ಪುಟ:ಕಥಾಸಂಗ್ರಹ ಸಂಪುಟ ೧.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ_೧ನೆಯ ಭಾಗ 37 ವೇಳೆ ಹಾಗಾಗದೆ ನಿಂತಲ್ಲಿ ನಿಮ್ಮನ್ನು ಹುಳುಗಳು ತಿಂದು ಹುಡಿಮಾಡಿ ಹಾಳುಮಾ ಡುವುವು. ಆದು ದರಿಂದ ಬುದ್ದಿವಂತರಾದವರು ತಾವು ದೊಡ್ಡವರೆಂದು ಬಡವರಾದ ಸ್ವಜನಗಳನ್ನು ತಿರಸ್ಕರಿಸದೆ ಅವರೊಡನೆಯೇ ಇದ್ದು ವೃದ್ಧಿಯನ್ನು ಹೊಂದುವರು. ಬುದ್ಧಿಯಿಲ್ಲದವರು ನಿಮ್ಮಂತೆ ಸ್ವಜನಗಳನ್ನು ಬಿಟ್ಟು ಕ್ಷಯಿಸಿ ಹೋಗುವರು ಎಂದು ಪ್ರತ್ಯುತ್ತರವನ್ನು ಕೊಟ್ಟು ದರಿಂದ ಅಕ್ಕಿಗಳು ಅವುಗಳ ಮಾತನ್ನು ಕೇಳಿ ಇದೆಲ್ಲಾ ಯುಕ್ತವೆಂದು ಎಣಿಸಿ ಬಹಳ ವ್ಯಸನಪಟ್ಟು ವು. 36. THE BEES AND THE FROGS. ೩೬, ತು೦ಬಿಗಳೂ ಕಪ್ಪೆಗಳೂ. ಚಂಪಕವನದಲ್ಲಿ ಪದ್ಮಾ ಕರವೆಂಬ ಒಂದು ದೊಡ್ಡ ಕೆರೆಯು ಯಾವಾಗಲೂ ವಿಶೇ ಷವಾದ ಜಲದಿಂದ ಕೂಡಿ ಇತ್ತು, ಅದರಲ್ಲಿ ಕೆಂದಾವರೆಗಳೂ ಬಿಳಿದಾವರೆಗಳೂ ಕನ್ನೆ ದಿಲೆಗಳೂ ಇವೇ ಮೊದಲಾದ ಅನೇಕ ವಿಧವಾದ ಹೂವುಗಳು ಬೆಳೆದು ಬಂಡುಗಳಿಂದ ತುಂಬಿ ಬಹಳ ಸೊಂಪಾಗಿದ್ದುವು. ಮತ್ತೊಂದು ಕಾಡಿನಲ್ಲಿ ಇದ್ದ ತು೦ಬಿಗಳ ಹಿಂಡು ಆ ಕೆರೆಗೆ ಬಂದು ಆ ಹೂವುಗಳಲ್ಲಿ ಕುಳಿತು ಮಕರಂದವನ್ನು ಸವಿಯುತ್ತಾ ಇದ್ದುವು. ಆ ಹೂವುಗಳ ಬುಡದ ಕೆಸರಿನಲ್ಲಿರುವ ಕಪ್ಪೆಗಳು ಈ ಆರಡಿಗಳ ತಂಡವನ್ನು ನೋಡಿ ಎಲೈ ಪರದೇಶಿಗಳಿರಾ ! ನಿಮ್ಮ ದೇಶದಲ್ಲಿ ನಿಮಗೆ ತಿನ್ನುವುದಕ್ಕೆ ಗತಿ ಇಲ್ಲದೆ ನಮ್ಮ ದೇಶಕ್ಕೆ ಬಂದು ಹೊಟ್ಟೆಯನ್ನು ಹೊರಕೊಳ್ಳುತ್ತೀರಾ? ಎಂದು ಕೇಳಿದುದಕ್ಕೆ ಆ ಬಂಡು ಣಿಗಳು ಈ ಮಂಡೂಕಗಳನ್ನು ಕುರಿತು-ಎಲೈ ಮೂಢರುಗಳಿರಾ ! ನಿಮಗೆ ಸ್ವಲ್ಪ ವಾದರೂ ಬುದ್ದಿ ಇಲ್ಲದ ಕಾರಣ ನಿಮ್ಮ ದೇಶದಲ್ಲಿರುವ ಒಳ್ಳೆಯ ವಸ್ತುಗಳ ಗುಣ ಗಳನ್ನು ತಿಳಿಯದೆ ಕೆಸರನ್ನು ತಿಂದು ಹೊಟ್ಟೆಯನ್ನು ಹೊರೆಯುತ್ತಾ ವಟವಟಾ ಎಂದು ಒರಲಿಕೊಳ್ಳುತ್ತೀರಿ, ನಾವು ನಿಮ್ಮ ಆವಿವೇಕವನ್ನೂ ನಿಮ್ಮ ದೇಶದ ವಸ್ತುವಿನ ಗುಣವನ್ನೂ ತಿಳಿದವರಾದುದರಿಂದ ಪರದೇಶದಿಂದ ಬಂದು ನಿಮ್ಮ ದೇಶವನ್ನು ಆಕ್ರ ಮಿಸಿಕೊಂಡು ನಿಮ್ಮ ದೇಶದಲ್ಲಿರುವ ಚೆಲುವಾದ ವಸ್ತುಗಳನ್ನು ಅನುಭವಿಸಿ ಕೇಳುವ ವರ ಕಿವಿಗೆ ಇನಿದಾಗುವ ಹಾಗೆ ಸಂತೋಷದಿಂದ ಸಂಗೀತವನ್ನು ಹಾಡುತ್ತೇವೆ. ಹೀಗೆಯೇ ಬುದ್ದಿವಂತರಾದ ಅನ್ಯದೇಶಸ್ಟರು ಅಪ್ರಬುದ್ಧರ ದೇಶಗಳನ್ನು ಸ್ವಾಧೀನಮಾ ಡಿಕೊಂಡು ಸುಖಪಡುತ್ತಾರೆ. ಸ್ವದೇಶಸ್ಥರು ಅವರು ತಿಂದು ಮಿಕ್ಕ ವಸ್ತುವಿನಿಂದ ಉದರಭರಣವನ್ನು ಮಾಡಿಕೊಂಡು ಕಷ್ಟ ಪಡುತ್ತಾರೆ. ನೀವು ಹಿಂದೆ ದೇವರಿಗೆ ಚೆನ್ನಾಗಿ ಪ್ರಾರ್ಥನೆಯನ್ನು ಮಾಡದೆ ಹೋದುದರಿಂದ ನಿಮಗೆ ಇಂಥಾ ಕಷ್ಟ ಸಂಭ ವಿಸಿತು. ನಾವು ಏಕಮನಸ್ಸಿನಿಂದ ದೇವರನ್ನು ಚೆನ್ನಾಗಿ ಪ್ರಾರ್ಥಿಸಿದುದರಿಂದ ಅನ್ಯದೇ ಶದಲ್ಲಿಯ ನಮಗೆ ದೇವರು ಹೀಗೆ ಸೌಖ್ಯವನ್ನು ಕೊಟ್ಟು ಇದ್ದಾನೆ ; ಮುಂದೆಯೂ ಕೊಡುವನು ಅಂದುವು, ಕಪ್ಪೆಗಳು ಕೇಳಿ ಸುಮ್ಮನಾದುವು.