ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 KANARESE SELECTIONS PART I ಕಳುಹಿಸಿದನು, ಪೆದ್ದ ಭಟ್ಟನು ಅಲ್ಲಿಂದ ಗುರುವಿನ ಬಳಿಗೆ ಬಂದು ಗುರುದಕ್ಷಿಣೆಯನ್ನು ಕೊಟ್ಟು ಅಲ್ಲಿಂದ ಹೊರಟು ತನ್ನ ಮಾವನ ಮನೆಗೆ ಬಂದು ಭಾವಮೈದಂದಿರನ್ನೆಲ್ಲಾ ವಿದ್ಯಾ ಪ್ರಸಂಗದಲ್ಲಿ ಜಯಿಸಿ ಹೆಂಡತಿಯನ್ನು ಕರೆದುಕೊಂಡು ತನ್ನ ಊರಿಗೆ ಬಂದು ತಂದೆತಾಯಿಗಳಿಗೆ ವಂದನೆಯನ್ನು ಮಾಡಿ ನಡೆದ ವೃತ್ತಾಂತವನ್ನು ಸಾಂಗವಾಗಿ ಹೇಳಲು ತಂದೆಯು--ಈ ದಿವಸ ನನಗೆ ಮಗನು ಹುಟ್ಟಿ ದನೆಂದು ಅವನನ್ನು ತಬ್ಬಿ ಕೊಂಡು ಮುದ್ದಾಡಿದನು, ಆ ಮೇಲೆ ಸರ್ವರೂ ಸಂತೋಷವಾಗಿದ್ದರು. 43. MARYADE RAMANNA, THE BRAHMAN, AND THE MERCHANT ೪೩. ಮತ್ಯಾದೆ ರಾಮಣ್ಣನು ಬ್ರಾಹ್ಮಣವರ್ತಕರ ವ್ಯಾಜ್ಯವನ್ನು ತೀರಿಸಿದುದು. ಉತ್ತರದೇಶದಲ್ಲಿ ಶೋಭಾವತಿ ಎಂಬ ಪಟ್ಟಣವಿರುವುದು, ಆ ಪಟ್ಟಣದಲ್ಲಿ ಸುಶೀಲನೆಂಬ ಬ್ರಾಹ್ಮಣನು ಸರ್ವತಂತ್ರಗಳಲ್ಲಿ ಯ ಬಹು ನಿಪುಣನಾಗಿ ಇರುವನು. ಈತನಿಗೆ ಬಾಲ್ಯಸ್ನೇಹಿತನಾದ ಪ್ರಜ್ಞಾಶಾಲಿ ಎಂಬ ಒಬ್ಬ ವೈಶ್ಯಸ್ನೇಹಿತನಿದ್ದನು. ಈ ಉಭಯರೂ ಬಾಲ್ಯದಾರಭ್ಯ ಬಹಳ ಮೈತ್ರಿಯಿಂದ ಸಕಲಕಾರ್ಯಗಳಲ್ಲಿಯ ಒಬ್ಬರಿಗೊಬ್ಬರು ಸಹಯೋಗಕ್ಷೇಮಿಗಳಾಗಿ ಇದ್ದರು. ಆದರೆ ಆ ಬ್ರಾಹ್ಮಣನ ಯೋಗ್ಯ ತೆಯನ್ನೂ ವರ್ತಕನ ವ್ಯಾಪಾರದ ಕುಶಲತೆಯನ್ನೂ ಅಲ್ಲಿ ವಿಚಾರಿಸುವವರಿಲ್ಲದೆ ಈ ಉಭಯರೂ ಬಹಳ ದರಿದ್ರರಾಗಿ ಜೀವನಕ್ಕೆ ಮಾರ್ಗವಿಲ್ಲದೆ ಒಂದು ದಿವಸ ಆಲೋಚ ನೆಯನ್ನು ಮಾಡಿದರು. ಏನಂದರೆ-ನಾವು ಈ ಸ್ಥಳದಲ್ಲಿ ಎಷ್ಟು ದಿವಸವಿದ್ದರೂ ನಮ್ಮ ಕಷ್ಟ ಪರಿಹಾರವಾಗಿ ಸೌಖ್ಯ ಉಂಟಾಗುವುದಿಲ್ಲ, ಸಾಯಲಾರದ ಬಡತನಕ್ಕೆ ಪಲಾಯನವೇ ನಿಕ್ಷೇಪ ಎಂಬ ಗಾದೆಯಂತೆ ದೇಶಾಂತರಕ್ಕೆ ಹೋಗಿ ಅಲ್ಲಿ ಪ್ರಬಲವಾದೆ ಆಶ್ರಯವನ್ನು ಹೊಂದಿ ಅದರಿಂದ ನಾವು ಮುಂದಕ್ಕೆ ಬರಬೇಕು, ನಮ್ಮ ಉಭಯರಲ್ಲಿ ನನಗೆ ಕೂಡಿಬಂದರೆ ನಾನು ನಿನಗೆ ಸಹಾಯವನ್ನು ಮಾಡಬೇಕು, ನಿನಗೆ ಕೂಡಿಬಂದು ನನಗೆ ಯಾವದೂ ಅನುಕೂಲಿಸದೇ ಹೋದರೆ ನೀನು ನನಗೆ ಪಾಲು ಕೊಟ್ಟು ಸಹಾಯ ಮಾಡಬೇಕು ಎಂದು ಪ್ರಧಮದಲ್ಲಿಯೇ ನಿಶ್ಚಯಮಾಡಿಕೊಂಡು ತಮ್ಮ ಸ್ಥಳವನ್ನು ಬಿಟ್ಟು ದೂರದೇಶಕ್ಕೆ ಹೋಗಿ ಆಯಾ ದೇಶಗಳ ಅರಸುಗಳನ್ನೆಲ್ಲಾ ಪರೀಕ್ಷೆ ಮಾಡಿ ಕಂಡು ಕೇಳಿಕೊಂಡರೂ ಎಲ್ಲಿಯ ತಕ್ಕ ಆಶ್ರಯವು ಸಿಕ್ಕದೆ ಕಡೆಗೆ ಒಂದು ದೊಡ್ಡ ಪಟ್ಟಣದಲ್ಲಿರುವ ಒಬ್ಬ ಅಡುಗೂಳಜ್ಜಿಯ ಮನೆಯಲ್ಲಿ ಹೋಗಿ ಇಳುಕೊಂಡರು, ಆ ಮೇಲೆ ಆ ಪಟ್ಟಣವನ್ನಾಳುವ ಮಹಾರಾಜಾ ಛತ್ರಪತಿ ಎಂಬುವನ ಬೇಟಿಮಾಡಿಕೊ ಳ್ಳುವಲ್ಲಿ ಆ ರಾಯನು ಈ ಸುಶೀಲನೆಂಬುವನ ವಿದ್ಯಾ ವೈದುಷ್ಯಕ್ಕೆ ಮೆಚ್ಚಿದವನಾಗಿ ಅವನಿಗೆ ದೊಡ್ಡ ಸಂಬಳವನ್ನು ಮಾಡಿಸಿಕೊಟ್ಟು ಆತನನ್ನು ತನ್ನ ಸಮುಖದಲ್ಲಿಯೇ ಇಟ್ಟು ಕೊಂಡನು, ಈತನ ಜೊತೆಯಲ್ಲಿ ಇದ್ದ ವರ್ತಕನಿಗೆ ವ್ಯಾಪಾರ ವಿಷಯದಲ್ಲಿ ಅನು