ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART I 30, THE SWANS AND THE TURTLE. ೩೦, ಹಂಸಗಳೂ ಕೂರ್ಮವೂ ಪುಷ್ಕ ರದ್ವೀಪದಲ್ಲಿ ಕುಮುದಾಕರನೆಂಬ ಒಂದು ಸರಸ್ಟಿರುವುದು, ಎರಡು ಹಂಸಪಕ್ಷಿಗಳು ಕಮಲಗಳ ದಂಟಿನ ಆಹಾರಕ್ಕೊಸ್ಕರ ಮಾನಸಸರಸ್ಸಿನಿಂದ ಬಂದು ಅದರಲ್ಲಿ ಇದ್ದುವು. ಆ ಸರಸ್ಸಿನಲ್ಲಿ ಬಹು ಕಾಲದಿಂದ ವಾಸಮಾಡಿಕೊಂಡಿದ್ದ ಒಂದು ಆಮೆಯು ಆ ಹಂಸಗಳೊಡನೆ ಸ್ನೇಹವನ್ನು ಮಾಡಿಕೊಂಡು ಇತ್ತು, ಹೀಗಿರುವಲ್ಲಿ ಮಾಗೆಯ ಕಾಲ ಬಂದುದರಿಂದ ಆ ಹಂಸಪಕ್ಷಿಗಳಿಗೆ ತಾವರೆಯ ದಂಟಿನ ಆಹಾರವು ತಪ್ಪಲು ಆಗ ಅವುಗಳಿಗೆ ತಿರಿಗಿ ಮಾನಸಸರಸ್ಸಿಗೆ ಹೋಗಬೇಕೆಂದು ಯತ್ನ ವುಂಟಾಗಲು ಈ ಆಮೆಯು ಆ ಹಂಸಗಳನ್ನು ಕುರಿತು-ಎಲೆ ಅಣ್ಣಗಳಿರಾ ! ನೀವು ಇಲ್ಲಿ ಗೆ ಬಂದುದರಿಂದ ನಿಮ್ಮ ಸ್ನೇಹವ ದೊರಕಿ ಇಂದಿನವರೆಗೂ ನಿಮ್ಮೊಡನೆ ನಾನು ಬಹು ಸುಖದಿಂದ ಇದ್ದೆನು, ಈಗ ತಿರಿಗಿ ನೀವು ನಿಮ್ಮ ಸ್ಥಳಕ್ಕೆ ಹೊರಟು ಹೋಗುವವರಾದರೆ ನಿಮ್ಮನ್ನು ಬಿಟ್ಟು ನಾನು ಇರಲಾರೆನು, ನೀವು ದಯಮಾಡಿ ನನ್ನನ್ನೂ ನಿಮ್ಮ ಸಂಗಡ ಕರಕೊಂಡು ಹೋಗಿ ಆ ಮಾನಸಸರಸ್ಸಿನಲ್ಲಿ ಬಿಟ್ಟರೆ ನಿನ್ನೊಡನೆ ಸುಖವಾಗಿರುವೆನು ಎಂದು ಹೇಳಿತು. ಆಗ ಹಂಸಪಕ್ಷಿಗಳು-ಏನಯ್ಯಾ ಸ್ನೇಹಿತನೇ ! ಇದೆಂಥಾ ಹುಚ್ಚು ಮಾತಾಡಿದೆ ? ಬಹು ದೂರವಾದ ಮಾನಸಸರಸ್ಸು ಎಲ್ಲಿ'? ನೀರಿನಲ್ಲಿ ಓಡಾಡುವ ನೀನೆಲ್ಲಿ ? ಆಕಾಶದಲ್ಲಿ ಬಹು ವೇಗದಿಂದ ಹಾರಿ ಹೋಗುವ ನಾವು ನಿನ್ನನ್ನು ಕರ ಕೊಂಡು ಹೋಗುವುದು