ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭತಿ 238 ರಾಜನೇ ! ತನ್ನ ತಾಯಿಯನ್ನು ಕಂಡ ಎಳೆಗರುವಿನ೦ತೆ ಈ ದಿವಸ ನಾವೆಲ್ಲರೂ ಧರ್ಮಸ್ವರೂಪನಾದ ನಿನ್ನನ್ನು ಕಂಡು ಸಂತುಷ್ಟರಾದೆವು ಅಂದರು. ಆಗ ನಳಚಕ್ರವ ರ್ತಿಯು ಅವರನ್ನೆಲ್ಲಾ ಯಥೋಚಿತವಾಗಿ ಮನ್ನಿಸಿ ಸಕಲ ಸೇನೆಗಳನ್ನೂ ಭೀಮ ಭೂಪಾಲಕನ ಪಟ್ಟಣಕ್ಕೆ ಕಳುಹಿಸಿ ದಮಯಂತಿಯನ್ನೂ ತನ್ನ ಮಕ್ಕಳನ್ನೂ ಕರೆ ಯಿಸಿಕೊಂಡು ಸಂತೋಷಯುಕ್ತನಾಗಿ ಬಹು ಯಜ್ಞಗಳನ್ನು ಮಾಡಿ ದೇವತೆಗಳನ್ನು ಸಂತೋಷಪಡಿಸುತ್ತಾ ಪ್ರಜೆಗಳನ್ನು ಮಕ್ಕಳ ಹಾಗೆ ಕಾಪಾಡುತ್ತಾ ಬಹು ಕೀರ್ತಿ ಯನ್ನು ಪಡೆದು ಸುಖವಾಗಿದ್ದನು. ಪ್ರಧಮ ಗ್ರ೦ಧ ಸಮಾಪ್ತಿ