KANARESE SELECTIONS-PART I ಇದೆ ; ನನಗೆ ಮಾತ್ರ ಸ್ವಲ್ಪ ಲಾಭ ಬರುತ್ತದೆ. ಇದಕ್ಕೆ ಏನು ಕಾರಣವೆಂದು ಕೇಳಲು ಆ ಸಂಜೀವಶೆಟ್ಟಿ ಯು-ಎಲೈ ಸೆಟ್ಟಿ ಯೇ ! ನಾವು ವ್ಯಾಪಾರಕ್ಕೆ ಹೋಗುವಂಥ ಸೋಮವಾರ ಸಂತೆಯಾಗುವ ಊರುಬಾಗಲಿನ ಹತ್ತಿರದಲ್ಲಿ ಒಂದು ವಿನಾಯಕನ ಗುಡಿಯು ಇದೆಯಷ್ಟೆ, ಆ ವಿನಾಯಕನು ಬಹು ಸತ್ಯವುಳ್ಳ ದೇವರು, ನಾನು ಸಂತೆಗೆ ಹೋಗುವಾಗಲೆಲ್ಲಾ ಆ ಗುಡಿಗೆ ಹೋಗಿ ವಿನಾಯಕನಿಗೆ ನಮಸ್ಕರಿಸಿ-ಎಲೈ ಗಣ ಪತಿಯೇ ! ಈ ದಿವಸ ನನಗೆ ಬಹಳ ಲಾಭವು ಬಂದರೆ ಅದರ ನಾಲ್ಕರಲ್ಲಿ ಒಂದು ಪಾಲನ್ನು ನಿನಗೆ ಒಪ್ಪಿಸುತ್ತೇನೆ ಎಂದು ಬೇಡಿಕೊಂಡು ವ್ಯಾಪಾರಕ್ಕೆ ಆರಂಭಿಸಿದ ಮೇಲೆ ಹಾಗೆಯೇ ಬಂದ ಹೆಚ್ಚು ಲಾಭದಲ್ಲಿ ನಾಲ್ಕರೊಳಗೆ ಒಂದು ಪಾಲನ್ನು ಆ ಗಣಪತಿಗೆ ಒಪ್ಪಿಸುತ್ತಾ ಬರುತ್ತೇನೆ. ಆದುದರಿಂದ ನನಗೆ ಬಹು ಲಾಭ ಬರುತ್ತದೆ ಎಂದು ಹೇಳಲು ರಾಮಶೆಟ್ಟಿ ಯು ತಾನೂ ಹಾಗೆಯೇ ಮಾಡಬೇಕೆಂದು ಯೋಚಿಸಿ ಸಂತೆಗೆ ಹೋದಾಗ ಮೊದಲು ಆ ದೇವರ ಗುಡಿಗೆ ಹೋಗಿ ವಿನಾಯಕನಿಗೆ ಅಡ್ಡ ಬಿದ್ದು ಸ್ವಾಮೀಾ ! ನಾನು ಈಗ ಸಂತೆಯ ವ್ಯಾಪಾರಕ್ಕೆ ಹೋಗುತ್ತೇನೆ ; ನನಗೆ ಈ ದಿವಸ ಹೆಚ್ಚಾದ ಲಾಭವು ಬಂದರೆ ಸತ್ಯವಾಗಿ ನಿನ್ನ ಪಾದಕ್ಕೆ ಒಂದು ಗೋಣಿಯ ಹಣ್ಣನ್ನೂ ಒಂದು ಗೋಣಿಯ ಕಾಯಿಯನ್ನೂ ಒಪ್ಪಿಸುತ್ತೇನೆಂದು ಹರಕೆಯನ್ನು ಮಾಡಿ ಕೊಂಡು ಸಂತೆಗೆ ಹೋಗಿ ವ್ಯಾಪಾರವನ್ನು ಮಾಡಲು ಅ ದಿನ ಪೂರ್ವಕ್ಕಿಂತಲೂ ಹೆಚ್ಚಾಗಿ ಲಾಭ ಬಂದುದರಿಂದ ಬಹಳ ಸಂತೋಷಪಟ್ಟು ಕೊಂಡು ಸಾಯಂಕಾಲವಾದ ಮೇಲೆ ನನ್ನ ಊರಿಗೆ ಹಿಂದಿರುಗಿ ಹೋಗಬೇಕೆಂದು ಹೊರಟು ವಿನಾಯಕನ ಗುಡಿಯ ಬಳಿಗೆ ಬಂದು ತಾನು ಮಾಡಿದ ಹರಕೆಯನ್ನು ಜ್ಞಾಪಕಮಾಡಿಕೊಂಡು ಅನ್ಯಾಯ ವಾಗಿ ಈ ದೇವರಿಗೆ ಒಂದು ಗೋಣಿಯ ಕಾಯಿಯನ್ನೂ ಒಂದು ಗೋಣಿಯ ಹಣ್ಣನ್ನೂ ಕೊಡಬೇಕಲ್ಲಾ! ಎಂದು ಯೋಚಿಸಿ ಅಲ್ಲಿ ಸಾಲುಮರಗಳಲ್ಲಿ ಒಂದು ಗೋಣಿಮರವನ್ನು ಕಂಡು ಆ ಮರವನ್ನು ಹತ್ತಿ ಒಂದು ಹಣ್ಣನ್ನೂ ಒಂದು ಕಾಯಿ ಯನ್ನೂ ಕಿತ್ತು ಕೊಂಡು ವಿನಾಯಕನ ಗುಡಿಯ ಒಳಗಡೆಗೆ ಹೋಗಿ ದೇವರಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ ಸ್ವಾಮಿಾ ! ನನ್ನ ಹರಕೆಯ ಪ್ರಕಾರ ಒಂದು ಗೋಣಿಯ ಹಣ್ಣನ್ನೂ ಒಂದು ಗೋಣಿಯ ಕಾಯಿಯನ್ನೂ ನಿನಗೆ ಒಪ್ಪಿಸಿದ್ದೇನೆ ! ದಯಮಾಡಿ ತೆಗೆದುಕೊಳ್ಳಬೇಕೆಂದು ತಾನು ತಂದಿದ್ದ ಕಾಯಿ ಹಣ್ಣುಗಳನ್ನು ಆ ದೇವರ ಪಾದದ ಮೇಲೆ ಇಟ್ಟು ತನ್ನ ಊರಿಗೆ ಹೊರಟು ಬಂದನು. 39. THE MUSALMAN TRICKED BY A MERCHANT. ೩೯, ಕೋಮಟಿಗನು ತುರುಕನನ್ನು ವಂಚಿಸಿದುದು. ಸೋಮಪುರವೆಂಬ ಅಗ್ರಹಾರದಲ್ಲಿ ಚಂದ್ರಭಟ್ಟನೆಂಬ ಒಬ್ಬ ಬ್ರಾಹ್ಮಣನು ಇದ್ದನು. ಆತನು ಜಾತಿಮಾದೆಯನ್ನು ಅತಿಕ್ರಮಿಸಿ ನಡೆಯದೆ ಯಾಚನೆಯಿಂದ ಜೀವನವನ್ನು ಮಾಡಿ ಕೊಂಡು ಇರುತ್ತಾ ಒಂದು ದಿವಸ ಧಾರಾಪಟ್ಟಣದ ಅರಸು
ಪುಟ:ಕಥಾಸಂಗ್ರಹ ಸಂಪುಟ ೧.djvu/೫೨
ಗೋಚರ