ಕಥಾಸಂಗ್ರಹ-೧ನೆಯ ಭಾಗ 45 ವರ್ತಕನು ಕೇಳಿ ಈ ಮಾತಿಗೆ--ದೇವರು ಕೊಟ್ಟಾಗಲೇ ದಾನಧರ್ಮಗಳನ್ನು ಮಾಡ ಬೇಕು, ಈ ಐಶ್ವರ್ಯವು ದೇವರ ದಯೆ ತಪ್ಪಿದರೆ ಹೋಗುವುದು. ಆಗ ನಿನ್ನ ಬಳಿಗೆ ಒಬ್ಬ ಬೇಡುವವನಾದರೂ ಬಾರನು ಎಂಬರ್ಧವಾಯಿತು ಎಂದು ಯೋಚಿಸಿ ತಾನು ಸಂಪಾದಿಸಿರುವ ದ್ರವ್ಯಗಳನ್ನು ನಾಲ್ಕು ಪಾಲು ಮಾಡಿ ಒಂದು ಪಾಲನ್ನು ವ್ಯಾಪಾ ರಕ್ಕಾಗಿ ಮಕ್ಕಳ ವಶಕ್ಕೆ ಕೊಟ್ಟು ಒಂದು ಪಾಲನ್ನು ಸಂಚಿತವಾಗಿ ಇಟ್ಟು ಮತ್ತೊ೦ ದು ಪಾಲನ್ನು ಗೃಹಕೃತ್ಯದ ವ್ರಯಕ್ಕೆ ಇಟ್ಟು ಕೊಂಡು ನಾಲ್ಕನೆಯ ಪಾಲನ್ನು ದಾನ ಧರ್ಮಗಳಿಗೆಂದು ತೆಗೆದು ಬಂದ ಭಿಕ್ಷು ಕರಿಗೂ ಕಾದಿದ್ದ ಬ್ರಾಹ್ಮಣನಿಗೂ ಉಚಿತ ವರಿತು ಕೊಟ್ಟು ಮುಂದೆ ಬಂದವರಿಗೂ ಯೋಗ್ಯತೆಯರಿತು ಕೊಡುತ್ತಾ ಕೀರ್ತಿ ಯನ್ನು ಹೊಂದಿ ಸುಖವಾಗಿದ್ದನು. 42. THE STORY OF PEDDA BHATTA, - ೪೨. ಪೆದ್ದ ಭಟ್ಟನು. ಉತ್ತರ ದೇಶದಲ್ಲಿ ದೇವಪುರವೆಂಬ ಒಂದು ಅಗ್ರಹಾರದಲ್ಲಿರುವ ದೇವಶಯ್ಯನೆಂಬ ಬ್ರಾಹ್ಮಣನು ಸಕಲವೇದಶಾಸ್ತ್ರಾದಿಗಳ ಅಧ್ಯಯನವನ್ನು ಮಾಡಿ ವಿದ್ಯಾವಂತನಾಗಿ ಅರಸುಗಳ ಸಭೆಗೆ ಹೋಗಿ ಪ್ರಸಂಗವನ್ನು ಮಾಡಿ ಜಯಪತ್ರಿಕೆಯನ್ನು ಪಡೆದು ಅರಸು ಗಳಿಂದ ಬಹುಮಾನವಾಗಿ ಧನಕನಕವನ್ನಾಭರಣಗಳನ್ನು ಹೊಂದಿ ಧನಿಕನಾಗಿ ತನ್ನ ಸಮಾನರಾದ ಬಂಧುಗಳಲ್ಲಿ ಕನ್ಯಕೆಯನ್ನು ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಸೇರಿ ಬಂದ ಅತಿಥಿ ಅಭ್ಯಾಗತರಿಗೆ ಅನ್ನೋದಕಗಳನ್ನು ಕೊಟ್ಟು ಮನ್ನಿ ಸುತ್ತಾ ಘನವಿದ್ವಾಂ ಸನೆಂದು ಮಂದಿಗಳಲ್ಲಿ ಹೆಸರನ್ನು ಹೊಂದಿ ಸುಖವಾಗಿದ್ದನು. ಹೀಗಿರುವಲ್ಲಿ ಆ ಬ್ರಾ ಹ್ಮಣಿಯು ದೇವರ ದಯೆಯಿಂದ ಬಸುರಾಗಿ ಶುಭಲಗ್ನ ಶುಭತಾರೆಯಲ್ಲಿ ಗಂಡುಮಗ ನನ್ನು ಬೆಸಲಾದಳು. ಆ ದೇವಶರ್ಮನು ಸಂತುಷ್ಟನಾಗಿ ಹುಟ್ಟಿದ ಕೂಸಿಗೆ ಜಾತ ಕರ್ಮವನ್ನು ಮಾಡಿ ಹನ್ನೆರಡನೆಯ ದಿವಸದಲ್ಲಿ ಮಲ್ಲಿನಾಧನೆಂದು ನಾಮಕರಣವನ್ನು ಮಾಡಿ ಶಿಶುವು ಬೆಳೆದ ಹಾಗೆ ಆಯಾಕಾಲದಲ್ಲಿ ಚೌಲೋಪನಯನಾದಿ ಕರ್ಮಗಳನ್ನು ನೆರವೇರಿಸಿ ವೇದಶಾಸ್ತಾಭ್ಯಾಸಕ್ಕಾಗಿ ಗುರುಗಳ ಬಳಿಗೆ ಕಳುಹಿಸಿದನು. ಆ ಮಲ್ಲಿ ನಾಧನೆಂಬ ಮಗನು ಗುರುಗಳು ಹೇಳಿದ ಹಾಗೆ ಓದಿ ಬರೆಯದೆ ವೇದಶಾಸ್ತ್ರಗಳನ್ನು ಕಲಿಯದೆ ಯಾವಾಗಲೂ ಕೆಟ್ಟ ಹುಡುಗರ ಸಂಗಡ ಚೆಂಡು ಬುಗುರಿಯನ್ನಾಡುತ್ತಾ ಶುದ್ದ ಶುಂಠಕಾಯನಾದನು. ಅಂಥಾ ಹೆಡ್ಡ ಹುಡುಗನಿಗೂ ಕೂಡ ದೊಡ್ಡ ವಿದ್ವಾ೦ ಸನ ಮಗನೆಂದು ಮತ್ತೊಬ್ಬ ಪೂರ್ಣ ವಿದ್ವಾಂಸನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು, ಕೆಲವು ದಿವಸದ ಮೇಲೆ ಆ ಹೆಣ್ಣು ಮಗಳು ದೊಡ್ಡವಳಾದುದರಿಂದ ಆ ಹುಡುಗಿಯ ತಂದೆಯು ಹುಡುಗನ ತಂದೆಯ ಹೆಸರಿಗೆ--ನಿಮ್ಮ ಮಗನನ್ನು ಕಳು 'ಹಿಸಿದರೆ ಶೋಭನಪ್ರಸ್ತವನ್ನು ಬೆಳಸಿ ದಂಪತಿಗಳನ್ನು ತಮ್ಮ ಬಳಿಗೆ ಕಳುಹಿಸಿಕೊಡು ತೇನೆಂದು ಲಗ್ನ ಪತ್ರಿಕೆಯನ್ನು ಬರೆದು ಲಕ್ಕೋಟೆಗೆ ಅರಸಿನ ಕುಂಕುಮಗಳನ್ನು
ಪುಟ:ಕಥಾಸಂಗ್ರಹ ಸಂಪುಟ ೧.djvu/೫೭
ಗೋಚರ