50 KANARESE SELECTIONS-PART 1 ರವನ್ನು ವರ್ತಕನು ಕೇಳಿ ಬಂದು ಬಹಳ ಭಯ ಭಕ್ತಿಯಿಂದ ವಿಧೇಯನಾಗಿ ವಂದನೆ ಯನ್ನು ಮಾಡಿ ನಿಂತುಕೊಳ್ಳಲು ಆ ಬ್ರಾಹ್ಮಣನು-ಏನೋ, ಗೃಹಸ್ಥಾ ! ನಾನು ನಿನ್ನ ಕೈಯ್ಯಲ್ಲಿ ಕೊಟ್ಟು ಕಳುಹಿಸಿದ ಹಣವನ್ನೂ ರತ್ನ ವನ್ನೂ ನೀನು ನಮ್ಮ ಮನೆಗೆ ಕೊಡದೆ ಇರಬಹುದೇ ? ಎಂದು ಕೇಳಿದುದಕ್ಕೆ-ಅಯ್ಯೋ ! ನಾನು ಎಂದಿಗಾದರೂ ಅಂಥಾ ದ್ರೋಹವನ್ನು ಮಾಡುವೆನೇ ? ತಮ್ಮ ಒಡವೆಯನ್ನು ತಮಗೆ ಕೊಡುವುದಕ್ಕೆ ಅಡ್ಡಿಯುಂಟೇ ? ಎಂದು ಹೇಳಿದನು. ಅದಕ್ಕಾಬ್ರಾಹ್ಮಣನು ಈ ಸಂಗತಿಯೇನು ಎಂದು ಹೆಂಡತಿಯನ್ನು ಕೇಳಿದನು. ಆಕೆಯು-ಹಾಗೆ ಇವನು ಕೊಟ್ಟು ಇದ್ದರೆ ನಾನು ಹೀಗೆ ಯಾಕೆ ಇದ್ದೆನು, ಎಷ್ಟು ಮಾತ್ರವೂ ಕೊಡಲೂ ಇಲ್ಲ: ನಾನು ತೆಗೆದು ಕೊಳ್ಳಲೂ ಇಲ್ಲ ಎಂದು ಹೇಳಿದಳು, ಅದಕ್ಕೆ ಆ ಬ್ರಾಹ್ಮಣನು ಸಮಾ ಪದಲ್ಲಿದ್ದ ವರ್ತಕನನ್ನು ನೋಡಿ... ಆಕೆ ಏನು ಹೇಳುತ್ತಾಳೆ ? ಕೇಳೆಂದು ಮದಲಿಸಿ ದನು. ಅದಕ್ಕೆ ಆ ವರ್ತಕನು-ಅಯ್ಯಾ ! ನಾನು ಎಷ್ಟು ಮಾತ್ರವೂ ಸುಳ್ಳು ಹೇಳು ವವನಲ್ಲ, ತಾವು ಕೊಟ್ಟ ಹಣವನ್ನೂ ರತ್ನ ವನ್ನೂ ನಾನು ಅಮ್ಮನವರಿಗೆ ಈ ನಾಲ್ಕು ಜನಗಳ ಕೈಯ್ಯಲ್ಲಿ ಕೊಟ್ಟು ಕಳುಹಿಸಿದೆನು. ಇವರೇ ತಂದು ಕೊಟ್ಟಿದ್ದಾರೆ. ಇವೆ ರನ್ನು ಕೇಳಬಹುದೆಂದು ಮೊದಲೇ ಹೇಳಿಕೊಟ್ಟು ಇದ್ದ ತನ್ನ ಸಂಬಳಗಾರರನ್ನು ತೋರಿ ಸಿದನು, ಅವರನ್ನು ಕೇಳುವಲ್ಲಿ--ನಾವೇ ತೆಗೆದು ಕೊಂಡು ಬಂದು ಕೊಟ್ಟೆವು ಎಂದು ಹೇಳಿದರು. ಅನಂತರ ಈ ವರ್ತಕನು ಹೇಳಿದುದೇನಂದರೆ--ಅಮ್ಮನವರು ಎಲ್ಲವನ್ನೂ ತುರುಮನೆಗೆ ಸಾಗಿಸಿಬಿಟ್ಟು