ಕಥಾಸಂಗ್ರಹ-೧ನೆಯ ಭಾಗ 43 ಯಗಳನ್ನು ಮಾಡಿ ಕಳೆಗಳನ್ನು ಕಿತ್ತು ಚೆನ್ನಾಗಿ ಕಷ್ಟ ಮಾಡಿದನು. ದೇವರ ದಯೆ ಯಿಂದ ಕಾಲಕಾಲಗಳಲ್ಲಿ ಹದವಾದ ಮಳೆಗಳು ನಡೆಸಿ ಪೈರು ಚೆನ್ನಾಗಿ ಬೆಳೆದು ತೆನೆಗಳಾಗಿ ಹಾಲು ದುಂಬಿ ಕಾಸಕ್ಕಿಯಾಗಿ ಕುಯ್ಲಿಗೆ ಬಂದುದನ್ನು ನೋಡಿ ಕೊಯ್ಯು ಅರಿಯನ್ನು ಹಾಕಿ ಆರಿಸಿ ಬಳ್ಳಗುಡ್ಡೆಗಳನ್ನು ಹಾಕಿದ್ದು ತಿರಿಗಿ ಕಿತ್ತು ದೊಡ್ಡ ಮೆದೆಯನ್ನು ಹಾಕಿ ಬೇಸಿಗೆಕಾಲದಲ್ಲಿ ಕಣವನ್ನು ಮಾಡಿ ಮೇಟಿಯ ಮರವನ್ನು ನಿಲ್ಲಿಸಿ ಅದರ ಸುತ್ತಲು ಮೆದೆಯ ಹುಲ್ಲನ್ನು ಕಿತ್ತು ಒದರಿ ಒಡ್ಡನ್ನು ಹಾಕಿ ಎತ್ತುಗಳಿಂದ ತುಳಿಸಿ ಮೆರೆಗೋಲನ್ನು ತೆಗೆದುಕೊಂಡು ಅದರಿಂದ ಒಕ್ಕಿದ ಹುಲ್ಲುಗಳನ್ನು ಒದರುತ್ತ ಕಾಳು ಬೇರೆ ಹುಲ್ಲು ಬೇರೆ ಮಾಡಿ ಕಾಳಿನ ರಾಸಿಯನ್ನು ತೂರಿ ಕೇರಿ ಎಂದಿಗಿಂತ ಹುಲುಸಾಗಿರುವ ಕಾಳುಗಳಲ್ಲಿ ತನ್ನ ಮನೆಯ ಒಗತನಕ್ಕೆ ತಕ್ಕಷ್ಟನ್ನು ಮೇಲೆ ಇಟ್ಟು ಕೊಂಡು ಮಿಕ್ಕ ಕಾಳುಗಳನ್ನು ಗುಳಿಗಳಲ್ಲಿ ತುಂಬಿದ್ದು ಮಾರು ಬಂದಾಗ ಮಾರಿ ದಿವಾಣದ ಕಂದಾಯವನ್ನು ಕಟ್ಟಿ ಮಿಕ್ಕ ಹಣದಲ್ಲಿ ನಾಲ್ಕು ಏರು ಎತ್ತುಗಳನ್ನು ಕೊಂಡು ಇನ್ನೂ ನಾಲ್ಕು ಜೀತದಾಳುಗಳನ್ನು 'ಇಟ್ಟು ಕೊಂಡು ಮತ್ತು ಐವತ್ತು ವರಹಾ ಕಂದಾಯ ದ ಹೊಲ ಗದ್ದೆಗಳನ್ನು ಮಾಡಿ ಕೊಂಡು ದೊಡ್ಡ ರೈತನಾಗಿ ವರುಷವರುಷಕ್ಕೆ ಆರಂಭವನ್ನು ಬಲಪಡಿಸುತ್ತಾ ನೂರಾರು ಉಳುವ ಎತ್ತು ಗನ್ನೂ ನೂರಾರು ಹೇರಾಟದ ಎತ್ತುಗಳನ್ನೂ ಸಂಪಾದಿಸಿ ಹತ್ತು ಇಪ್ಪತ್ತು ವರುಷದ ತನಕ ಹೀಗೆ ದೇವರ ದಯೆಯಿಂದ ವೃದ್ಧಿಯಲ್ಲಿ ಬಂದು ಸುಖದಿಂದ ಇದ್ದನು, ಆ ಮೇಲೆ ಆ ದೇಶಕ್ಕೆ ಮಳೆಯಾಗದೆ ಬೆಳೆಯು ನಿಂತುಹೋ ದುದರಿಂದ ಹುಲ್ಲು ಸೊಪ್ಪು ನೀರುಗಳಿಲ್ಲದೆ ದನಗಳಿಗೆ ರೋಗಗಳು ಬಂದು ಕೆಲವು ಸತ್ತು ಹೋದುವು. ಮಿಕ್ಕವೂ ಹೀಗೆ ಸಾಯುತ್ತವಲ್ಲಾ ಎಂಬ ದುಃಖದಿಂದ ದನಗಳ ನ್ನೆಲ್ಲಾ ಮಾರಿ ಸರಕಾರದ ಕಂದಾಯದ ಹಣವನ್ನು ಆ ವರುಷಕ್ಕೆ ಕಟ್ಟಿ ಬಿಟ್ಟು ಹೀಗೆ ಮೂರು ನಾಲ್ಕು ವರುಷದ ತನಕ ಮಳೆಬೆಳೆಗಳು ಚೆನ್ನಾಗಿ ಆಗದೆ ಉಳುವ ದಕ್ಕೆ ಎತ್ತೂ ಆಳೂ ಇಲ್ಲದೆ ಅರಮನೆಯ ಕಂದಾಯಕ್ಕೆ ಮನೆಯಲ್ಲಿದ್ದ ಒಡವೆ ವಸ್ತುಗಳನ್ನೂ ಪಾತ್ರೆಪದಾರ್ಧಗಳನ್ನೂ ಬಟ್ಟೆ ಮೊದಲಾದವುಗಳನ್ನೂ ದವಸಧಾನ್ಯ ಗಳನ್ನೂ ಮಾರಿ ಪಾಳು ಕಂದಾಯ ಕಟ್ಟಿ ತಿನ್ನುವುದಕ್ಕೆ ಹಿಟ್ಟು ಸಹ ಇಲ್ಲದೆ ಬಹಳ ಕಷ್ಟಪಟ್ಟು ಕೊಂಡು ಇದ್ದನು ತಿರಿಗಿ ಮಾರನೆಯ ವರುಷ ಕಂದಾಯಕ್ಕೆ ಅರ ಮನೆಯ ಕುಳುವಾಡಿಯು ಕೋಲು ಹಾಕಿಕೊಂಡು ಬಂದು ಅವನ ಮನೆಗೆಮುದ್ರೆ ಹಾಕಿ ಬಹಳ ವರಾತು ಮಾಡಿದುದರಿಂದ ರೈತನು ಕಂದಾಯವನ್ನು ಕೊಡುವುದಕ್ಕೆ ಗತಿ ಇಲ್ಲದೆ ಒಂದು ದಿನ ರಾತ್ರಿ ವೇಳೆಯಲ್ಲಿ ಕಳುವಿನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾ ಇರುವಲ್ಲಿ ಅರಮನೆಯ ಚಕ್ರನು ಕಂಡು ಬೆನ್ನಟ್ಟಿ ಬರುತ್ತಾ ಇದ್ದನು. ಅದನ್ನು ಇವನು ಕಂಡು ಅವನಿಗೆ ಕಾಣಿಸಿಕೊಳ್ಳದ ಹಾಗೆ ಓಡಿಹೋಗುತ್ತಾ ಇದ್ದು ದಾರಿಯಲ್ಲಿ ಒಂದು ಬಸ್ತಿಯ ಗುಡಿಯು ಇದ್ದುದರಿಂದ ಅದರೊಳಕ್ಕೆ ಹೊಕ್ಕು ಅಲ್ಲಿದ್ದ ವಿಗ್ರಹದ ಹಿಂದುಗಡೆಯಲ್ಲಿ ಔತು ಕೊಂಡನು. ಚಕ್ರನು ರೈತನನ್ನು ಕಾಣದೆ ಹಿಂತಿರುಗಿ ಹೋದನು, ಆ ಮೇಲೆ ಬೆಳಕು ಹರಿಯಲು ರೈತನು ಮುಂದಕ್ಕೆ ಬಂದು
ಪುಟ:ಕಥಾಸಂಗ್ರಹ ಸಂಪುಟ ೧.djvu/೫೫
ಗೋಚರ