ಇದ್ದಂತೆ ಸೌಖ್ಯವಾಗಿ ಇದ್ದೆನು, ನನ್ನ ರಾಜ್ಯದಲ್ಲಿಯೂ ನಾನು ಅಷ್ಟು ಸೌಖ್ಯದಿಂದ ಇರಲಿಲ್ಲ. ಅಂಥಾ ತಪ್ಪನ್ನು ನೀನು ಮಾಡಿದ್ದರೂ ನಾನು ಮರೆಯಬೇಕು, ಇಂಥಾದುದರಲ್ಲಿ ನೀನು ಒಂದು ತಪ್ಪನ್ನಾದರೂ ಮಾಡಿದವನೇ ಅಲ್ಲ, ಅಶ್ವ ಹೃದಯವೆಂಬ ವಿದ್ಯೆಯನ್ನು ನನ್ನ ಲ್ಲಿಯೇ ನಿಲ್ಲಿಸಿದವನಾದುದರಿಂದ ಅದನ್ನು ಪರಿಗ್ರಹಿಸಬೇಕೆಂದನು, ಋತುಪರ್ಣನು ಆ ವಿದ್ಯೆಯನ್ನು ನಳನಿಂದ ಗುಟ್ಟಾಗಿ ಗ್ರಹಿಸಿಕೊಂಡು ಅಪ್ಪಣೆಯನ್ನು ತೆಗೆದುಕೊಂಡು ಮತ್ತೊಬ್ಬ ಸಾರಥಿಯಿಂದ ಕೂಡಿ ತನ್ನ ಪಟ್ಟಣಕ್ಕೆ ಹೋದನು. ಆ ಬಳಿಕ ನಳನು ಕುಂಡಿನ ಪಟ್ಟಣದಲ್ಲಿ ಒಂದು ತಿಂಗಳು ಸುಖದಿಂದ ಇದ್ದು ಆಮೇಲೆ ಭೀಮಭೂಪಾಲಕನ ಅಪ್ಪಣೆಯನ್ನು ತೆಗೆದು ಕೊಂಡು ಬಿಳಿಯ ಕುದುರೆಗೆ ಳನ್ನು ಕಟ್ಟಿದ ತೇರನ್ನು ಏರಿ ಹದಿನಾರು ಭದ್ರಗಜಗಳನ್ನೂ ಐವತ್ತು ಕುದುರೆಗೆ ಇನ್ನೂ ಆರುನೂರು ಕಾಲಾಳುಗಳನ್ನೂ ಕೂಡಿಕೊಂಡು ತನ್ನ ದಾದ ನಿಷಧದೇಶಕ್ಕೆ ಬಂದು ಪುಷ್ಕರನ ಸಮೀಪಕ್ಕೆ ಹೋಗಿ--ಇದೋ ! ದಮಯಂತಿ ಹೊರತಾಗಿ ಮಿಕ್ಕಾದ ನನ್ನ ದ್ರವ್ಯವನ್ನು ಹಂತಕ್ಕೆ ಒಡ್ಡುತ್ತೇನೆ. ನೀನು ರಾಜ್ಯವೆಲ್ಲವನ್ನೂ ಪಂತಕ್ಕೆ ಒಡ್ಡು ತಿರುಗಿ ನಿನ್ನೊಡನೆ ಜೂಜಾಡಬೇಕೆಂದು ಎಣಿಸಿದ್ದೇನೆ ಇದು ಮುಗಿದ ಮೇಲೆ ನಮ್ಮಿಬ್ಬರ ಪ್ರಾಣಗಳನ್ನೂ ಒಡ್ಡುವಣ, ಜೂಜಿನಲ್ಲಿ ಒಬ್ಬನ ಧನ ರಾಜ್ಯಗಳನ್ನು ಗೆದ್ದು ಕೊಂಡವನ ಬಳಿಗೆ 'ಆತನು ತಿರುಗಿ ಬಂದು ಜೂಜಿಗೆ ಕರೆದರೆ ಆಡಬೇಕು, ಅದಕ್ಕೆ ನೀನು ಒಪ್ಪದಿದ್ದರೆ ಯುದ್ಧಕ್ಕೆ ಬಾ, ದ್ವಂದ್ವ ಯುದ್ಧ ದಲ್ಲಿ ಯಾದರೂ ನಮ್ಮಿಬ್ಬರಲ್ಲಿ ಒಬ್ಬನಿಗೆ ಕೇಡಾಗಬೇಕು ಹಗೆಯು ತೆಗೆದುಕೊಂಡ ರಾಜ್ಯವನ್ನು ಹೇಗಾದರೂ ತಿರುಗಿ ತೆಗೆದು ಕೊಳ್ಳಬೇಕು ಎಂದು ದೊಡ್ಡವರು ಹೇಳಿರು ವುದರಿಂದ ನಾನು ಹೇಳಿದ ಎರಡು ಕೆಲಸಗಳಲ್ಲಿ ಯಾವುದಾದರೂ ಒಂದಕ್ಕೆ ನಿಲ್ಲು ಎಂದು ಕರೆಯಲು ಪುಷ್ಕರನು ರಾಜ್ಯ ಗರ್ವಿತನಾಗಿಯ ಜೂಜಾಡುವುದಕ್ಕೆ ಉದ್ಯು ಕನಾಗಿಯೂ ಸಂತದಲ್ಲಿ ಧನಕನಕವಸ್ತು ವಾಹನಗಳನ್ನೂ ರಾಜ್ಯಗಳನ್ನೂ ತನ್ನ ಪ್ರಾಣಗಳನ್ನೂ ಒಡ್ಡಿ ಆಡಲು ನಳನು ಜಯಿಸಿ ಆ ಪುಷ್ಕರನನ್ನು ನೋಡಿ--ನೀನು ಜೂಜಿನಲ್ಲಿ ನನಗೆ ಅಪಕಾರನ್ನು ಮಾಡಿದವನಲ್ಲ , ಕಲಿಪುರುಷನು ಮಾಡಿದನು. ನೀನು ಹೆಡ್ಡನಾದುದರಿoದ ತಿಳಿಯಲಿಲ್ಲವು. ಆದಕಾರಣ ನಿನ್ನ ಪ್ರಾಣಗಳನ್ನು ಕೊಲ್ಲುವುದಿಲ್ಲ, ನೂರುವರುಷಗಳು ಸುಖವಾಗಿ ಜೀವಿಸು. ನೀನು ಎಷ್ಟು ಅಪಕಾರ ಮಾಡಿದರೂ ನನ್ನ ಒಡಹುಟ್ಟು ಗಳಲ್ಲಿ ಒಬ್ಬನಾದುದರಿಂದ ನಿನ್ನಲ್ಲಿ ನನಗೆ ಬಹು ಪ್ರೀತಿ ಇದೆ ಎಂದು ಹೇಳಿ ಬಾರಿಬಾರಿಗೂ ತಬ್ಬಿ ಕೊಳ್ಳುತ್ತಿರಲು ಪುಷ್ಕರನು -ನಳನಿಗೆ ನಮ ಸ್ವಾರವನ್ನು ಮಾಡಿ ಕೈಮುಗಿದು-ಎಲೆ, ಮಹಾನುಭಾವನೇ ! ನಿನ್ನ ಕೈಗೆ ಸಿಕ್ಕಿದ ಪ್ರಾಣಗಳನ್ನು ತಿರುಗಿ ಕೊಟ್ಟು ನನ್ನನ್ನು ಕಾಪಾಡಿದೆ ಎಂದು ಕೊಂಡಾಡಿ ನಳನ ಅಪ್ಪಣೆ ತೆಗೆದು ಕೊಂಡು ಸಂತೋಷದಿಂದ ತನ್ನ ಪಟ್ಟಣಕ್ಕೆ ಹೋದನು. ಆಗ ಪೌರಜನ ಪರಿಜನಗಳು ತೇಜೋವಂತರಾಗಿ ನಡುವಗ ಸೂರ್ಯನೆ ಹಾಗೆ ಹೊಳೆಯುತ್ತಿರುವ ನಳನ ಬಳಿಗೆ ಬಂದು ಅಡ್ಡಬಿದ್ದು--ಸ್ವಾಮಿಾ, ಮಹಾ