ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 39 ಬೇಡವೇ ಬೇಡ, ನೀನು ಅಷ್ಟು ದಯಾಳುತ್ವವನ್ನು ವಹಿಸಿ ನನ್ನ ಆಹಾರವಾದ ಈ ಕಪೋತವನ್ನು ರಕ್ಷಿಸಬೇಕೆಂದು ಮನಸ್ಸು ಮಾಡಿದರೆ ದಿವ್ಯಭೋಜನದಿಂದ ಬೆಳೆದ ನಿನ್ನ ಶರೀರಮಾಂಸವನ್ನು ಈ ಕಪೋತದ ತೂಕಕ್ಕೆ ಸರಿಯಾಗಿ ಕೊಡು, ಅದನ್ನು ನಾನು ಭುಂಜಿಸಿ ಈ ಕಪೋತವನ್ನು ಬಿಟ್ಟು ಹೋಗುತ್ತೇನೆಂದು ಹೇಳಲು ಮಹಾ ದಯಾಳು ವಾದ ಆ ಶಿಬಿಚಕ್ರವರ್ತಿಯು `ಪರಮಸಂತೋಷವನ್ನು ಹೊಂದಿ-ಎಲೈ ಚೈನ ಪಕ್ಷಿಯೇ ! ಹಾಗೆಯೇ ಆಗಲಿ ; ನನ್ನ ಮಾಂಸವನ್ನೇ ಕೊಡುತ್ತೇನೆಂದು ಹೇಳಿ ಮಹಾ ತೀಕ್ಷ್ಯವಾದ ಅಲಗುಳ್ಳ ಖಡ್ಗ ದಿಂದ ತನ್ನ ಕೋಮಲವಾದ ಅಂಗದ ಮಾಂಸವನ್ನು ಖಂಡಖಂಡವಾಗಿ ಕೊಯಿದು ಕೊಯಿದು ಒಂದು ತಾಸಿನ ಒಂದು ಪಕ್ಕದಲ್ಲಿ ಕಪೋ ತವನ್ನು ಇಟ್ಟು ಇನ್ನೊಂದು ಕಡೆಯಲ್ಲಿ ಅದಕ್ಕೆ ಸರಿತೂಕವಾಗಿ ಹಾಕುತ್ತಾ ಹಾಕುತ್ತಾ ಇದ್ದರೂ ಆ ಕಪೋತಕ್ಕೆ ಸರಿಯಾಗಿ ಮಾಂಸವು ತೂಗಲಾರದೆ ಹೋಯಿ ತು, ಆಗಲಾರಾಯನು ಅತಿಶಾ೦ತತ್ವವನ್ನು ತಾಳಿ ಸತ್ಯವನ್ನು ಈಡೇರಿಸಬೇಕೆಂದು ತನ್ನ ಶಿರಸ್ಸನ್ನು ಖಂಡಿಸಿಕೊಡುವುದಕ್ಕೆ ಕಂಠ ಪ್ರದೇಶಕ್ಕೆ ಖಡ್ಗವನ್ನು ಚಾಚಿದನು, ಆಗಲಾ ಇಂದ್ರಾಗ್ನಿಗಳಿಬ್ಬರೂ ಶೈನಕಪೋತ ರೂಪಗಳನ್ನು ಬಿಟ್ಟು ನಿಜರೂಪಗಳಿಂದ ಅರಸಿನ ಎದುರಿಗೆ ನಿಂತು ಅವನ ಕೈಯಲ್ಲಿ ಇದ್ದ ಖಡ್ಗವನ್ನು ಅಡ್ಡಗಿಸಿ ಹಿಡಿದು ಇಂತೆಂದರು ಓ ಸತ್ಯ ಪ್ರತಿಜ್ಞೆಯುಳ್ಳ ಚಕ್ರವರ್ತಿಯೇ ! ನಿನ್ನ ಅಸಾಧಾರಣವಾದ ಸತ್ಯಸಂಧತೆಗೆ ಮೆಚ್ಚಿದೆವು. ನಾವು ಇಂದ್ರಾಗ್ನಿಗಳು ನಿನ್ನ ಸತ್ಯಗುಣವನ್ನು ಪರೀಕ್ಷೆ ಮಾಡಬೇಕೆಂಬ ರ್ಧದಿಂದ ಬಂದು ಅದನ್ನು ಸಾಂಗವಾಗಿ ಪರೀಕ್ಷಿಸಿದೆವು, ದೃಢವಾದ ನಿನ್ನ ಸತ್ಯಕ್ಕೆ ಮೆಚ್ಚಿದೆವು ಎಂದು ಹೇಳಿ ತಮ್ಮ ಲೋಕಕ್ಕೆ ಹೊರಟು ಹೋದರು. 38. THE MERCHANT AND THE IDOL. ೩೮, ಕೋಮಟಿಗನೂ ವಿನಾಯಕನೂ. ಬೆಳವಾಡಿ ಎಂಬ ಗ್ರಾಮದಲ್ಲಿ ರಾಮಶೆಟ್ಟಿ ಎಂಬ ಒಬ್ಬ ಕೋಮಟಿಗನು ಇದ್ದನು. ಆತನು ತನ್ನ ಗ್ರಾಮಕ್ಕೆ ಸವಿಾಪವಾಗಿರುವ ಊರಿನಲ್ಲಿ ಪ್ರತಿಸೋಮವಾ ರವೂ ತಪ್ಪದೆ ನಡೆಯುವ ಸಂತೆಗೆ ಹೋಗಿ ತೆಂಗಿನಕಾಯಿ ಬಾಳೆಯಹಣ್ಣು ಹುರಿಗಡಲೆ ಕೊಬರಿ ಬುರುಗು ಅಡಕೆ ಎಲೆ ಮುಂತಾದ ಚಿಲ್ಲರೆಯ ಸಾಮಾನುಗಳನ್ನು ಲಾಭಕ್ಕೆ ಮಾರಿ ಆ ಲಾಭದ ಹಣದಿಂದ ಕಷ್ಟ ಪಟ್ಟು ಜೀವನವನ್ನು ಮಾಡುತ್ತಾ ಇದ್ದನು. ಅವನ ನೆರೆಯವನಾದ ಸಂಜೀವಶೆಟ್ಟಿ ಎಂಬುವನು ಇವನ ಹಾಗೆಯೇ ಚಿಲ್ಲರೆ ವ್ಯಾಪಾರಗ ಳನ್ನು ಮಾಡುತ್ತಾ ಇದ್ದ ರೂ ಬಹು ಲಾಭವನ್ನು ಸಂಪಾದಿಸಿಕೊಂಡು ಸುಖವಾಗಿ ಇದ್ದನು, ರಾಮಶೆಟ್ಟಿ ಯು ಒಂದು ದಿವಸ ತನ್ನ ನೆರೆಯವನಾದ ಸಂಜೀವಶೆಟ್ಟಿಯ ಸಂಗಡ ವ್ಯಾಪಾರಗಳ ವಿಷಯವಾಗಿ ಮಾತಾಡುತ್ತಾ ಇದ್ದು ಅವನನ್ನು ಕುರಿತು ಎಲೈ ಸೆಟ್ಟಿಯೇ ! ನಾವಿಬ್ಬರೂ ಒಂದೇ ಸಮವಾದ ಬಂಡವಾಳವನ್ನು ಇಟ್ಟು ಕೊಂಡು ಒಂದೇ ವಿಧವಾದ ವ್ಯಾಪಾರವನ್ನು ಮಾಡುತ್ತೇವೆ, ಆದರೆ ನಿನಗೆ ಬಹಳ ಲಾಭ ಬರು