36 KANARESE SELECTIONS—PART I KANARESE SELECTIONS-PART I ಕೊಂಡು ಇರು ; ನಾನು ಕೊಟ್ಟು ಬರುತ್ತೇನೆಂದು ಅವನ ಕೈಯಲ್ಲಿದ್ದ ನಿಂಬೆಯ ಹೋಳನ್ನು ತಾನು ತೆಗೆದು ಕೊಂಡು ಅಡಿಗೆಯ ಮನೆಗೆ ಹೋಗಿ ಅಡಿಗೆಯವನ ಕೈ ಯಲ್ಲಿ ಕೊಡಲು ಅವನು ಮನಸ್ಸಿನಲ್ಲಿ ವ್ಯಸನಪಟ್ಟು ರಾಜಾಜ್ಞೆಯನ್ನು ಮಾರಲಾರದೆ ಅವನನ್ನು ಕಠಾರಿಯಿಂದ ಇರಿದು ಅವನ ಮಾಂಸದಿಂದ ಅಡಿಗೆಯನ್ನು ಮಾಡಿ ಅರಸಿಗೆ ಬಡಿಸಿದನು, ಅರಸು ಅದರಲ್ಲಿ ಒಂದು ಗುಕ್ಕನ್ನಾದರೂ ತಿನ್ನುವುದಕ್ಕೆ ಆಗದೆ ಬಹಳ ಹೊಲಸಾಗಿ ತಿಳಿದು ಅಡಿಗೆಯವನನ್ನು ಕೇಳಲು ಅವನು ನಡೆದ ಸ್ಥಿತಿಯನ್ನು ಹೇಳಿದನು. ಅರಸು ದುಃಖಪಟ್ಟು ನಾನು ಮಾಡಿದ ಪಾಪವೇ ನನಗೆ ಬಂದಿತೆಂದು ಕುದುರೆಯನ್ನೇರಿ ಒಂದು ದೊಡ್ಡ ಕಲ್ಲಿನ ಮೇಲೆ ಹತ್ತಿ ಅದನ್ನು ಅಲ್ಲಿಂದ ಹಾರಿಸಿ ಕೆಳಗೆ ಬಿದ್ದು ಸತ್ತು ಹೋದನು, ಆ ದೊಡ್ಡ ಕಲ್ಲಿಗೆ ಮಗನಕೊಂದ ಮಾರಾಯನದುರ್ಗವೆಂದು ಈಗಲೂ ಹೆಸರಿದೆ. 35. THE RICE AND THE HUSKS. ೩೫, ಅಕ್ಕಿಗಳೂ ಹೊಟ್ಟುಗಳೂ. ಮಧುರವತಿ ಎಂಬ ಪಟ್ಟಣದಲ್ಲಿರುವ ಕೊಟ್ಟಗೇರಿಯಲ್ಲಿ ಒಬ್ಬ ಕೊಟ್ಟಗಾರನ ಮನೆಯೊಳಗೆ ಕೊಟ್ಲದ ಭತ್ತವನ್ನು ತಂದು ಕುಟ್ಟಿ ಕೇರಿ ಹೊಟ್ಟುಗಳನ್ನು ತಿಪ್ಪೆಗೆ ಹಾಕುತ್ತಾ ಚೆನ್ನಾಗಿ ತೊಳಸಿದ ಅಕ್ಕಿಗಳನ್ನು ಕೊಮ್ಮೆಗಳಲ್ಲಿಯೂ ಕಡಿಕೆಗಳಲ್ಲಿಯ ಓಡೆಗಳಲ್ಲಿಯ ಅಳಗೆಗಳಲ್ಲಿಯ ಗೂಡೆಗಳಲ್ಲಿಯ ತುಂಬುತ್ತಾ ಇದ್ದರು, ಅಕ್ಕಿಗಳು ಹೊಟ್ಟು ಗಳನ್ನು