ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 KANARESE SELECTIONS-PART I 33, THE COCOANUT AND MANGO TRES. ೩೩, ತಂಗಿನ ಮರವೂ ಮಾವಿನ ಮರವೂ. ಮಧುವನದಲ್ಲಿ ಚೆನ್ನಾಗಿ ಬೆಳೆದು ಉದ್ದವಾದ ಗರಿಗಳಿಂದಲೂ ಬಿಳಿಯ ಚಾಮರದೋಪಾದಿಯಲ್ಲಿ ಇರುವ ಹೊಂಬಾಳೆಗಳಿಂದಲೂ ಹರಳುಗಾಯಿ ಗಳಿಂದಲೂ ಕುರುಬೆಗಳಿಂದಲೂ ಎಳೆನೀರುಗಳಿಂದಲೂ ಮೋತೆಗಾಯಗಳಿಂದಲೂ ತಳಲುಗಾಯಿ ಗಳಿಂದಲೂ ಒಪ್ಪುತ್ತಿರುವ ತೆಂಗಿನ ಮರವು ತನ್ನ ಬಳಿಯಲ್ಲಿ ತನಗೆ ಸರಿಯಾಗಿ ಬೆಳೆದಿರುವ ಸೀ ಮಾವಿನ ಮರವನ್ನು ನೋಡಿ.-ಎಲೋ ಹೆಮ್ಮೆಗಾರನೇ ! ನಾನೂ ಒಬ್ಬ ದೊಡ್ಡ ಮನುಷ್ಯನೆಂದು ನನಗೆ ಸರಿಯಾಗಿ ನನ್ನ ಬಳಿಯಲ್ಲಿ ನೀನು ನಿಲ್ಲಬಹುದೇ ? ನಿನ್ನ ಫಲವು ಹೊರಗೆ ಮಧುರವಾಗಿದ್ದಾಗ್ಯೂ ಒಳಗೆ ಬಹಳ ಕಠಿಣವಾಗಿದೆ. ಆದು ದರಿಂದ ನಿನ್ನನ್ನು ಬರುವ ಹೊಗುವ ಜನರೆಲ್ಲಾ ಕಲ್ಲಿನಿಂದಲೂ ದೊಣ್ಣೆಗಳಿಂದಲೂ ಹೊಡೆಯುತ್ತಾರೆ. ಇದರ ಮೇಲೂ ನೀನು ವರುಷಕ್ಕೆ ಒಂದೆರಡು ತಿಂಗಳು ಮಾತ್ರ ಜನರಿಗೆ ಉಪಕಾರಿಯಾಗಿದ್ದೀ, ನಾನಾದರೋ ಮುನ್ನೂರು ಅರವತ್ತು ದಿವಸವೂ ಜನರಿಗೆ ಉಪಕಾರವನ್ನು ಮಾಡುತ್ತೇನೆ ಸಿಪ್ಪೆ ಎಂಬ ಚರ್ಮದಿಂದ ಮುಚ್ಚಲ್ಪ 4ುದಾಗಿಯ ಕರಟವೆಂಬ ಬ್ರಹ್ಮಕಪಾಲದಿಂದ ಕೂಡಿದುದಾಗಿಯೂ ಸ್ಪಟಿಕದಂತೆ ಬಿಳುಪಾಗಿಯನ ಮಧುರೋದಕವನ್ನು ಧರಿಸಿದುದಾಗಿಯ ಗಣಪತಿಗೆ ಸಂತೋಷಕ ರವಾಗಿಯ ಮೂರು ಕಣ್ಣುಗಳು ಉಳುದಾಗಿಯೂ ಎತ್ತಿನ ಮೇಲೆ ಸಂಚಾರಮಾಡು ವುದಾಗಿಯೂ ಇರುವ ನನ್ನ ಫಲವನ್ನು ಸಾಕ್ಷಾತ್ ಶಿವನೆಂದು ಎಲ್ಲರೂ ಸೇವಿಸುತ್ತಾರೆ ಎನಲು ಮಾವಿನ ಮರವು ತೆಂಗಿನ ಮರವನ್ನು ಕುರಿತು-ಛೀ ! ಛೇ ! ನೀನು ಯಾವ ದೊಡ್ಡ ಮನುಷ್ಯ ? ದೊಡ್ಡವರು ನಿನ್ನಂತೆ ಮತ್ತೊಬ್ಬರನ್ನು ನಿಂದಿಸುವರೇ ? ತಮ್ಮನ್ನು ತಾವು ಹೊಗಳಿಕೊಳ್ಳುವರೇ ? ನನ್ನ ಫಲದಲ್ಲಿ ಒಳಗೆ ಕಾಠಿಣ್ಯವಿದ್ದರೆ ನಿನ್ನಲ್ಲಿ ಹೊರಗೆ ಕಾಠಿಣ್ಯವದೆ, ಆದರೆ ನನ್ನ ಕಾಠಿಣ್ಯದಲ್ಲಿ ಪ್ರಯೋಜನವಿರುವುದರಿಂದ ಅದನ್ನು ಜನರು ಕುಣಿಯಲ್ಲಿ ನೆಟ್ಟು ನೀರು ಹೊಯ್ತು ಲಾಲಿಸುತ್ತಾರೆ. ನಿನ್ನ ಕಾಠಿಣ್ಯವು ವ್ಯರ್ಥವಾದುದರಿಂದ ಬೆಂಕಿಯಲ್ಲಿ ಹಾಕಿ ಸುಟ್ಟು ಬಿಡುತ್ತಾರೆ. ಶ್ರಮಪಟ್ಟು ಬಂದವ ರನ್ನು ಸದಾಕಾಲವೂ ನನ್ನ ನೆರಳಿನಿಂದ ಸೌಖ್ಯಪಡಿಸುತ್ತೇನೆ, ನೀನು ಮಟ್ಟೆಯನ್ನು ಕೆಡವಿ ಪ್ರಾಣವನ್ನು ಕೊಲ್ಲುವವನಾದುದರಿಂದ ಒಬ್ಬರೂ ನಿನ್ನ ನೆರಳನ್ನು ಸೇರುವು ದಿಲ್ಲ, ಮನ್ಮಥನು ನನ್ನ ಹವೆಂಬ ಬಾಣವನ್ನು ಶಿವನೆದೆಗೆ ಎಸೆಯಲು ಶಿವನು ಸೋತು ಆರೆವೆಣ್ಣೆಯ್ಯಾದನು. ನನ್ನ ಹಣ್ಣೆ ಶಿವನೆಂದು ಹೆಮ್ಮೆಯನ್ನು ಕೊಚ್ಚಿ ಕೊಳ್ಳುತ್ತೀ. ಲೋಕದಲ್ಲಿ ಸರ್ವಗುಣಹೀನವಾದ ವಸ್ತುವೂ ಇಲ್ಲ; ಸರ್ವಗುಣಸಂಪನ್ನ ವಾದ ವಸ್ತುವೂ ಇಲ್ಲ ವೆನಲು ತೆಂಗಿನ ಮರವು ನಾಚಿಕೊಂಡು ಸುಮ್ಮನಾಯಿತು.