ಕಥಾಸಂಗ್ರಹ-೧ನೆಯ ಭಾಗ 49 ಕೂಲವಿಲ್ಲದೆ ಹೋದುದರಿಂದ ಸುಮ್ಮನೆ ಆ ಪಟ್ಟಣದಲ್ಲೇ ಇದ್ದು ಕೊಂಡು ಇದ್ದನು. ಪೂರ್ವದಲ್ಲಿ ಬ್ರಾಹ್ಮಣನೂ ವರ್ತಕನೂ ಸಹ ನಿಷ್ಕರ್ಷೆಯನ್ನು ಮಾಡಿಕೊಂಡು ಇದ್ದ ಪ್ರ ಕಾರ ಒಬ್ಬರಿಗೊಬ್ಬರು ಸಹ ಯೋಗಕ್ಷೇಮಿಗಳಾಗಿ ಹತ್ತು ಹದಿನೈದು ವರುಷಗಳ ವರೆಗೂ ಆ ಪಟ್ಟಣದಲ್ಲೇ ಇದ್ದರು. ಆ ಬ್ರಾಹ್ಮಣನು ದಿನೇ ದಿನೇ ಒಹಳ ಪ್ರಬಲನಾಗಿ ಮಹದೈಶ್ವರ್ಯವಂತನಾಗಿರುವಲ್ಲಿ ತಮ್ಮ ಸ್ಥಳಕ್ಕೆ ಹೋಗಬೇಕೆಂಬ ಚಿಂತೆಯುಂಟಾಗಿ ತನ್ನ ಮಿತ್ರನಾದ ವರ್ತಕನ ಸಂಗಡ ನಾವು ಬಂದು ಬಹಳ ದಿವಸವಾಯಿತು. ಮನೆಯ ಕಡೆ ಏನಾಯಿತೋ ? ನಮ್ಮ ಜನಗಳು ಏನಾದರೋ ? ಹೇಗೆ ಇದ್ದಾರೋ ? ನೋಡಿ ತಿಳಿಯದೆ ನಾವು ಉಭಯರೂ ಇಲ್ಲೇ ಇದ್ದು ಬಿಡುವುದು ಯುಕ್ತವಲ್ಲ. ಆದ ಕಾರಣ ನೀನು ಹೋಗಿ ಎಲ್ಲ ವನ್ನೂ ವಿಚಾರಿಸಿಕೊಂಡು ಬರಬೇಕೆಂದು ಹೇಳಿದವನಾಗಿ ಆ ವರ್ತಕನಿಗೆ ಹತ್ತು ಸಾವಿರ ವರಹಗಳನ್ನೂ ತನ್ನ ಮನೆಗೆ ಹತ್ತು ಸಾವಿರ ವರಹಗಳನ್ನೂ ಅಧಿಕ ಕ್ರಯವುಳ್ಳ ಒಂದು ದಿವ್ಯವಾದ ರತ್ನ ವನ್ನೂ ಕೊಟ್ಟು ಅವನನ್ನು ತನ್ನ ಸ್ಥಳಕ್ಕೆ ಕಳುಹಿಸಿಕೊಟ್ಟನು. ವರ್ತಕನು ಅದೇ ಪ್ರಕಾರ ತನ್ನ ಸ್ನೇಹಿತನಾದ ಬ್ರಾಹ್ಮಣನಿಂದ ದ್ರವ್ಯರತ್ನ ಗಳನ್ನು ತೆಗೆದು ಕೊಂಡು ಅಪ್ಪಣೆಯನ್ನು ಪಡೆದು ತನ್ನ ಊರಿಗೆ ಬಂದನು. ಅಷ್ಟರಲ್ಲಿ ಆ ಬ್ರಾಹ್ಮಣನ ಹೆಂಡತಿಯ ಸಂಗತಿ ಏನಂದರೆ-ಮನೆಯೆಲ್ಲಾ ಪೋಲಾಗಿ ಹೋಗಿ ಒಂದು ಕಡೆಯಲ್ಲಿ ಸ್ವಲ್ಪ ತಗುಲಿಕೊಂಡಿದ್ದ ಒಂದೆರಡು ಅಂಕಣದಲ್ಲಿ ಮಾತ್ರ ವಾಸವನ್ನು ಮಾಡಿಕೊಂಡು ಅನ್ನ ವಸ್ತ್ರಕ್ಕೆ ಮಾರ್ಗವಿಲ್ಲದೆ, ಬಹಳ ಕೃಶಳಾಗಿ ನೆಲಹ ಬಿದ್ದಿದ್ದಳು, ತನ್ನ ಗಂಡನ ಸಂಗಡ ಹೋದ ಆ ವರ್ತಕನು