ನೋಡಿ--ಎಲೈ ಹೊಟ್ಟುಗಳಿರಾ ! ನೀವೂ ನಾವೂ ಆಗ ಒಬ್ಬನ ಲ್ಲಿಯೇ ಹುಟ್ಟಿ ಪರಸ್ಪರ ಸಂಬಂಧದಿಂದ ನಾವಿಬ್ಬರೂ ಈ ವರೆಗೂ ಜೊತೆಯಲ್ಲೇ ಇದ್ದೆವು, ನಮ್ಮ ಸಂಬಂಧ ತಪ್ಪಿ ನೀವು ಲಘು ಗಳಾದುದರಿಂದ ಈಗ ನಿಮ್ಮನ್ನು ದೂರ ವಾಗಿ ತೆಗೆದುಕೊಂಡು ಹೋಗಿ ಮನೆಯ ಹೊರಗಿರುವ ತಿಪ್ಪೆಗೆ ಸುರಿಯುತ್ತಾರೆ. ನಮ್ಮ ನಾದರೋ ಒಳಗೆ ಇಟ್ಟು ಪೂಜಿಸುತ್ತಾರೆ. ಆದಕಾರಣ ಲೋಕದಲ್ಲಿ ಘನವಂತ ರಿಗೆ ಮರ್ಯಾದೆ ಆಗುತ್ತದೆ ; ನೀಚರಿಗೆ ಅವಮಾನವಾಗುತ್ತದೆ ಎಂದು ಹಾಸ್ಯವನ್ನು ಮಾಡಿದುವು 'ಆಗ ಹೊಟ್ಟು ಗಳು-ಎಲೈ ಅಕ್ಕಿಗಳಿರಾ ? ನಿಮ್ಮ ಉತ್ಪತ್ತಿಯು ಯಾರಿಂದಾಯಿತು ? ಈ ವರೆಗೂ ನಿಮ್ಮ ಬೆಳಸು ಯಾರಿಂದಾಯಿತು ? ನಿಮ್ಮ ಕಾಪಾ ಡುವಿಕೆಯು ಯಾರಿಂದಾಯಿತು ? ಇದನ್ನೆಲ್ಲಾ ಚೆನ್ನಾಗಿ ತಿಳಿದು ನೋಡದೆ ನಿಮ್ಮ ನೆಂಟರಾದ ನಮ್ಮನ್ನು ಹೀಗೆ ಹೀಯಾಳಿಸಿ ನುಡಿಯುವುದು ಯಾವ ನಡತೆ ? ನಾವು ನಿಮ್ಮೊಡನೆ ಇಲ್ಲದೇ ಇದ್ದರೆ ನೀವು ಹುಟ್ಟಿ ವೃದ್ಧಿ ಹೊಂದಲಾರಿರಿ, ತಿಪ್ಪೆಗೆ ಹಾಕಿದ ನಮ್ಮಿಂದಲೇ ನೀವು ಚೆನ್ನಾಗಿ ಬೆಳೆದಿರಿ. ಈ ವರೆಗೂ ನಮ್ಮ ಜೊತೆಯಲ್ಲಿ ಇದ್ದುದ ರಿಂದಲೇ ನೀವು ಸೌಖ್ಯವಾಗಿದ್ದಿರಿ, ಇನ್ನು ಮೇಲೆ ನಿಮಗೆ ಉಂಟಾಗುವ ಕಷ್ಟ ವನ್ನು ಕೇಳಿರಿ : ಜನರು ಮಡಕೆಯಲ್ಲಿಯೋ ತಪ್ಪಲೆಯಲ್ಲಿಯೋ ನೀರನ್ನು ಕುದಿಸಿ ಕುದಿಯುವ ಆ ನೀರಿನಲ್ಲಿ ನಿಮ್ಮನ್ನು ಸುರಿದು ಬೇಯಿಸಿ ನುಂಗಿಬಿಡುವರು, ಒಂದು
ಪುಟ:ಕಥಾಸಂಗ್ರಹ ಸಂಪುಟ ೧.djvu/೪೮
ಗೋಚರ