ಪುಟ:ಕಥಾಸಂಗ್ರಹ ಸಂಪುಟ ೧.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 KANARESE SELECTIONS-PART T 37. SHIBICHAKRAVARTI. ೩೭, ಶಿಬಿಚಕ್ರವರ್ತಿಯು. ಪೂರ್ವದಲ್ಲಿ ಮಹಾ ಸತ್ಯವಂತನಾದ ಶಿಬಿಚಕ್ರವರ್ತಿ ಎಂಬ ಒಬ್ಬ ಅರಸನಿದ್ದನು. ಆತ ಸತ್ಯವನ್ನು ಪರೀಕ್ಷಿಸಬೇಕೆಂದು ಇಂದ್ರನೂ ಅಗ್ನಿಯ ಆಲೋಚಿಸಿ ಇಂದ್ರನು ಡೇಗೆಯ ಹಕ್ಕಿಯಾದನು ; ಅಗ್ನಿ ಯು ಕಪೋತಪಕ್ಷಿ ಯಾದನು. ಅವರು ಈ ಮೇರೆಗೆ ರೂಪಗಳನ್ನು ಧರಿಸಿದ ಮೇಲೆ ಆ ಡೇಗೆಯು ಆ ಕಪೋತವನ್ನು ಹಿಡಿದು ಭಕ್ಷಿಸುವು ದಕ್ಕೆ ಅದರ ಬೆನ್ನು ಹತ್ತಿ ಅಟ್ಟಿ ಕೊಂಡು ಬರಲು ಆ ಕಪೋತವು ಪ್ರಾಣಭೀತಿಯಿಂ ದಲೋ ಎಂಬಂತೆ ಓಡುತ್ತಾ ಓಡುತ್ತಾ ಶಿಬಿಚಕ್ರವರ್ತಿಯ ಬಳಿಗೆ ಬಂದು ಆ ರಾಯನನ್ನು ಕುರಿತುಓ ಸತ್ಯಸಂಧನೇ ! ಪ್ರಾಣಭೀತಿಯಿಂದ ನಾನು ನಿನ್ನ ಮರೆ ಯನ್ನು ಹೊಕ್ಕು ಇದ್ದೇನೆ ; ನನ್ನನ್ನು ಕೈಬಿಡದೆ ರಕ್ಷಿಸಯ್ಯಾ ! ಎಂದು ಹೇಳುತ್ತಾ ಅವನ ಬೆನ್ನಿನ ಮರೆಯಲ್ಲಿ ನಿಂತಿತು. ಆಗ ಅವನು-ಎಲೈ ಕಪೋತವೇ ! ಅಂಜ ಬೇಡ, ನಿನ್ನ ಪ್ರಾಣಕ್ಕೆ ಬದಲಾಗಿ ನನ್ನ ಪ್ರಾಣವನ್ನಾ ದರೂ ಕೊಟ್ಟು ನಿನ್ನನ್ನು ಸಂರ ಕ್ಷಿಸುವೆನೇ ಹೊರತು ಶರಣಾಗತನಾದ ನಿನ್ನನ್ನು ಬಿಟ್ಟು ಕೊಡುವುದಿಲ್ಲ ವೆಂದು ಅಭಯ ವನ್ನು ಕೊಟ್ಟು ಮಾತಾಡುತ್ತಿದ್ದ ಅರಸಿನ ಎದುರಿಗೆ ತೀಕ್ಷ್ಯವಾದ ಮತಿಯುಳ್ಳ ಡೇಗೆಯು ಬಂದು ಕೂತುಕೊಂಡು - ಎಲೈ ಸತ್ಯವಂತನಾದ ರಾಯನೇ ! ನನಗೆ ಆಹಾರಾರ್ಧವಾಗಿ ದೇವರು ನಿರ್ಮಾಣವನ್ನು ಮಾಡಿದ ಈ ಕಪೋತಪಕ್ಷಿಯು ನಿನ್ನ ಹಿಂದೆ ಕೂತುಕೊಂಡು ಇರುವುದು, ನೀನು