ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 KANARESE SELECTIONS-PART I ಆ ವಿಗ್ರಹದ ಇರುವಿಕೆಯನ್ನು ನೋಡಿ ಇದಿರು ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ಇರು ವಲ್ಲಿ ಆ ವಿಗ್ರಹದ ಪೂಜಾರಿಯು ಬಂದು--ಯಾಕೆ ಆಳುತ್ತಿಯೋ ? ಎಂದು ಕೇಳಿ ದುದಕ್ಕೆ-ಮತ್ತಾವುದಕ್ಕೂ ಇಲ್ಲವಪ್ಪಾ ! ನಾನು ಹತ್ತು ವರುಷ ಆರಂಭವನ್ನು ಮಾಡಿದುದಕ್ಕೆ ಸ್ವಲ್ಪ ಬಟ್ಟೆ ಯಾದರೂ ಉಳಿದಿದೆ. ಈ ಪಾಪಿಯು ಎಷ್ಟು ವರುಷ ಗಳು ಆರಂಭವನ್ನು ಮಾಡಿರಬಹುದೋ ? ಒಂದು ಬೊಂತೆಗೂ ಗತಿ ಇಲ್ಲದೆ ಬೆತ್ತಲೆ ನಿಂತಿದ್ದಾನಲ್ಲಾ ಎಂದು ದುಃಖ ಬಂತಪ್ಪಾ ! ಎಂದು ಹೇಳಿ ಮತ್ತೊಂದು ದೇಶಕ್ಕೆ ಹೋಗಿ ಕೂಲಿನಾಲಿ ಮಾಡಿಕೊಂಡು ಜೀವಿಸಿಕೊಂಡಿದ್ದನು. 41. THE STINGY MERCHANT MADE LIBERAL. ೪೧, ಲೋಭಿಯಾದ ವರ್ತಕನಿಗೆ ಉದಾರಗುಣ ಉಂಟಾದುದು. ರತ್ನ ವತಿ ಎಂಬ ಪಟ್ಟಣದಲ್ಲಿ ಮಾಣಿಕಸೆಟ್ಟಿ ಎಂಬ ಒಬ್ಬ ವರ್ತಕನು ಹಡಗಿನ ವ್ಯಾಪಾರಗಳನ್ನು ಮಾಡಿ ಅನೇಕ ದ್ರವ್ಯಗಳನ್ನು ಸಂಪಾದಿಸಿ ಲೋಭಿಯಾದುದ ರಿಂದ ಒಬ್ಬರಿಗಾದರೂ ಒಂದು ಕಾಸನ್ನೂ ಕೊಡದೆ ಬಹು ಧನವಂತನಾಗಿ ಇದ್ದನು. ಆಗ ಇವನು ಮಹಾಧನಿಕನೆಂದು ತಿಳಿದು ದೇಶಾಂತರದಿಂದ ಬಂದ ಒಬ್ಬ ಯಾಚ ಕನು ಇವನನ್ನು ನಾಲ್ಕಾರು ವರುಷಗಳವರೆಗೂ ಆಶ್ರಯವನ್ನು ಮಾಡಿದಾಗ ಒಂದು ಕಾಸನ್ನೂ ಕೊಡದೆ ಹೋದುದರಿಂದ ಮನಸ್ಸಿನಲ್ಲಿ ಇವನನ್ನು ಕಾದುದು ವ್ಯರ್ಥವಾಯಿತಲ್ಲಾ ! ಎಂದು ಚಿಂತಿಸುತ್ತಾ ಇದ್ದನು. ಆಗ ವರ್ಷಾಕಾಲವು ಬಂದು ಕಾಳಮೇಘಗಳು ಆಕಾಶವನ್ನು ತುಂಬಿದುವು. ಆ ವೇಳೆಯಲ್ಲಿ ಕೆಲವು ಜನ ಭಿಕ್ಷು ಕರು ಭಿಕ್ಷಾ ಪಾತ್ರೆಯನ್ನು ಹಿಡುಕೊಂಡು ಈ ವರ್ತಕನ ಬಳಿಗೆ ಬಂದು--ನೀನು ಕೊಡದೆ ನಮ್ಮ ಹಾಗೆ ಆಗಬೇಡ, ಕೊಟ್ಟು ನಿನ್ನ ಹಾಗೆ ಆಗು ಎಂದು ಹೇಳಿದರು. ಆಗ ಈ ವರ್ತಕನು ಅವರು ಹೇಳಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿ-ಈ ಮಾತಿನ ಅಭಿಪ್ರಾಯವೇನಂದರೆ ಯಾವನು ದಾನಧರ್ಮಗಳನ್ನು ಮಾಡುತ್ತಾನೋ ಅವನು ಮತ್ತೊಂದು ಜನ್ಮದಲ್ಲಿ ಐಶ್ವರ್ಯವಂತನಾಗುವನು. ಮಾಡದವನು ಭಿಕ್ಷುಕ ನಾಗಿ ಹುಟ್ಟುವನೆಂದಾಯಿತು, ಆದರೆ ಹಣವನ್ನು ಗಳಿಸಿದವನು ನಿತ್ಯವೂ ವೆಚ್ಚವನ್ನು ಮಾಡುತ್ತಾ ಬಂದರೆ ಕೆಲವು ದಿವಸದಲ್ಲಿ ಹಣವೆಲ್ಲ ಮುಗಿದು ಬಡವನಾಗುವನು ಎಂದು ಯೋಚಿಸುತ್ತಿದ್ದನು. ಆಗ ಮೊದಲಿಂದಲೂ ಕಾದಿದ್ದ ಬ್ರಾಹ್ಮಣನು ವರ್ತ ಕನ ಭಾವವನ್ನು ತಿಳಿದು ಆಕಾಶದಲ್ಲಿರುವ ಮೇಘವನ್ನು ಕುರಿತು ಎಲೈ ಮೇಘವೇ ! ಒಂದು ಸಂವತ್ಸರಾರಭ್ಯ ನಿನ್ನನ್ನೇ ನಿರೀಕ್ಷಿಸಿಕೊಂಡು ಬಾಯಾರಿಕೆ ಯಿಂದ ಕಂಗೆಟ್ಟಿರುವ ಈ ಚಾತಕಪಕ್ಷಿಯ ಮರಿಯ ಬಾಯಿಯಲ್ಲಿ ತಾತ್ಕಾರ ಮಾಡದೆ ಬೇಗ ನಿನ್ನ ಮುಂಗಾರು ಹನಿಗಳನ್ನು ಕೆಡಹು, ಯಾಕಂದರೆ ಗಾಳಿಯು ಮತ್ತೊಂದು ಪ್ರಕಾರ ತಿರುಗಿ ಬೀಸಿದುದೇ ಆದರೆ ಆಗ ನೀನು ಎಲ್ಲಿ ? ನಿನ್ನ ನೀರುಗ ಳೆಲ್ಲಿ ? ಚಾತಕಪಕ್ಷಿ ಬಂದು ಕಾಯುವುದೆಲ್ಲಿ ? ಎಂದು ಹೇಳಿದನು. ಆ ಮಾತನ್ನೂ