ನನ್ನನ್ನು ಈ ಮೇರೆಗೆ ದೌರ್ಜನ್ಯಕ್ಕೆ ಗುರಿಮಾಡುತ್ತಾರೆ. ನಾನು ಎಂದಿಗಾದರೂ ತಮಗೆ ದ್ರೋಹವನ್ನು ಮಾಡುತ್ತೇನೆಯೇ ? ಬಾಲ್ಯಾರಭ್ಯ ನನ್ನ ನಡತೆ ತಮಗೆ ತಿಳಿದೇ ಇದೆ ಎಂದು ಹೇಳಿದನು. ಈ ಬ್ರಾಹ್ಮಣನು-ವರ್ತ ಕನು ಬಹಳ ದಿವಸದಿಂದ ತನಗೆ ಸ್ನೇಹಿತನು, ಇವನು ಎಂದಿಗೂ ಇಂಥಾ ವಂಚನೆ ಯನ್ನು ನಡೆಸತಕ್ಕವನಲ್ಲ, ಇದು ಹೆಂಗಸಿನ ಮೋಸಗತಿಯೇ ಸರಿ ಎಂದು ಬಹಳ ಕೋಪದಿಂದ ಈ ವಿವಾದವು ಇಲ್ಲಿ ಬಗೆಹರಿಯುವುದಿಲ್ಲ ವೆಂದು ಯೋಚಿಸಿ ದೇಶದ ಲ್ಲೆಲ್ಲಾ ಪ್ರಸಿದ್ಧನಾಗಿ ಅನೇಕ ವಿವಾದಗಳನ್ನು ತೀರಿಸುವ ನ್ಯಾಯಾಧಿಪತಿಯ ಬಳಿಗೆ ವರ್ತಕನನ್ನೂ ಅವನ ಕಡೆಯ ಸಾಕ್ಷಿಗಳಾಗಿ ಇರುವ ಆಳುಗಳನ್ನೂ ಸಂಗಡ ಕರೆದು ಕೊಂಡು ಇನ್ನೂ ಬೇಕಾದ ಕೆಲವು ಸ್ನೇಹಿತರನ್ನೂ ತನ್ನೊಡನೆ ಪ್ರಯಾಣಮಾಡಿಸಿ ಕೊಂಡು ಕೆಲವು ಕೆಲವರು ಪಾಲಕಿಯ ಮೇಲೆಯ ಕುದುರೆಗಳ ಮೇಲೆಯ ರಥ ಗಳ ಮೇಲೆಯ ಕೂತು ಕೊಂಡು ಬಹಳ ಕೃಶಳಾಗಿ ಇರುವ ಹೆಂಡತಿಯನ್ನು ತನ್ನ ಮುಂದೆ ತಳ್ಳಿಸಿಕೊಂಡು ಆ ನ್ಯಾಯಾಧಿಪತಿಯ ಬಳಿಗೆ ಹೋಗಿ ತಮ್ಮ ವೃತ್ತಾಂತವ ನೈಲ್ಲ ತಿಳಿಸಿದನು. ಆಗ ಇಂಥಾ ಅನೇಕ ವಿವಾದಗಳು ಬಂದಿದ್ದುದರಿಂದ ಅವು ಗಳ ಪರಿಶೀಲನೆಯಲ್ಲಿಯೇ ಇರುವ ನ್ಯಾಯಾಧಿಪತಿಗೆ ಇವನ ವಿವಾದವನ್ನು ವಿಚಾರಿ ಸುವುದಕ್ಕೆ ಸಮಯವಿಲ್ಲ ದಿರಲು ಅಲ್ಲಿ ಆ ಬ್ರಾಹ್ಮಣನು ತಮ್ಮ ನ್ಯಾಯವನ್ನು ಜಾಗ್ರ ತಯಾಗಿ ಬಗೆಹರಿಸಿ ಕೊಡಬೇಕೆಂದು ಆ ನ್ಯಾಯಾಧಿಪತಿಗೆ ಬಹಳವಾಗಿ ಹೇಳಿಕೊಂಡು ಡರಿಂದ ಆತನು ಸಮ್ಮತಿಸಿ ಇದನ್ನೆಲ್ಲಾ ವಿಚಾರಿಸಿ ನಾಲ್ಕು ಮಂದಿ ಸಾಕ್ಷಿಗಳು
ಪುಟ:ಕಥಾಸಂಗ್ರಹ ಸಂಪುಟ ೧.djvu/೬೨
ಗೋಚರ