KANARESE SELECTIONS-PART I ಹಚಿಸಿ ಅದನ್ನು ಅದರಲ್ಲಿಟ್ಟು ಕಳುಹಿಸಿದನು, ಆಗ ಮಲ್ಲಿನಾಥನ ತಂದೆಯು ಬೀಗನು ಬರೆದ ಲಗ್ನ ಪತ್ರಿಕೆಯನ್ನು ಓದಿಕೊಂಡು ತನ್ನ ಮಗನ ಹೆಡ್ಡತನವನ್ನು ನೋಡಿ ಬಹಳ ಚಿಂತಾಕ್ರಾಂತನಾಗಿ ಮಗನನ್ನು ಹತ್ತಿರಕ್ಕೆ ಕರೆದು-ಅಪ್ಪಾ, ಮಗನೇ ! ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದೆಯಾದುದರಿಂದ ನಿನ್ನನ್ನು ಒಳ್ಳೆಯ ವಿದ್ವಾಂಸರ ಮಗಳು ಮದುವೆಯಾಗಿದ್ದಾಳೆ. ನಿನ್ನ ಭಾವಮೈದಂದಿರು ಸಕಲ ಶಾಸ್ತ್ರಗಳಲ್ಲಿಯೂ ನಿಪುಣರಾ ಗಿದ್ದಾರೆ. ಈಗ ಶೋಭನಪ್ರಸ್ತಕ್ಕೆ ನಿನ್ನನ್ನು ನಿಮ್ಮ ಮಾವ ಕರಿಸಿದ್ದಾನೆ. ನೀನು ನಿರಕ್ಷರ ಕುಕ್ಷಿಯಾಗಿದ್ದೀ, ನೀನು ಮಾವನ ಮನೆಗೆ ಹೋದಾಗ ನಿನ್ನ ಭಾವಮೈದಂದಿರು ಏನಾದರೂ ಪುಸ್ತಕಗಳನ್ನು ತೋರಿಸಿದರೆ ನೋಡುವವನ ಹಾಗೆ ಕೆಲವು ಓಲೆಗಳನ್ನು ಮಗುಚಿಹಾಕಿ ನೋಡಿ-ಸಂಪೂರ್ಣವಾಗಿದೆಯೇ ? ಎಂದು ಇಷ್ಟು ಮಾತ್ರ ಕೇಳು ಕಂಡೆಯಾ ? ಎಂದು ಚೆನ್ನಾಗಿ ಹೇಳಿ ಮಾವನ ಮನೆಗೆ ಪ್ರಯಾಣಮಾಡಿ ಕಳುಹಿದನು. ಮಾವನೂ ಅತ್ತೆಯ ರೂಪಿನಲ್ಲಿ ಚೆಲುವನಾಗಿ ಯೌವನಸ್ಥನಾಗಿರುವ ಅಳಿಯನನ್ನು ನೋಡಿ ಬಹಳ ಸಂತೋಷಪಟ್ಟು ಶುಭಮುಹೂರ್ತದಲ್ಲಿ ಶೋಭನಪ್ರಸ್ತವನ್ನು ಬೆಳಸಿ ಕೊಟ್ಟು ಅಳಿಯನನ್ನು ಬಹಳ ಬಹುಮಾನದಿಂದ ಆದರಿಸಿಕೊಂಡು ಇದ್ದರು. ಒಂದು ದಿವಸ ಇವನ ಭಾವಮೈದಂದಿರು ತಮ್ಮ ಮನೆಯ ಪುಸ್ತಕಗಳನ್ನು ಬಿಸಲಿಗೆ ಹಾಕು ತ್ಯಾ ಒಂದು ಪುಸ್ತಕವನ್ನು ತೆಗೆದು ಅವನ ಕೈಗೆ ಕೊಡಲು ಸ್ವಲ್ಪ ಹೊತ್ತು ನೋಡಿದ ವನ ಹಾಗೆ ಮಾಡಿ ಸಂಪೂರ್ಣವಾಗಿದೆಯೇ ? ಎಂದು ಕೇಳಿ ಕೊಟ್ಟು ಬಿಟ್ಟನು. ಹೀಗೆಯೇ ಯಾವ ಪುಸ್ತಕವನ್ನು