ಮಹಾಸಂಪತ್ತಿನಿಂದ ಬಂದ ನೆಂಬುವದನ್ನೂ ತನ್ನ ಗಂಡನು ಬರಲಿಲ್ಲವೆಂಬುದನ್ನೂ ಕೇಳಿ, ತನ್ನ ಗಂಡನು ಯಾಕೆ ಬರಲಿಲ್ಲ ವೋ ? ಏನು ಗತಿಯಾದನೋ ? ಎಂಬ ಭೀತಿಯಿಂದ ಈ ವರ್ತಕನ ಮನೆಯ ಬಳಿಗೆ ಬಂದು, ಬಾಗಿಲಲ್ಲಿ ನಿಂತುಕೊಂಡು ಅಲ್ಲಿರುವವರೊಡನೆ ತಾನು ಬಂದು ಇದ್ದ ನೆಂದು ತಿಳಿಸಿರಿ ಎಂದು ಹೇಳಿ ಕಳುಹಿಸಿದಳು. ಬಾಗಿಲು ಕಾಯುವ ಜನಗಳು ಹೋಗಿ ಈ ಸಂಗತಿಯನ್ನು ವರ್ತಕನಿಗೆ ಹೇಳಿದುದಕ್ಕೆ ಅವಳು ಯಾರು ? ನಮ್ಮಲ್ಲಿ ಏನು ಕೆಲಸ? ತಳ್ಳಿಬಿಡಿ ಎಂಬುದಾಗಿ ಹೇಳಿದನು, ವರ್ತಕನ ಆಳುಗಳು ಅದೇ ಪ್ರಕಾರ ಆ ಹೆಂಗಸನ್ನು ನೂಕಿಬಿಟ್ಟರು. ಆಗ ಆಕೆಯು--ಅಯ್ಯೋ, ದೇವರೇ ! ಹೀಗಾಯಿತೇ ? ಎಂದು ದುಃಖಿತಳಾಗಿ ಮನೆಗೆ ಹೊರಟು ಹೋಗಿ ಉಸ್ಸೆಂದು ನಿಟ್ಟುಸಿರನ್ನು ಬಿಟ್ಟು ತನ್ನ ಮನೆಯಲ್ಲಿ ಬಿದ್ದು ಕೊಂಡು ಜೀವನಕ್ಕೆ ಮಾರ್ಗವಿಲ್ಲದೆ ಕಷ್ಟ ಪಟ್ಟು ಕೊಂಡು ಇರುತ್ತಾ ಇದ್ದಳು, ಈಕೆಯು ಈ ರೀತಿಯಲ್ಲಿ ಇರುವಲ್ಲಿ ಮತ್ತೆ ಕೆಲವು ದಿವಸದ ಮೇಲೆ ಆ ಬ್ರಾಹ್ಮಣನಿಗೆ ತನ್ನ ಸ್ಥಳ ಮನೆ ಇವುಗಳನ್ನು ನೋಡಬೇಕೆಂದು ಮನಸ್ಸಾಗಿ ಈ ವಿಷಯವನ್ನು ಆ ಮಹಾರಾಜನಿಗೆ ತಿಳಿಸಿ ಹೊರಟು ತನ್ನ ಸ್ಥಳಕ್ಕೆ ಬಂದು ಶಿಥಿಲ ವಾಗಿರುವ ಮನೆಯಲ್ಲಿ ನೆಲಹತ್ತಿ ಬಿದ್ದಿರುವ ತನ್ನ ಹೆಂಡತಿಯನ್ನು ನೋಡಿ ವ್ಯಸನ ದಿಂದ--ಇಂಥಾ ವರ್ತಕನು ಇಲ್ಲಿಗೆ ಬಂದಾಗ ನಿನಗೇನೂ ಕೊಡಲಿಲ್ಲ ವೇ ? ಎಂಬು ದಾಗಿ ಕೇಳಿದುದಕ್ಕೆ ಏನೂ ಕೊಡಲಿಲ್ಲ ; ಕೊಟ್ಟು ಇದ್ದರೆ ನಾನು ಇಂಥಾ ಶ್ರಮ ದಿಂದ ಇರುವೆನೇ ? ಎಂದು ಹೇಳಿದಳು, ಇಷ್ಟರಲ್ಲಿ ಆ ಬ್ರಾಹ್ಮಣನು ಬಂದ ಸಮಾಚಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೬೧
ಗೋಚರ