ಪುಟ:ಕಥಾಸಂಗ್ರಹ ಸಂಪುಟ ೧.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART 1 ವನ್ನು ಮಾಡುವುದಕ್ಕಿಂತ ಮೊದಲು ನಿನಗೂ ಇದಕ್ಕೂ ಗುರುತು ಪರಿಚಿತಿ ಇತ್ತೋ ? ಇರಲಿಲ್ಲವು ; ಇದು ಈಚೆಗೆ ಆಯಿತು, ಹಾಗೆಯೇ ಇನ್ನು ಮೇಲೆ ನನ್ನ ಗುರುತು ಪರಿ ಚಿತಿ ಆತುದೆ. ನೀವು ದಯಮಾಡಿ ನನ್ನನ್ನು ನಿಮ್ಮ ಸ್ನೇಹಿತನನ್ನಾಗಿ ನಿಮ್ಮಲ್ಲಿ ಸೇರಿಸಿ ಕೊಳ್ಳಬೇಕೆಂದು ಕಾಗೆಯನ್ನು ಬೇಡಿಕೊಂಡಿತು. ಆ ಕಾಗೆಯು ಅರ್ಧಾಂಗೀಕಾರ ವಾಗಿ ಒಪ್ಪಲು ಮೂರೂ ಸ್ನೇಹದಿಂದಿದ್ದುವು. ಹೀಗಿರುವಲ್ಲಿ ಮತ್ತೊಂದು ದಿವಸ ಕಾಡಿನಲ್ಲಿ ಈ ನರಿಯು ಹುಲ್ಲೆಯನ್ನು ನೋಡಿ-ಅಯ್ಯಾ ಸ್ನೇಹಿತನೇ ! ಸವಿಾಪದಲ್ಲಿ ಒಂದು ಗದ್ದೆಯು ಹೊಂಬಣ್ಣವಾದ ಭತ್ತದ ತೆನೆಗಳಿಂದ ಕೂಡಿ ಇದೆ. ನೋಡು ! ಬಾ ಎಂದು ಕರಕೊಂಡು ಹೋಗಿ ತೋರಿಸಿತು. ಹುಲ್ಲೆ ಯು ಬಹು ಸಂತೋಷದಿಂದ ಪ್ರತಿದಿನದಲ್ಲಿಯ ಹೋಗಿ ಮೇಯುತ್ತಾ ಇತ್ತು. ಆ ಗದ್ದೆಯ ಒಡೆಯನು ಅದನ್ನು ಕಂಡು ಮಿಕ ಬಂದು ಮೇಯಿದು ಹೋಗುತ್ತದೆಂದು ತಿಳಿದು ಒಂದು ದಿನ ಗದ್ದೆಯ ಸುತ್ತಲೂ ಬಲೆಯನ್ನು ಒಡ್ಡಿ ಮನೆಗೆ ಹೋಗಿದ್ದನು. ಅದನ್ನು ಕಾಣದೆ ಹುಲ್ಲೆ ಯು ಯಥಾಪ್ರಕಾರ ಮೇಯುವುದಕ್ಕೆ ಹಾರಿ ಹೋಗುವಾಗ ಬಲೆಯಲ್ಲಿ ಸಿಕ್ಕಿ ಬಿದ್ದಿತು. ಆಗ ಅದು ಸವಿಾಪದಲ್ಲಿರುವ ನರಿಯನ್ನು ನೋಡಿ--ಅಯ್ಯಾ ಗೆಳೆಯನೇ ! ಈಗ ಈ ಬಲೆಯನ್ನು ಕಡಿದು ನನ್ನನ್ನು ಹೊರಡಿಸಿಕೊಂಡು ಹೋಗು ಎನ್ನಲು ನರಿಯು ತನ್ನ ಮನಸ್ಸಿನಲ್ಲಿ ನಾನು ಮಾಡಿದ ತಂತ್ರವು ಈಗ ನೆರವೇರಿತು ಎಂದು ಸಂತೋಷ ಪಟ್ಟು ಹುಲ್ಲೆಯನ್ನು ಕುರಿತು ಅಯ್ಯಾ ಮಿತ್ರನೇ ! ಈ ಬಲೆಯು ದನದ ನರಗ ಳಿಂದ ಮಾಡಿ ಇದೆ. ಇದನ್ನು ಕಡಿದರೆ ನನ್ನ ಹಲ್ಲುಗಳು ಉಳಿಯುವುವೇ ? ಆದರೂ ಚಿಂತೆ ಇಲ್ಲ; ನಿನಗೋಸ್ಕರ ಕಡಿಯುವಣ ಅಂದರೆ ಈ ಸೋಮವಾರದ ದಿವಸ ಅಶು ಚಿಯಾದ ನರವನ್ನು ಬಾಯಿಯಿಂದ ಹೇಗೆ ಮುಟ್ಟಲಿ ? ನಾಳೆ ಹೊತ್ತಾರೆ ನೋಡುವಣ ಎನ್ನಲು ಹುಲ್ಲೆಯು--ಇದು ಮೋಸಗಾರನೆಂದು ನೆನಸಿ ಸುಮ್ಮನಾಯಿತು, ಅಲ್ಲಿ ಸಂಜೆಯ ವೇಳೆಗೆ ಕಾಗೆಯು ತನ್ನ ಮಿತ್ರನಾದ ಹುಲ್ಲೆಯ ಆ ನರಿಯ ಬಾರದಿ ರಲು ವ್ಯಸನದಿಂದ ನಿದ್ರೆಯನ್ನು ಮಾಡದೆ ಮುಂಜಾನೆ ಎದ್ದು ಹುಡುಕುತ್ತಾ ಒಂದು ಬಲೆಯಲ್ಲಿ ಸಿಕ್ಕಿರುವ ಸ್ನೇಹಿತನನ್ನು ಕಂಡು--ಇದೇನು ? ಎಂದು ಕೇಳಲು ಸ್ನೇಹಿತ ನಾದ ನಿನ್ನ ಮಾತನ್ನು ಕೇಳದೆ ಹೋದುದಕ್ಕೆ ಇದು 'ಪ್ರಾಯಶ್ಚಿತ್ತವೆಂದಿತು. ಆ ದುರುಳನೆಲ್ಲಿ ಅನ್ನ ಲು-ಅದೋ ! ನನ್ನ ಮಾಂಸವನ್ನು ತಿನ್ನು ವುದಕ್ಕೆ ಅಲ್ಲಿ ಕಾದು ಕೊಂಡು ಕೂತಿದೆ ಎಂದಿತು. ಅಷ್ಟರಲ್ಲಿ ಕಾಗೆಯು ಆ ಗದ್ದೆ ಯವನು ಕೈಯ್ಯಲ್ಲಿ ದೊಣ್ಣೆ ಹಿಡಿದು ಕೊಂಡು ಬರುವುದನ್ನು ಕಂಡು-ಆದೋ! ನಿನ್ನನ್ನು ಕೊಲ್ಲುವುದಕ್ಕೆ ಗದ್ದೆಯ ವನು ಬರುತ್ತಾನೆ. ನೀನು ನಾಲ್ಕು ಕಾಲುಗಳನ್ನೂ ಬೀರಿಕೊಂಡು ಉಸಿರನ್ನು ಕಟ್ಟಿ ಹೊಟ್ಟೆ ಯನ್ನು ಉಬ್ಬರಿಸಿಕೊಂಡು ಕಣ್ಣುಗಳನ್ನು ಮುಚ್ಚಿಕೊಂಡು ಬಿದ್ದು ಕೋ ; ನಾನು ನಿನ್ನ ಕಣ್ಣನ್ನು ಕುಕ್ಕುವವನ ಹಾಗೆ ನಿನ್ನ ಮೇಲೆ ಕೂತಿರುವೆನು. ನಾನು ಯಾವಾಗ ಕೂಗಿಕೊಂಡು ಮೇಲಕ್ಕೆ ಹಾರುತ್ತೇನೋ ಆಗ ನಿನ್ನ ಸರ್ವಶಕ್ತಿಯನ್ನೆಲ್ಲಾ ಉಪಯೋಗಿಸಿ ಹಾರಿಹೋಗು ಎಂದು ಹೇಳಿ ಆ ರೀತಿ ಮಾಡಿಸಿ ತಾನು ಅದರ ಮೇಲೆ ಕೂತಿತ್ತು ಆಗ ಗದ್ದೆ ಯ ಒಡೆಯನು ಬಂದು ಹುಲ್ಲೆಯ ಇರುವಿಕೆಯನ್ನು ನೋಡಿ