ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 31 ಆ ಆಮೆಯು ನಡುವೆ ಏನಾದರೂ ಬಾಯಿ ಬಿಟ್ಟರೆ ಕೆಳಗೆ ಬಿದ್ದು ಸತ್ತುಹೋಗು ಇದೆ. ನಾವೆಲ್ಲರೂ ಇದನ್ನು ಸುಟ್ಟು ಕೊಂಡು ತಿನ್ನಬಹುದು ಎಂದು ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದನ್ನು ಆ ಆಮೆಯು ಕೇಳಿಬಾಯಿ ಬಿಡುವುದಕ್ಕೆ ನಾನು ಹುಚ್ಚನಲ್ಲ ಎಂದು ಪ್ರತ್ಯುತ್ತರವನ್ನು ಕೊಡುವುದಕ್ಕೆ ಬಾಯಿ ತೆರೆದು ಕೆಳಗೆ ಬಿದ್ದು ಸತ್ತು ಹೋದುದರಿಂದ ದನಕಾಯುವ ಹುಡುಗರು ಅದನ್ನು ಸುಟ್ಟು ತಿಂದುಬಿಟ್ಟರು. ಹಂಸಗಳು-ಈ ಆಮೆಯ ಬುದ್ದಿ ಹೀನತೆಗೆ ವ್ಯಸನಪಟ್ಟು ಕೋಲನ್ನು ಬಿಟ್ಟು ಮಾನಸ ಸರಸ್ಸಿಗೆ ಹೊರಟು ಹೋದವು. 31. THE CROW, THE DEER, AND THE JACKAL. ೩೧. ಕಾಗೆಯೂ ಹುಲ್ಲೆಯೂ ನರಿಯೂ. ಮಗಧದೇಶದಲ್ಲಿರುವ ಚಂದಕವತೀ ಎಂಬ ಅರಣ್ಯದಲ್ಲಿ ಸಂಪಿಗೆಯ ಮರದ ಮೇಲೆ ಸುಬುದ್ದಿ ಎಂಬ ಒಂದು ಕಾಗೆಯು ವಾಸವನ್ನು ಮಾಡಿಕೊಂಡಿತ್ತು. ಅದರ ಸಂಗಡ ಸಾಧುಏುದ್ದಿ ಎಂಬ ಒಂದು ಹುಲ್ಲೆ ಯು ಬಹು ಕಾಲದಿಂದ ಸ್ನೇಹವನ್ನು ಬಳಸಿ ಕೊಂಡು ಹಗಲೆಲ್ಲಾ ತನ್ನ ಹೊಟ್ಟೆಯ ಪಾಡಿಗೆ ತಿರುಗುತ್ತಾ ರಾತ್ರಿ ವೇಳೆಯಲ್ಲಿ ಆ ಕಾಗೆ ಇರುವ ಸಂಪಿಗೆಯ ಮರದ ಕೆಳಗೆ ಬಂದು ಸೇರಿ ಆ ಕಾಗೆಯೊಡನೆ ಸುಖ ಸಲ್ಲಾಪಗಳನ್ನು ಮಾಡಿಕೊಂಡು ಇರುತ್ತಾ ಇತ್ತು. ಹೀಗಿರುವಲ್ಲಿ ಒಂದು ದಿವಸ ಈ ಹುಲ್ಲೆಯು ಮೇವಿಗೋಸ್ಕರ ಅರಣ್ಯದಲ್ಲಿ ತಿರುಗುತ್ತಾ ಇರಲು ದುರುಳಬುದ್ಧಿ ಎಂಬ ಒಂದು ಗುಳ್ಳೆಯನರಿಯು ಇವನ್ನು ಕಂಡು ಆಹಾ ! ಈ ಹುಲ್ಲೆ ಯು ಬಹಳ ಕೊಬ್ಬಿದ ಮೈಯುಳ್ಳದ್ದಾಗಿ ಇದೆ ಸುಖದಿಂದ ಇದರ ಮಾಂಸಖಂಡಗಳನ್ನು ನಾನು ತಿನ್ನಬೇಕಾದರೆ ಇದಕ್ಕೇನು ಉಪಾಯವನ್ನು ಮಾಡಬೇಕೆಂದು ಒಂದು ಗಳಿಗೆ ಯೋಚಿಸಿ-ಒಳ್ಳೆಯದು ! ಇದರ ಕೂಡ ಸ್ನೇಹವನ್ನು ಬಳಸಿ ನೋಡುವೆನೆಂದು ಅದರ ಬಳಿಗೆ ಬಂದು-ಆಯಾ ಮಿತ್ರನೇ ! ನಾನು ನೆಂಟರಿಷ್ಟರಿಲ್ಲದೆ ಪರದೇಶಿ ಯಾಗಿ ಈ ಕಾಡಿನಲ್ಲಿ ಏಕಾಂಗಿಯಾಗಿ ತಿರುಗುತ್ತಾ ಇದ್ದೆನು, ಈ ಹೊತ್ತು ನನ್ನ ಪುಣ್ಯದಿಂದ ನಿನ್ನನ್ನು ಕಂಡು ಬಹಳ ಸಂತುಷ್ಟನಾದೆನು, ಈ ದಿನ ಮೊದಲುಗೊಂಡು ಗಾದ ವಿನ ದಾಸನಾಗಿ ನಿನ್ನೊಡನೆ ತಿರುಗಿಕೊಂಡಿರುವೆನೆಂದು ಬಹಳ ದನವಾಗಿ ಹೇಳಿಕೊಂಡು ದರಿಂದ ಹುಲ್ಲೆ ಯು-ಹಾಗಾಗಲಿ ಎಂದು ಒಪ್ಪಿ ಅದನ್ನು ಕರೆದು ಕೊಂಡು ಸಂಜೆಯ ವೇಳೆಯಲ್ಲಿ ಸಂಪಿಗೆಯ ಮರದ ಬಳಿಗೆ ಬಂದಿತು. ಆಗ ಕಾಗೆಯು ಹುಲ್ಲೆ ಯನ್ನು ನೋಡಿ-ಇದಾರು ? ಮತ್ತೊಬ್ಬ ಹೊಸಬ ಬಂದಿರುವನು ಎಂದು ಕೇಳಲು ಇದು ದುರುಳಬುದ್ದಿ ಎಂಬ ನರಿಯು, ನಮ್ಮೊಡನೆ ಸ್ನೇಹವನ್ನು ಬಯಸಿ ಬಂದು ಇದೆ ಎಂದು ಹುಲ್ಲೆ ಯು ಹೇಳಿತು. ಅದಕ್ಕಾಕಾಗೆಯು-ಗುರುತು ಪರಿಚಿತಿ ಇಲ್ಲ ದವರೊಡನೆ ಸ್ನೇಹ ಬಳಸುವುದು ನ್ಯಾಯವಲ್ಲ ಎನಲು ಅದಕ್ಕೆ ಆ ನರಿಯು-. ಮುಂಚಿತವಾಗಿಯೇ ಹೇಗೆ ಗುರುತು ಪರಚಿತಿ ಆದೀತು ? ನೀನು ಈ ಹುಲ್ಲೆಯ ಸ್ನೇಹ ನಾನೆ