ಪ್ರಭುವಾದ ಕಾರಣ ನಿನ್ನ ಮಾತಿಲ್ಲದೆ ನಾನು ಅದನ್ನು ಹಿಡಿದು ಕೊಳ್ಳಕೂಡದು, ಇದು ಧರ್ಮವೆಂದು ತಿಳಿದು ನಿನಗೆ ಹೇಳಿ ಇದ್ದೇನೆ, ಆದುದರಿಂದ ಧರ್ಮಾತ್ಮನೇ ! ನನ್ನ ಆಹಾರವನ್ನು ನನಗೆ ದಯಮಾಡಿ ಕೊಟ್ಟು ಕೀರ್ತಿಯನ್ನು ಸಂಪಾದಿಸಯ್ಯಾ ! ಎಂದು ಹೇಳಲು ಅರಸನು ಶೈನಪಕ್ಷಿ ಯ ವಾಕ್ಯವನ್ನು ಕೇಳಿ ಆಶ್ಚರ್ಯದಿಂದ ನಕ್ಕು-ಎಲೈ ಪಕ್ಷಿ ಶ್ರೇಷ್ಠನೇ ! ನೀನು ಮಹಾ ಪರಾಕ್ರಮಶಾಲಿಯಾಗಿ ಸಕಲ ಪಕ್ಷಿಗಳನ್ನೂ ಹಿಂಸಿಸಿ ತಿನ್ನುವುದು ನಿನಗೆ ಧರ್ಮವೇ ಸರಿ ಆದಾಗ್ಯೂ ಇದು ನನ್ನ ಬೆನ್ನಿನ ಮರೆಬೀಳುವುದಕ್ಕೆ ಮುಂಚಿತವಾಗಿಯೇ ನೀನಿ ದನ್ನು ಹಿಡಿದು ಭಕ್ಷಿಸಿ ಇದ್ದರೆ ನಿರ್ವಿವಾದವಾಗಿತ್ತು, ಈಗ ನನ್ನ ಮರೆಬಿದ್ದು ನನ್ನನ್ನು ರಕ್ಸಿ ಸೈ ! ಎಂದು ಮೊರೆ ಇಡುವ ಈ ಸಾಧು ಕಪೋತವನ್ನು ನಿನಗೆ ಒಪ್ಪಿಸಿ ಕೊಲ್ಲಿಸಿ ದರೆ ನಾನು ಯಾವ ಲೋಕದಲ್ಲಿ ಏನಾಗಿ ಬಾಧೆಪಡಲಿ ? ಮತ್ತು ಮರೆಹೊಕ್ಕವರನ್ನು ಕಾಯದೆ ಬಿಟ್ಟರೆ ಅರಸುಗಳಿಗೆ ಅದಕ್ಕಿಂತಲೂ ಬೇರೊಂದು ಹಾನಿಯಾದ ಕೆಲಸ ಎಲ್ಲಿಯೂ ಇಲ್ಲ, ನೀನು ಬೇರೆ ಆಹಾರವನ್ನು ಹುಡುಕಿಕೊಂಡು ಈ ಪಕ್ಷಿಯನ್ನು ಬಿಡು, ಇಲ್ಲವಾಯಿತೇ ? ನಿನ್ನ ಆಹಾರಕ್ಕೆ ತಕ್ಕ ಹಾಗೆ ಮಾಂಸವನ್ನು ತರಿಸಿ ಕೊಡು ವೆನು ; ಅದನ್ನು ಭಕ್ಷಿಸಿ ಸುಖದಿಂದ ಹೋಗು ಎಂದು ಹೇಳಿದನು. ಹಾಗೆ ಹೇಳಿದ ಚಕ್ರವರ್ತಿಯನ್ನು ಕುರಿತು ಶೈನನಿಂತೆಂದಿತು-ಅಯ್ಯಾ, ಭೂಪಾಲತಿಲಕನೇ ! ನಿನ್ನ ಮಾತು ಸತ್ಯವೇ ಸರಿ. ಆದರೂ ನನಗೆ ದೈವದತ್ತ ವಾದ ಈ ಕಪೋತದ ಮಾಂಸಕ್ಕಿಂ ತಲೂ ಇನ್ನು ಬೇರೆ ಮೃಗಪಕ್ಷಿಗಳ ಮಾಂಸಗಳು ರುಚಿಯಾಗಿರವು, ನನಗೆ ಆವು