ಕಥಾಸಂಗ್ರಹ-೧ನೆಯ ಭಾಗ 29 ೬' ದ್ದರು. ಹೀಗಿರುವಲ್ಲಿ ಆ ಅರಳೆಯ ನಗಗಳಿಗೆ ಇಲಿಗಳು ಬಿದ್ದು ಕತ್ತರಿಸಿ ಕೆಡಿ ಸುತ್ತಾ ಬಂದುದರಿಂದ ನಾಲ್ಕು ಜನವೂ ಕೂಡಿ ಒಟ್ಟಿನಲ್ಲಿ ಒಂದು ಬೆಕ್ಕಿನ ಮರಿ ಯನ್ನು ಕ್ರಯಕ್ಕೆ ತಂದು ಒಬ್ಬರೊಬ್ಬರು ಆ ಬೆಕ್ಕಿನ ಮರಿಯ ಒಂದೊಂದು ಕಾಲನ್ನು ಹಂಚಿಕೊಂಡು ತಮ್ಮ ತಮ್ಮ ಪಾಲಿನ ಕಾಲಿಗೆ ಗೆಜ್ಜೆ ಮುಂತಾದುದನ್ನು ಕಟ್ಟಿ ಚೆನ್ನಾಗಿ ಪರಾಂಬರಿಕೆಯನ್ನು ತೆಗೆದುಕೊಳ್ಳುತ್ತಾ ಪ್ರೀತಿಯಿಂದ ಆರೈಕೆ ಯನ್ನು ಮಾಡುತ್ತಾ ಬಂದರು, ಕೆಲವು ದಿವಸಗಳ ಮೇಲೆ ಅದರ ಒಂದು ಕಾಲ ನಲ್ಲಿ ಕೆಟ್ಟ ಹುಣ್ಣು ಎದ್ದುದರಿಂದ ನಾಲ್ಕು ಕಾಲುಗಳನ್ನೂ ಊರಿ ನಡೆಯುವುದಕ್ಕೆ ಆಗದೆ ಮೂರೇ ಕಾಲುಗಳಲ್ಲಿ ನಡೆಯುತ್ತಾ ಇತ್ತು. ಆ ಕಾಲಿನ ಯಜಮಾನನು ಹುಣ್ಣು ವಾಸಿಯಾಗುವುದಕ್ಕೋಸ್ಕರ ಅದಕ್ಕೆ ಎಣ್ಣೆಯ ಬಟ್ಟೆಯನ್ನು ಸುತ್ತಿದನು. ಈ ವರ್ತಕರೆಲ್ಲಾ ವ್ಯಾಪಾರಕ್ಕೆ ಹೋಗಿದ್ದ ವೇಳೆಯಲ್ಲಿ ಈ ಬೆಕ್ಕು ಹೋಗಿ ಒಲೆಯ ಮುಂದೆ ಕೂತಿತ್ತು. ಆಗ ಒಲೆಯಲ್ಲಿ ಇದ್ದ ಬೆಂಕಿಯ ಕಿಡಿಯು ಹುಣ್ಣಿನ ಕಾಲಿಗೆ ಸುತ್ತಿದ್ದ ಎಣ್ಣೆಯ ಬಟ್ಟೆ ಯ ಮೇಲೆ ಬಿದ್ದು ಹತ್ತಿ ಕೊಂಡು ಉರಿಯುತ್ತಾ ಇದ್ದು ದರಿಂದ ಆ ಬೆಕ್ಕು ಗಾಬರಿಯಾಗಿ ಅಲ್ಲಿಂದ ಮೂರು ಕಾಲಿನಲ್ಲಿಯೇ ಓಡಿ ಬಂದು ಅರಳೆಯ ನಗಗಳ ಮೇಲೆ ಓಡಾಡುತ್ತಾ ಇದ್ದುದರಿಂದ ಇದನ್ನು ಅವರ ಕಡೆಯ ಆಳು ಕಂಡು ಬೆಕ್ಕನ್ನು ಕೆಳಗೆ ತೆಗೆದು ಅದರ ಕಾಲಿನ ಎಣ್ಣೆಯ ಬಟ್ಟೆಯನ್ನು ಬಿಚ್ಚಿಬಿಟ್ಟನು. ಅಷ್ಟು ಹೊತ್ತಿಗೆ ಸಾವಿರಾರು ರೂಪಾಯಿಯ ಅರಳೆ ಸುಟ್ಟು ಹೋಯಿತು. “ಆ ಬಳಿಕ ವರ್ತಕರು ಮನೆಗೆ ಬಂದು ಈ ಸುದ್ದಿಯನ್ನು ಕೇಳಿ ಹುಣ್ಣಾದ ಕಾಲಿನ ಯಜಮಾನ ನನ್ನು ಕುರಿತು ಮಿಕ್ಕ ಮೂರು ಮಂದಿ ವರ್ತಕರು--ಅಯ್ಯಾ ! ನಿನ್ನ ಪಾಲಿನ ಕಾಲಿಗೆ ನೀನು ಎಣ್ಣೆಯ ಬಟ್ಟೆ ಸುತ್ತಿದುದರಿಂದ ಅರಳೆಯು ಸುಟ್ಟು ಹೋಯಿತು, ಈ ನಷ್ಟ ದಲ್ಲಿ ನಿನ್ನ ಪಾಲಿನದು ಹೋಗಲಾಗಿ ನಮ್ಮ ಮವರ ಪಾಲಿನ ನಷ್ಟವನ್ನೂ ನೀನು ನಮಗೆ ಕೊಡಬೇಕೆಂದು ಹೇಳಲು ಅದಕ್ಕೆ ಅವನು ಒಪ್ಪದಿರಲು ಆಗ ಅವನನ್ನು ಕರೆದು ಕೊಂಡು ಆ ಪಟ್ಟಣದ ನ್ಯಾಯಾಧಿಪತಿಯ ಬಳಿಗೆ ಹೋಗಿ ತಮ್ಮ ವ್ಯಾಜ್ಯದ ಸಂಗತಿ ಯನ್ನು ಹೇಳಿಕೊಂಡರು. ಆ ನ್ಯಾಯಾಧಿಪತಿಯು ಅದನ್ನು ಕೇಳಿ- ಎಲೈ ವರ್ತಕರೇ! ಇದು ಈತನ ತಪ್ಪಲ್ಲ; ತನ್ನ ಪಾಲಿನ ಕಾಲು ವಾಸಿಯಾಗುವುದಕ್ಕಾಗಿ ಅವನು ಎಣ್ಣೆಯ ಬಟ್ಟೆಯನ್ನು ಸುತ್ತಿದನಲ್ಲದೆ ಬೇರೆಯಲ್ಲವು. ಆದಕಾರಣ ಈ ನಷ್ಟವು ನಿಮಗೆ 'ದೈವ ಗತಿಯಿಂದ ಆದುದಾಗಿದೆ. ಅದನ್ನು ನೀವು ಎಲ್ಲರೂ ಸಮಭಾಗಿಗಳಾಗಿ ಅನುಭವಿಸ ಬೇಕೆಂದು ಎಷ್ಟು ಒಂಡಂಬಡಿಸಿ ಹೇಳಿದಾಗ ಆ ಮರು ಜನರೂ ಕೇಳದೆ ಹೋದು ದರಿಂದ ನ್ಯಾಯಾಧಿಪತಿಯು ಈ ನಷ್ಟವು ನಿಮ್ಮ ಮೂರು ಜನದ ಪಾಲಿನ ಕಾಲುಗ ಳಿಂದಲೇ ಉಂಟಾಗಿದೆ. ಅವನ ಪಾಲಿನ ಕಾಲಿನಿಂದ ಉಂಟಾದುದಲ್ಲ, ಯಾಕಂದರೆ ನಿಮ್ಮ ಪಾಲಿನ ಕಾಲುಗಳ ಸಹಾಯವಿಲ್ಲದಿದ್ದರೆ ಅವನ ಪಾಲಿನ ಒಂದು ಕಾಲಿನಿಂದಲೇ ಅದಕ್ಕೆ ಅರಳೆಯ ನಗಗಳ ಮೇಲೆ ಹೋಗುವುದಕ್ಕೆ ಆಸ್ಪದವಿರುತ್ತಿರಲಿಲ್ಲ, ಅದು ನಿಮ್ಮ ಪಾಲಿನ ಕಾಲುಗಳ ಸಹಾಯದಿಂದಲೇ ಹೋಗಿ ಅರಳೆಯನ್ನು ಸುಟ್ಟಿತು ಆದಕಾರಣ ಆತನ ಪಾಲಿನ ನಷ್ಟವನ್ನು ನೀವು ಮೂರು ಜನವೂ ಹಂಚಿಕೊಂಡು ಆತನಿಗೆ ಕೊಡ ಬೇಕೆಂದು ತೀರ್ಪುಮಾಡಿ ಕಳುಹಿಸಿಕೊಟ್ಟನು.
ಪುಟ:ಕಥಾಸಂಗ್ರಹ ಸಂಪುಟ ೧.djvu/೪೧
ಗೋಚರ