ಪುಟ:ಕಥಾಸಂಗ್ರಹ ಸಂಪುಟ ೧.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 KANARESE SELECTIONS-PART I ಪುನಃ ಹಾರಿದುದರಿಂದ ರಡ್ಡಿಯ ರಡ್ಡಿ ಸಾನಿಯ ಈ ಇಬ್ಬರೂ ಬುಡಸಹಿತ ನಾಶನ ವಾಗುತ್ತಾರೆ ಎಂದು ಓದಿ-ಇದು ಬಹು ಕೆಟ್ಟ ಶಕುನ ಅಂದನು. ಆಗ ರಡ್ಡಿಯು ಕಣ್ಣಿನಲ್ಲಿ ನೀರನ್ನು ಬಿಡುತ್ತಾ- ಇದಕ್ಕೆ ಏನು ಮಾಡಬೇಕೆಂದು ತುಂಬಾ ಅಂಗಲಾ ಚಿಕೊಂಡು ಕೇಳಲು ಆಗ ಬ್ರಾಹ್ಮಣನು--ನೀವು ಇದಕ್ಕೆ ಹೆದರಬೇಡಿರಿ ; ನಾನು ಇದಕ್ಕೆ ಶಾಂತಿಯನ್ನು ಮಾಡುತ್ತೇನೆಂದು ಹೇಳಿ ಆ ಹೊಸ ಮನೆಯ ಗೋಡೆಯ ಒಳಗೆ ಆಳುದ್ದ ಗುಂಡಿಯನ್ನು ತೆಗಿಸಿ ಅಲ್ಲಿ ಸಾರಿಸಿ ರಂಗೋಲೆಯನ್ನು ಇಕ್ಕಿಸಿ ನೂರು ಹೊರೆ ಮುತ್ತುಗದ ಕಡ್ಡಿಯನ್ನೂ ನೂರು ಗಡಿಗೆ ತುಪ್ಪವನ್ನೂ ನೂರು ವರಹ ವನ್ನೂ ನೂರು ಕರೆಯುವ ಹಸುಗಳನ್ನೂ ತರಿಸಿಕೊಂಡು ರಡ್ಡಿಯನ್ನೂ ರಡ್ಡಿ ಸಾನಿ ಯನ್ನೂ ಆ ಕುಂಡದ ಮುಂದೆ ಒಂದು ಹಸೆಯ ಮಣೆಯ ಮೇಲೆ ಕೂರಿಸಿ ಬನ್ನಿ ಯ ಮರದ ಕೊರಡನ್ನು ಕಡಿದು ಅದರಲ್ಲಿ ಹುಟ್ಟಿದ ಬೆಂಕಿಯ ಕಿಡಿಗೆ ಬೆರಣಿಯ ಪುಡಿ ಯನ್ನು ಹಾಕಿ ಹತ್ತಿಸಿ ಗುಂಡಿಯಲ್ಲಿ ಇಟ್ಟು ಸೌದೆಯನ್ನು ಹಾಕಿ ಉರಿಯಿಸಿ ಅದ ರೊಳಗೆ ಒಂದು ಹೊರೆ ಮುತ್ತುಗದ ಕಡ್ಡಿಯನ್ನೂ ಒಂದು ಹರವಿಯ ತುಪ್ಪವನ್ನೂ ಬಾಯಿಯಲ್ಲಿ ಏನೇನೋ ಹೇಳುತ್ತಾ ಹಾಕುತ್ತಾ ಹೊರೆಯ ಕಟ್ಟಿಗೆಯ ಹರವಿಯ ತುಪ್ಪವೂ ಮುಗಿದ ಮೇಲೆ ಒಂದು ಕರೆಯುವ ಹಸುವನ್ನೂ ಒಂದು ವರಹವನ್ನೂ ರಡ್ಡಿಯಿಂದ ಧಾರೆ ಎರಸಿ ತಾನು ತೆಗೆದು ಕೊಳ್ಳುತ್ತಿದ್ದನು. ಈ ವರ್ತಮಾನವನ್ನು ಮತ್ತೊಬ್ಬ ದಾರಿಗಾರನು ಕೇಳಿ ಅಲ್ಲಿಗೆ ಬಂದುದರಿಂದ ಮೊದಲಿನ ಬ್ರಾಹ್ಮಣನು ಅವನನ್ನು ಕಂಡು ಇವನು ನನ್ನ ಗುಟ್ಟನ್ನು ಏನಾದರೂ ಹೊರಪಡಿಸುವನೋ ಏನೋ ಎಂಬ ಸಂದೇಹದಿಂದ ತುಪ್ಪವನ್ನು ಹಾಕಿ ಹೋಮಮಾಡುವಾಗ್ಗೆ--ನಿನಗರ್ಧo ನನ ಗರ್ಧo ಸ್ವಾಹಾ ! ಎಂದು ಮಂತ್ರವನ್ನು ಹೇಳುವ ಹಾಗೆ ಹೇಳಿ ಹೋಮವನ್ನು ಮಾಡುತ್ತಿದ್ದುದರಿಂದ ಬಂದ ಬ್ರಾಹ್ಮಣನು ಆ ಸನ್ನೆ ಯನ್ನು ತಿಳಿದು ಸುಮ್ಮನಿದ್ದನು. ಆಗ ಆ ಬ್ರಾಹ್ಮಣನು ತುಪ್ಪವನ್ನೆಲ್ಲಾ ಹೋಮ ಮಾಡಿ ಆ ನೂರ ಹೈನಾಕಳುಗ ಇನ್ನೂ ನೂರು ವರಹಗಳನ್ನೂ ತೆಗೆದುಕೊಂಡು ಹೊರಗೆ ಹೋಗಿ ಇಬ್ಬರೂ ಹಂಚಿ ಕೊಂಡು ತಮ್ಮ ಊರಿಗೆ ಹೋದರು. 29, THE MERCHANTS AND THEIR CAT. ೨೯, ವರ್ತಕರೂ ಅವರ ಬೆಕ್ಕ. ಧಾರವಾಡ ದೇಶದಲ್ಲಿ ನಾಲ್ಕು ಜನ ವರ್ತಕರು ಪಾಲಿನ ವ್ಯಾಪಾರಕ್ಕಾಗಿ ಅರಳೆಯನ್ನು ಬಹಳವಾಗಿ ಕೊಂಡು ನಗಗಳನ್ನು ಕಟ್ಟಿಸಿ ಅವುಗಳನ್ನು ಬಾಡಿಗೆ ಎತ್ತುಗಳ ಮೇಲೆ ಹೇರಿಸಿಕೊಂಡು ಒಂದು ಪಟ್ಟಣಕ್ಕೆ ಬಂದು--ಈ ಪಟ್ಟಣವು ಬಹಳ ಬಸ್ತಿಯಾಗಿದೆ ; ಇಲ್ಲಿ ಮಾರಿಕೊಂಡು ನಮ್ಮ ದೇಶಕ್ಕೆ ಹೋಗೋಣ ಎಂದು ಒಂದು ಬಾಡಿಗೆಯ ಮನೆಯನ್ನು ಮಾಡಿಕೊಂಡು ಅಲ್ಲಿ ತಮ್ಮ ಅರಳೆಯ ನಗಗಳ ನ್ನೆಲ್ಲಾ ಒಟ್ಟಿ ಅಲ್ಲಿಯೇ ಒಂದು ಕಡೆಯಲ್ಲಿ ಅಡಿಗೆ ಊಟಗಳನ್ನು ಮಾಡಿಕೊಂಡಿ