ಹೇಗೆ ? ಇಂಧಾ ದುರ್ಘಟವಾದ ಕೆಲಸವು ನಮ್ಮಿಂದ ಹೇಗೆ ಆದೀತು ? ಎಂದು ಹೇಳಿದುವು. ಅದಕ್ಕೆ ಆಮೆಯು-ಎಲೈ ಅಣ್ಣಗಳಿರಾ ! ಇದೇನು ಹೀಗೆ ಹೇಳುತ್ತೀರಿ ? ಘಟ್ಟಿಗರಾದವರಿಗೆ ಯಾವ ಕೆಲಸ ತಾನೇ ಅಸಾಧ್ಯ ? ಉದ್ಯೋ ಗಿಯಾದವನಿಗೆ ಯಾವ ದೇಶತಾನೇ ದೂರ ? ವಿದ್ಯಾವಂತನಿಗೆ ಯಾವುದು ತಾನೇ ಪರದೇಶ ? ಒಳ್ಳೆಯ ಮಾತಾಡುವವನಿಗೆ ಯಾರು ತಾನೇ ಹಗೆಗಳು ? ಎಂದು ನೀತಿ ಉಂಟು ಆದುದರಿಂದ ನೀವು ಒಂದು ಕೋಲನ್ನು ತೆಗೆದು ಕೊಂಡು ಅದರ ಒಂದೊಂದು ತುದಿಯನ್ನು ಒಬ್ಬೊಬ್ಬರು ಕೊಕ್ಕಿನಿಂದ ಕಚ್ಚಿಕೊಂಡರೆ ನಾನು ಆ ಕೋಲಿನ ಮಧ್ಯಭಾಗವನ್ನು ಬಾಯಿಯಿಂದ ಗಟ್ಟಿಯಾಗಿ ಕಚ್ಚಿಕೊಳ್ಳುತ್ತೇನೆ, ಆ ಮೇಲೆ ನೀವು ಎಷ್ಟು ಚುರುಕಾಗಿಯಾದರೂ ಆಕಾಶದಲ್ಲಿ ಹಾರಿ ಹೋಗಬಹುದು ಎಂದು ಹೇಳಿತು. ಅದಕ್ಕೆ ಆ ಹಂಸಪಕ್ಷಿಗಳು-ಈ ಉಪಾಯ ಸರಿ ; ಆದರೆ ಸ್ಥಳವನ್ನು ಮುಟ್ಟುವ ವರೆಗೂ ನೀನು ಬಾಯಿ ಬಿಡದೆ ಇರಬೇಕು, ಈ ಮಧ್ಯದಲ್ಲಿ ಬಿಟ್ಟರೆ ಕೆಳಗೆ ಬಿದ್ದು ನುಚ್ಚು ನುರಿಯಾಗಿ ಹೋಗುವಿ ಎಂದು ಹೇಳಿ ಅವುಗಳು ಅದೇ ಪ್ರಕಾರ ಮಾಡಿದುವು. ಹೀಗೆ ಆಕಾಶಮಾರ್ಗದಲ್ಲಿ ಹೋಗುವಾಗ್ಗೆ ಒಂದು ಸ್ಥಳದಲ್ಲಿ ದನಗಳನ್ನು ಮೇಯಿ ಸುತ್ತಾ ಇದ್ದ ಹುಡುಗರು ಅದನ್ನು ನೋಡಿ-ಎಲಾ ನೋಡಿರೋ ! ಇದೇನಾ ಶ್ಚರ್ಯ ? ಒಂದು ಕೋಲಿನ ತುದಿಗಳನ್ನು ಎರಡು ಹಂಸಗಳು ಕಚ್ಚಿ ಕೊಂಡು ಹಾರಿ ಹೋಗುತ್ತವೆ, ಅದರ ಮಧ್ಯಭಾಗವನ್ನು ಆಮೆಯು ಕಚ್ಚಿ ಕೊಂಡು ಹೋಗುತ್ತದೆ. ನಾವು ಇದನ್ನು ನೋಡುತ್ತಾ ಇದರ ಕೆಳಗೇ ಹೋಗೋಣ. ದೇವರ ದಯದಿಂದ