ಕೈಯಲ್ಲಿ ಕೊಟ್ಟರೂ ಸಂಪೂರ್ಣವಾಗಿದೆಯೇ ಎಂದು ಕೇಳಿ ಕೊಡುತ್ತಾ ಬಂದಕಾರಣ ಒಬ್ಬ ಕುಚೋದ್ಯಗಾರನಾದ ಭಾವಮೈದನು ಒಂದು ಆಲೇಖವನ್ನು ತೆಗೆದು ಇವನ ಕೈಯಲ್ಲಿ ಕೊಡಲು ಅದನ್ನೂ ತೆಗೆದುಕೊಂಡು ಕೆಲವು ಓಲೆಗಳನ್ನು ಮಗುಚಿಹಾಕಿ ನೋಡಿ--ಸಂಪೂರ್ಣವಾಗಿದೆಯೇ ? ಎಂದು ಕೇ ಳಿದನು. ಆಗ ಆ ಭಾವಮೈದಂದಿರೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿ ನಕ್ಕುಇವನು ಶುದ್ಧ ಬ್ರಹ್ಮನೆಂದು ನಿಶ್ಚಯಿಸಿ ಒನಕೆಯು ಚಿಗುರಿದಾಗ್ಗೆ ಇವನಿಗೆ ವಿದ್ಯೆಯು ಬರುವುದು ಎಂದು ಹಾಸ್ಯ ಮಾಡಿದರು, ಅದನ್ನು ಜಾಣೆಯಾದ ಇವನ ಹೆಂಡತಿಯು ನೋಡಿ ಬಹಳ ನಾಚಿಕೊಂಡು ಏಕಾಂತದಲ್ಲಿ ಗಂಡನೊಡನೆ-ಮಾವನ ಮನೆಯಲ್ಲಿ ಎಷ್ಟು ದಿವಸವಿರಬೇಕು ? ನಮರಿಗೆ ಹೋಗೋಣ ಎಂದಳು, ಈ ಮಲ್ಲಿನಾಥನು ಅತ್ತೆ ಮಾವಂದಿರ ಅಪ್ಪಣೆಯನ್ನು ತೆಗೆದು ಕೊಂಡು ಹೆಂಡತಿಯನ್ನು ಕರಕೊಂಡು ತನ್ನ ಊರಿಗೆ ಬರುವ ದಾರಿಯಲ್ಲಿ ಕಾಡಿನೊಳಗೆ ಚೆನ್ನಾಗಿ ಹೂಬಿಟ್ಟಿರುವ ಮುತ್ತುಗದ ಮರ ವನ್ನು ಹೆಂಡತಿಗೆ ತೋರಿಸಿ--ಎಲೇ, .ಎಲೇ, ನೋಡೇ : ಈ ಮುತ್ತುಗದ ಹೂಗಳು ಎಷ್ಟು ಚೆನ್ನಾಗಿವೆ ! ಎನಲು ಆಕೆಯು--ನೀನು ರೂಪಯೌವನಸಂಪನ್ನನಾಗಿದ್ದಾಗ್ಯೂ ವಿದ್ಯಾಹೀನನಾಗಿರುವುದರಿಂದ ಹೇಗೆ ಶೋಭಿಸುವುದಿಲ್ಲವೋ ಹಾಗೆಯೇ ಈ ಮುತ್ತು ಗದ ಹೂವುಗಳು ಕಣ್ಣಿಗೆ ಬಹು ರಮ್ಯವಾಗಿ ಕಂಡಾಗೂ ಸುವಾಸನೆ ಇಲ್ಲದೆ ಇರು ವುದರಿಂದ ಶೋಭಿಸದೆ ಇರುವುವು ಎಂದು ಹೇಳಿದಳು, ಆಗ ಮಲ್ಲಿನಾಥನು ಹೆಂಡತಿಯ ಮಾತನ್ನು ಕೇಳಿ ಬಹುವಾಗಿ ನಾಚಿ ಕೊಂಡು-ಛೀ ! ಛೇ ! ನನ್ನ ಜನ್ಮವು ವ್ಯರ್ಥವು !
ಪುಟ:ಕಥಾಸಂಗ್ರಹ ಸಂಪುಟ ೧.djvu/೫೮
ಗೋಚರ