42 KANARESE SELECTIONS-PART I ರವನ್ನು ಮಾಡುತ್ತಾ ಇದ್ದನು. ಇದನ್ನು ನೋಡುತ್ತಾ ಇದ್ದ ಅದೇ ತುರುಕನುಇವನಿಗೂ ಆ ಹಾರವನಿಗೆ ಹಿಡಿದ ಹುಚ್ಚು ಹಿಡಿದು ಇದೆ ಎಂದು ಅಂದುಕೊಂಡು ಆ ಸೆಟ್ಟಿಯ ಬಳಿಗೆ ಬಂದು-ಎಲೋ ಕೋಮಟೇ ! ಇದೇನು ? ಈ ಗಿಡಕ್ಕೆ ಪ್ರದಕ್ಷಿ ಇನಮಸ್ಕಾರಗಳನ್ನು ಮಾಡುತ್ತೀ ! ಎಂದು ಕೇಳಲು ಆ ವಕ್ತ ಕನು--ಅಯ್ಯಾ, ಸಾಹೇ ಬರೇ ! ಇದು ನಮ್ಮ ಮನೆಯ ದೇವರು ಬಹಳ ಕ್ರೂರವಾದುದು, ಇದನ್ನು ಪೂರ್ ಭಕ್ತಿಯಿಂದ ಪೂಜಿಸಬೇಕು ಎಂದು ಹೇಳಲು ಆ ತುರುಕನು-ಛೀ ! ಛೇ ! ನೀವೆಲ್ಲರೂ ಬುದಿ ಹೀನರು ! ಈ ಎಲೆಯಲ್ಲಿ ಏನು ಸತ್ಯವಿದೆ ? ಎಂದು ಆ ಕೋಮಟಿಯನು ಧಿಕ್ಕರಿಸಿ ಗರದಿಂದ ಆ ಗಿಡವನ್ನು ಬೇರುಸಹಿತ ಕಿತ್ತು ಅದರ ಎಲೆಗಳನ್ನು ತನ್ನ ಕಾಲುಗಳಿಗೆ ಉಜಿ ಕೊಂಡು ಬಿಸಾಟುಬಿಟ್ಟನು, ಕೂಡಲೇ ಅವನಿಗೆ ಬಹಳ ನವೆಯ ಉರಿಯ ಉಂಟಾಗಿ ಬಹಳ ಶ್ರಮಪಡುತ್ತಾ ಆ ಕೋಮಟಿಯನ್ನು ನೋಡಿ-ಸೆಟ್ಟ ರೇ ! ನಿಮ್ಮ ಮಾತು ಸತ್ಯ, ನಿಮ್ಮ ದೇವರು ಬಹಳ ಕೂರವಾದುದು. ಈಗ ನನ್ನ ಮೈಯೆಲ್ಲಾ ನವೆಯಾಗುತ್ತದೆ, ಉರಿಯು ಬಲವಾಗಿದೆ. ಇದಕ್ಕೆ ಏನು ಮಾಡಬೇಕೆಂದು ಬಹು ದೈನ್ಯದಿಂದ ಬೇಡಿಕೊಳ್ಳಲು ಆ ಕೋಮಟಿಯು-ಸಾಹೇ ಬರೇ ! ನಾನೇನು ಮಾಡಲಿ ? ನೀವು ನಮ್ಮ ದೇವರಿಗೆ ಅಪರಾಧವನ್ನು ಮಾಡಿದುದ ರಿಂದ ನೀವೇ ಆ ದೇವರಿಗೆ--ನನ್ನಿಂದ ತಪ್ಪಾಯಿತೆಂದು ಬೇಡಿಕೊಂಡು ಏನಾದರೂ ನಿನ್ನ ಪಾದಕ್ಕೆ ಒಪ್ಪಿಸುತ್ತೇನೆಂದು ತಪ್ಪುಗಾಣಿಕೆಯನ್ನು ನನ್ನ ವಶಕ್ಕೆ ಕೊಟ್ಟರೆ ನಾನು ದೇವರನ್ನು ಬೇಡಿಕೊಂಡು ನಿಮ್ಮ ಬಾಧೆಯನ್ನು ವಾಸಿಮಾಡುತ್ತೇನೆಂದು ಹೇಳಲು ಆ ತುರುಕನು-ಇಷ್ಟು ಮಟ್ಟಿಗಾದರೆ ಸಾಕೆಂದು ತನ್ನ ಜೇಬಿನಲ್ಲಿ ಇದ್ದ ಹತ್ತು ವರಹಗಳನ್ನು ತಪ್ಪುಗಾಣಿಕೆಯಾಗಿ ತೆಗೆದು ಕೊಳ್ಳಿರಿ ಎಂದು ಕೋಮಟಿಗೆ ಕೊಡಲು ಅದನ್ನು ಅವನು ತೆಗೆದು ಕೊಂಡು ಸ್ವಲ್ಪ ಕಾಲ ಧ್ಯಾನಿಸಿ ದೇವರಪ್ಪಣೆ ಯಾಯಿತೆಂದು ಹೋಗಿ ಒಂದು ದುಡ್ಡಿಗೆ ಹರಳೆಣ್ಣೆಯನ್ನು ತಂದು ಆ ತುರುಕನ ಮೈಗೆಲ್ಲಾ ಸವರಿ ಚೆನ್ನಾಗಿ ನೀವಿದನು ಸ್ವಲ್ಪ ಹೊತ್ತಿನ ಮೇಲೆ ನವೆಯ ಉರಿಯ ನಿಂತುಹೋದುವು ಆಗ ಅವರಿಬ್ಬರೂ ತಮ್ಮ ತಮ್ಮ ದಾರಿಯನ್ನು ಹಿಡಿದುಕೊಂಡು ಹೊರಟು ಹೋದರು. 40. THE IMPOVERISHED RYOT AND THE IDOL. ೪೦, ಬಡತನಬಂದ ಶೂದ್ರನೂ ವಿಗ್ರಹವೂ. ರಾಮನಾಥಪುರವೆಂಬ ಒಂದು ಗ್ರಾಮದಲ್ಲಿ ಹನುಮೇಗೌಡನೆಂಬ ಒಬ್ಬ ಒಕ್ಕಲಿಗನು ಇದ್ದನು. ಅವನು ಬಹು ದರಿದ್ರನಾಗಿದ್ದು ಕಡೆಗೆ ಎಲ್ಲಿಯೋ ಹೇಗೆ ಕಷ್ಟ ಪಟ್ಟು ಒಂದೇರು ಎತ್ತನ್ನು ಹೊಂದಿಸಿಕೊಂಡು ಆ ಊರ ಪಾರುಪತ್ಯಗಾರನ ಬಳಿಗೆ ಹೋಗಿ ನಾಲ್ಕು ವರಹದ ಕಂದಾಯದ ಹೊಲವನ್ನು ಮಾಡಿಕೊಂಡು ಆರೇಳು ಉಳ ಉತ್ತು ರಾಗಿ ಚೆಲ್ಲಿ ಹದವನ್ನು ಕಂಡು ಕಾಲವರಿತು ಹರತೆಬೇಸಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೫೪
ಗೋಚರ