ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 47 ಹೇಗಾದರೂ ವಿದ್ಯೆ ಯನ್ನು ಕಲಿಯಬೇಕೆಂದು ಮನಸ್ಸಿನಲ್ಲಿ ಛಲಹುಟ್ಟಿ ತಿರಿಗಿ ಹೆಂಡತಿ ಯನ್ನು ಕರಕೊಂಡು ಮಾವನ ಮನೆಗೆ ಬಂದು ಆಕೆಯನ್ನು ಅಲ್ಲಿಯೇ ಬಿಟ್ಟು ತಾನು ವಿದ್ಯೆಯನ್ನು ಕಲಿಯುವ ಉದ್ದೇಶದಿಂದ ಕಾಶೀ ಪಟ್ಟಣಕ್ಕೆ ಹೋಗಿ ಅಲ್ಲಿ ಒಬ್ಬ ವಿದ್ಯಾಂಸನನ್ನು ಕಂಡು ಆತನಿಗೆ ಅಡ್ಡಬಿದ್ದು--ಸ್ವಾಮಿ ಗುರುಗಳೇ ! ನಾನು ಶುದ್ದ ಮೂಢನು ! ನನಗೆ ಒಂದಕ್ಷರವಾದರೂ ಬರುವುದಿಲ್ಲ, ನನ್ನ ಮೇಲೆ ಕನಿಕರವಿಟ್ಟು ಅಕ್ಷರಾಭ್ಯಾಸವು ಮೊದಲಾಗಿ ಕಲಿಸಿಕೊಟ್ಟು ನನ್ನನ್ನು ವಿದ್ವಾಂಸನನ್ನಾಗಿ ಮಾಡಬೆಳೆ ಕೆಂದು ವಿನಯದಿಂದ ಬೇಡಿಕೊಂಡನು, ಆಗ ಗುರುವ-ಒಳ್ಳೆಯದೆಂದು ಹೇಳಿ ಇವನ ಬುದ್ದಿ ಕುಶಲತ್ವವನ್ನು ಪರೀಕ್ಷಿಸಿ ನೋಡಿ ಕಡೆಗೆ ಅವನಿಗೆ ಊರಬಾಗಿಲ ಬಳಿ ಯಲ್ಲಿ ಗುಂಡಿಯ ಓನಾಮವನ್ನು ಬರೆದು ಕೊಟ್ಟು ಮನೆಯಲ್ಲಿ ಎರಡು ಹೊತ್ತೂ ಉಂಡು ಕೊಂಡು ಇದನ್ನು ತಿದ್ದಿ ಕಲಿತುಕೋ ಎಂದು ಅಪ್ಪಣೆ ಕೊಟ್ಟು ತನ್ನ ಹೆಂಡತಿ ಯೊಡನೆ--ಆ ಶಿಷ್ಯನಿಗೆ ನಿತ್ಯದಲ್ಲಿ ಯ ಬೇವಿನೆಣ್ಣೆಯಲ್ಲಿ ಅನ್ನವನ್ನು ಕಲಿಸಿ ಹಾಕು. ಯಾವ ದಿನ ಕಹಿಯಾಗಿದೆ ಎಂದು ಹೇಳುತ್ತಾನೋ ಆಗ ನನಗೆ ಹೇಳು ಅಂದನು. ಮಲ್ಲಿನಾಥನು ಊರಬಾಗಿಲ ಬಳಿಯಲ್ಲಿ ಆ ಗುಂಡಿಯ ಓನಾಮವನ್ನು ತದೇಕ ಧ್ಯಾನ ದಿಂದ ಬರೆಯುತ್ತಾ ಇದ್ದನು ಆ ಮಾರ್ಗವಾಗಿ ಬರುವ ಹೋಗುವ ಜನಗಳು. ಇವನಿಗೇನು ಮಾರಿಯು ಹಿಡಿದಿದೆಯೋ ? ಇಪ್ಪತ್ತು ವರುಷದ ಮುದಿಗೋಣನಾಗಿ ದ್ದಾನೆ. ಈಗ ಗುಂಡಿಯ ಓನಾಮವನ್ನು ತಿದ್ದುತ್ತಾನೆಂದು ಬೈದುಕೊಂಡು ತಿರುಗಿ ದಾದ್ರೂ ಆ ಮಾತೆಂದೂ ಇವನಿಗೆ ಕೇಳಿಸದೆ ಜನರನ್ನು ಕಣ್ಣೆತ್ತಿ ನೋಡದೆ ಗುರುವಿನ ಮನೆಯಲ್ಲಿ ಹಾಕಿದ ಬೇವಿನ ಎಣ್ಣೆಯ ಅನ್ನ ವನ್ನು ಕಹಿ ಸಿಹಿ ಎಂದು ಹೇಳದೆ ತಿಂದು ಕೊಂಡು ಹಗಲಿರುಳು ತನ್ನ ವಿದ್ಯಾಭ್ಯಾಸದಲ್ಲಿಯೇ ಆಸಕ್ತನಾಗಿದ್ದು ಕೆಲವು ದಿವಸದಲ್ಲಿ ಅಕ್ಷರಗಳನ್ನೂ ಹೀಗೆಯೇ ನಾಲ್ಕಾರು ವರುಷದಲ್ಲಿ ಸಾಹಿತ್ಯ ತರ್ಕ ವ್ಯಾಕರಣ ಮೀಮಾಂಸೆ ಜ್ಯೋತಿಷ ವೇದ ವೇದಾಂತವೇ ಮೊದಲಾದ ಸಕಲ ವಿದ್ಯೆಗಳನ್ನೂ ಕಲಿತು ಸಂಪೂರ್ಣ ವಿದ್ವಾಂಸನಾಗಿ ಒಂದು ದಿವಸ ಗುರುಪತ್ನಿ ಯು ಇಕ್ಕಿದ ಅನ್ನ ವನ್ನು ಉಂಡು ಆಕೆಯನ್ನು ಕುರಿತು ಅಮ್ಮಾ! ಅನ್ನವು ನಿತ್ಯ ಗದ್ದೆ ಯ ಹಾಗಿಲ್ಲ, ಈ ದಿವಸ ಏತಕ್ಕೋ ಕಹಿಯಾಗಿದೆ ಎಂದು ಹೇಳಲು ಗುರುಪತ್ನಿ ಯು-ಅಪ್ಪಾ! ಕಹಿಯಾಗಿದ್ದರೆ ಆ ಅನ್ನವನ್ನು ಬಿಡು ಎಂದು ಹೇಳಿ ಬೇರೆ ಅನ್ನವನ್ನೂ ಸಾರು ತುಪ್ಪ ಮಜ್ಜಿಗೆ ಮುಂತಾ ದುದನೂ ಬಡಿಸಿ ಚೆನ್ನಾಗಿ ಊಟವನ್ನು ಮಾಡಿಸಿ ಈ ವಿವರವನ್ನು ತನ್ನ ಗಂಡನಿಗೆ ಹೇಳಿದಳು, ಆತನು ಈ ಮಲ್ಲಿನಾಥನನ್ನು ಕರೆದು--ಅಯ್ಯಾ ! ನೀನು ಸಕಲ ವಿದ್ಯಾ ಪಾರಂಗತನಾದೆ. ಇನ್ನು ಮೇಲೆ ನಿನ್ನ ತಂದೆತಾಯಿಗಳ ಬಳಿಗೆ ಹೋಗು ಎಂದು ಅಪ್ಪ ಣೆಯನ್ನು ಕೊಟ್ಟುದರಿಂದ ಗುರುವಿಗೂ ಗುರುಪತ್ನಿ ಗೂ ವಂದಿಸಿ ಅಲ್ಲಿಂದ ಹೊರಟು ಕಾಶೀರಾಜನ ಸಭೆಯಲ್ಲಿ ವಿದ್ವಾಂಸರೊಡನೆ ಪ್ರಸಂಗವನ್ನು ಮಾಡಿ ಸರ್ವವಿದ್ವಾಂಸ ರನ್ನೂ ಜಯಿಸಿದುದರಿಂದ ಅಲ್ಲಿ ಈತನಿಗೆ ಪೆದ್ದ ಭಟ್ಟನೆಂದು ಹೆಸರನ್ನು ಕೊಟ್ಟರು, ಕಾಶೀ ರಾಜನು ಈತನಿಗೆ ಕನಕಾಭಿಷೇಕವನ್ನು ಮಾಡಿ ಬೇಕಾದಷ್ಟು ಕನಕಾಭರಣವಸ್ವಾದಿಗ ಳನ್ನು ಕೊಟ್ಟು ಪಾಲಕಿಯಲ್ಲಿ ಕೂರಿಸಿ ಬೆಂಗಾವಲಿಗೆ ಕೆಲವು ಸೇನೆಯನ್ನು ಕೊಟ್ಟು