ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ 35 34, THE STORY OF A MAHARAJA, ೩೪, ಮಹಾರಾಜನ ಚರಿತ್ರೆಯು, ಮಲೆನಾಡಿನಲ್ಲಿ ರಾಜಮಹೇಂದ್ರವೆಂಬ ಒಂದು ಪಟ್ಟಣವು ಇರುವುದು. ಆ ಪಟ್ಟಣದಲ್ಲಿ ಮಹಾರಾಜನೆಂಬ ಅರಸು ಇರುವನು. ಅವನು ಪ್ರತಿನಿತ್ಯ ದಲ್ಲಿಯೂ ಬೇಟೆ ಯನ್ನು ಆಡಿ ಯಾವುದಾದರೂ ಒಂದು ಮೃಗದ ಮಾಂಸವನ್ನು ತನ್ನ ಅಡಿಗೆಯ ಮನೆಗೆ ತಂದು ಕೊಡುವಂತೆ ಬೇಟೆಗಾರರಿಗೆ ಕಟ್ಟಳೆಯನ್ನು ಮಾಡಿಸಿ ಇದ್ದುದರಿಂದ ಅವರು ಅದೇ ಮೇರೆಗೆ ತಂದು ಕೊಡುತ್ತಾ ಇದ್ದರು. ಅರಸು ಅದನ್ನು ಬಾಣಸಿಗನ ಕೈಯಿಂದ ಅಡಿಗೆಮಾಡಿಸಿ ತಿನ್ನುತ್ತಾ ಇದ್ದನು. ಹೀಗಿರುವಲ್ಲಿ ಒಂದು ದಿವಸ ಸೋನೆಯ ಮಳೆಯು ಜಡಿ ಹಿಡಿದು ಹೊರಗೆ ಕಾಲನ್ನು ಇಡುವುದಕ್ಕೆ ಅವಕಾಶವಿಲ್ಲ ದಹಾಗಾದುದರಿಂದ ಆ ಬೇಟೆಗಾರರು ಹತ್ತು ವರುಷದ ವಯಸ್ಸುಳ್ಳ ಯಾವನೋ ಒಬ್ಬ ಹುಡುಗನನ್ನು ಕೊಂದುಹಾಕಿ ಅವನ ಮಾಂಸವನ್ನು ಅರಸಿನ ಅಡಿಗೆಯ ಮನೆಗೆ ಕೊಟ್ಟರು. ಅಡಿಗೆಯವನು ಪಾಕವನ್ನು ಮಾಡಿ ಅರಸಿಗೆ ಬಡಿಸಲು ಅರಸು ಅದನ್ನು ತಿಂದು ಈ ದಿನದ ಮಾಂಸವು ಬಹಳ ರುಚಿಯಾಗಿದೆ ; ನಿತ್ಯ ದಲ್ಲಿಯ ಈ ದಿವಸ ತಂದ ಮೃಗದ ಮಾಂಸವನ್ನೇ ತಂದು ಕೊಡಿರಿ ಎಂದು ಬೇಟೆಗಾರರಿಗೆ ಕಟ್ಟುಮಾಡಲು ಆ ಬೇಟೆಗಾರರು ಸ್ವಾಮಿ ! ಅಭಯವಾದರೆ ನಡೆದ ವಿವರವನ್ನು ಅರಿಕೆಮಾಡು ತೇವೆ ಅಂದರು, ಅರಸು-ಹೆದರಬೇಡಿರಿ ಹೇಳಿರಿ ಆನ್ನಲು ಬೇಡರು_ಸ್ವಾಮಿ ! ನೆನ್ನೇ ಹಿಡಿದ ಜಡಿಯು ಬಿಡದೆ ಸುರಿಯುತ್ತಾ ಇದ್ದುದರಿಂದ ಹೊರಗೆ ಹೋಗುವುದಕ್ಕೆ ಪಾಲುಮಾರಿ ಹತ್ತು ವರುಷದ ಒಬ್ಬ ಹುಡುಗನನ್ನು ಕೊಂದು ಅವನ ಮಾಂಸವನ್ನು ತಂದು ಕೊಟ್ಟೆವು ಅಂದರು, ಅರಸು ಬೇಟೆಯವರಿಗೆ ಹೋಗಿರಿ ಎಂದು ಹೇಳಿ ಗುಟ್ಟಾಗಿ ಅಡಿಗೆಯವನನ್ನು ಕರೆದು-ಇನ್ನು ಮೇಲೆ ದಿನವಹಿಯಲ್ಲೂ ನನ್ನ ಅಡಿಗೆಯ ಮನೆಗೆ ಯಾವ ಹುಡುಗನು ನಿಂಬೆಯ ಹಣ್ಣಿನ ಹೋಳನ್ನು ತಂದು ಕೊಡುತ್ತಾನೋ ಅವನು ಯಾರೇ ಆಗಲಿ ಅವನನ್ನು ಇರಿದು ಮಾಂಸವನ್ನು ತೆಗೆದು ಪಾಕಮಾಡಿ ನಮಗೆ ಬಡಿಸುತ್ತಾ ಬಾ ಎಂದು ಕಟ್ಟುಮಾಡಿ ತಾನು ನಿತ್ಯದಲ್ಲೂ ಯಾರಾದರೂ ಒಬ್ಬ ಹುಡು ಗನನ್ನು ತನ್ನ ಬಳಿಗೆ ಕರೆದು ಅವನ ಕೈಯಲ್ಲಿ ಒಂದು ನಿಂಬೆಯ ಹಣ್ಣಿನ ಹೋಳನ್ನು ಕೊಟ್ಟು--ನಮ್ಮ ಅಡಿಗೆಯವನಿಗೆ ಇದನ್ನು ತೆಗೆದು ಕೊಂಡು ಹೋಗಿ ಕೊಟ್ಟು ಬಾ ಎಂದು ಕಳುಹಿಸುತ್ತಾ ಇರಲು ಅಡಿಗೆಯವನು ಅವನನ್ನು ಇರಿದು ಅವನ ಮಾಂಸ ದಿಂದ ಪಾಕವನ್ನು ಮಾಡಿ ಅರಸಿಗೆ ಬಡಿಸುತ್ತಾ ಬಂದನು. ಹೀಗೆ ಕೆಲವು ದಿವಸ ನಡೆ ಯುತ್ತಾ ಇರುವಲ್ಲಿ ಒಂದು ದಿವಸ ಈ ಅರಸಿನ ಮಗನೂ ಮತ್ತೊಬ್ಬ ಹುಡುಗನೂ ಲಗ್ಗೆ ಯ ಚೆಂಡನ್ನು ಆಡುತ್ತಾ ಇದ್ದರು, ಅರಸು ಅವರನ್ನು ನೋಡಿ ತನ್ನ ಮಗನ ಜೊತೆಯಲ್ಲಿ ಆಡುವ ಹುಡುಗನನ್ನು ಕರೆದು--ಈ ನಿಂಬೆಯ ಹಣ್ಣಿನ ಹೋಳನ್ನು ನಮ್ಮ ಅಡಿಗೆಯ ಮನೆಗೆ ಕೊಟ್ಟು ಬಾ ಎಂದು ಹೇಳಿ ಕೊಡಲು ಅವನು ಅಡಿಗೆಯ ಮನೆಗೆ ಹೋಗದೆ ತನ್ನ ಜೊತೆಗಾರನಾದ ಈ ಅರಸಿನ ಹುಡುಗನ ಬಳಿಗೆ ಬಂದು ಅರಸು ಹೇಳಿದ ಮಾತನ್ನು ಹೇಳಿದನು. ಅರಸುಮಗನು ಕೇಳಿ--ನೀನು ಚಂಡನ್ನೂ ಲಗ್ಗೆಯನ್ನೂ ಕಾದು