ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 41 ಬ್ರಾಹ್ಮಣರಿಗೆ ಬಹು ದ್ರವ್ಯವನ್ನು ದಕ್ಷಿಣೆಯಾಗಿ ಕೊಡುತ್ತಾನೆಂಬ ವಾರ್ತೆಯನ್ನು ಕೇಳಿ ಅವನ ಬಳಿಯಲ್ಲಿ ಏನಾದರೂ ಸಂಭಾವನೆಯನ್ನು ತಾನೂ ತೆಗೆದುಕೊಂಡು ಬರಬೇಕೆಂದು ಆಲೋಚಿಸಿ ಒಬ್ಬನೇ ಹೊರಟು ಆ ಧಾರಾಪಟ್ಟಣದ ಹೊರಗಿರುವ ಉದ್ಯಾನವನವನ್ನು ಸೇರಿ ಅಲ್ಲಿ ನಿಮ್ಮಲೋದಕದಿಂದ ಶೋಭಿತವಾಗಿಯೂ ನಾನಾವಿಧ ಜಲಪಕಿ ಗಳ ಮಧುರಾಲಾಪಗಳಿಂದ ಮನೋಹರವಾಗಿಯ ವಿಕಾಸಮಾನಗ ಳಾದ ಕೆಂದಾವರೆ ಬಿಳಿದಾವರೆ ಕನ್ನೈದಿಲೆ ಮೊದಲಾದ ಪುಷ್ಪಗಳಿಂದ ರಮಣೀಯವಾ ಗಿಯ ಇರುವ ಒಂದು ಸರಸ್ಸನ್ನು ಕಂಡು ತಾನೂ ಮಾರ್ಗಶ್ರಮವುಳ್ಳವನಾದುದ ರಿಂದ ಅದರ ಪರಿಹಾರಾರ್ಥವಾಗಿ ಈ ತಣ್ಣೀರಲ್ಲಿ ಸ್ನಾನವನ್ನು ಮಾಡಿ ಬುತ್ತಿಯ ನುಂಡು ಸ್ವಲ್ಪ ವಿಶ್ರಮಿಸಿಕೊಂಡಿದ್ದು ಅನಂತರ ಪುರಪ್ರವೇಶವನ್ನು ಮಾಡೋಣ ಎಂದು ಅಂದುಕೊಂಡು ಆ ಕೊಳದಲ್ಲಿ ಇಳಿದು ಮುಖಪ್ರಕ್ಷಾಳನವನ್ನು ಮಾಡಿ ತದನಂತರ ಸ್ನಾನವನ್ನು ತೀರಿಸಿ ದೇವರ ಪೂಜೆಗೆ ತೋಳ! ಎಂದು ಅಲ್ಲಲ್ಲಿ ತೊಳಸಿಯನ್ನು ಹುಡುಕುತ್ತಾ ಆ ಉದ್ಯಾನವನದ ಸಮೀಪದಲ್ಲಿ ಇರುವ ಒಂದು ತುರುಕರ ಮಸೀತಿಯ ಹತ್ತಿರದಲ್ಲಿ ತಮ್ಮಷ್ಟಕ್ಕೆ ತಾವೇ ಹುಟ್ಟಿರುವ ಕೆಲವು ತೊಳಸಿಯ ಗಿಡಗಳನ್ನು ನೋಡಿ ತಾನು ತಂದಿದ್ದ ತಂಬಿಗೆಯ ನೀರನ್ನು ಆ ಗಿಡಗಳಿಗೆ ಹೊಯಿದು ಅವುಗಳ ಬುಡದ ಮಣ್ಣಿನ ನೀರನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ಆ ತೊಳಸಿಯ ಗಿಡಗಳಿಗೆ ಪ್ರದಕ್ಷಿ ಣನಮಸ್ಕಾರಗಳನ್ನು ಮಾಡಿ ಕೈಮುಗಿದು ಅನಂ ತರ ದಳದಳವಾಗಿ ಕೊಯ್ಯುತ್ತಿರಲು ಇದನ್ನೆಲ್ಲಾ ನೋಡುತ್ತಾ ಇದ್ದ ಆ ಮಸೀ ತಿಯ ಒಬ್ಬ ತುರುಕನು ಈ ಬ್ರಾಹ್ಮಣನ ಬಳಿಗೆ ಬಂದು--ಎಲೋ ಬ್ರಾಹ್ಮಣನೇ ! ನೀನು ಹುಚ್ಚನೋ ? ಇದೇನು ? ಈ ಗಿಡಕ್ಕೆ ನಮಸ್ಕಾರವನ್ನು ಮಾಡುತ್ತೀ ! ಎಂದು ಕೇಳಲು ಬ್ರಾಹ್ಮಣನು ಆ ಮೈಕ್ಷನನ್ನು ಕುರಿತು-ಅಯ್ಯಾ ಸಾಬರೇ ! ಇದು ಸಾಧಾರಣವಾದ ಗಿಡವಲ್ಲ ; ಇದು ನಮ್ಮ ದೇವರು. ಆದುದರಿಂದ ಇದಕ್ಕೆ ವಂದನೆಯನ್ನು ಮಾಡುತ್ತೇನೆ ಎನಲು ಆ ತುರುಕನು--ಎಲೋ ಹಾರವ ! ಇದು ನಿನ್ನ ದೇವರೋ ? ಇದರ ಕೈಯಲ್ಲಿ ಏನು ಆದೀತು ? ಇದಕ್ಕೆ ನನ್ನ ಮೈ ಕೂದಲನ್ನು ನಾಶಮಾಡುವುದಕ್ಕೂ ಶಕ್ತಿ ಸಾಲದು ಎಂದು ಹೇಳಿ ಆ ತೊಳಸಿಯ ಗಿಡವನ್ನು ತನ್ನ ಕಾಲು ಜೋಡಿನಿಂದ ಹೊಡೆದು ಬೇರು ಸಹಿತ ಕಿತ್ತು ಅದನ್ನು ತನ್ನ ಮೈ ಮೇ ಲೆಲ್ಲಾ ಉದ್ಯೆ ಹೊಸಕಿ ಕೆಳಕ್ಕೆ ಹಾಕಿ ಆ ದ್ವಿಜನನ್ನು ಕುರಿತು-ನಿನ್ನ ದೇವರ ಶಕ್ತಿ ಯನ್ನು ನೋಡಿದೆಯಾ ? ಎಂದು ಹಾಸ್ಯವನ್ನು ಮಾಡುತ್ತಾ ಹೊರಟುಹೋದನು. ಆಗ ಆ ಊರಿನ ಸಮೀಪದಲ್ಲಿರುವ ಹಳ್ಳಿಗೆ ವ್ಯಾಪಾರವನ್ನು ಮಾಡುವುದಕ್ಕೋಸ್ಕರ ಮಸೀತಿಯ ಹತ್ತಿರವೇ ಹೋಗುತ್ತಾ ಇದ್ದ ಒಬ್ಬ ಕೋಮಟಿ ಸೆಟ್ಟಿಯು ಆ ತುರು ಕನು ಮಾಡಿದ ಕಾಕ್ಯಗಳನ್ನೆಲ್ಲಾ ಚೆನ್ನಾಗಿ ನೋಡಿ ಈ ಮೈಕ್ಷನನ್ನು ಮೋಸಗೊಳಿಸ ಬೇಕೆಂದು ಎಣಿಸಿ ಅವನು ನೋಡುವ ಹಾಗೆಯೇ ತನ್ನ ಹೆಗಲಿನ ಮೇಲೆ ಇದ್ದ ಹಸಿ ಬೆಯ ಚೀಲವನ್ನು ಒಂದು ಮರದ ಬುಡದಲ್ಲಿ ಇಟ್ಟು ಅಲ್ಲಿ ಪೊದೆಯಾಗಿ ಬೆಳೆದು ಇರುವ ಒಂದು ತುರುಚನದ ಗಿಡಕ್ಕೆ ಸುಮ್ಮನೆ ಪ್ರದಕ್ಷಿಣೆಯನ್ನು ಮಾಡಿ ನಮಸ್ಕಾ