ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ ಎಂದಿಗೂ ಸುಳ್ಳು ಹೇಳಲಾರರೆಂದು ಎಣಿಸಿ ವರ್ತಕನು ಹಣವನ್ನೂ ರತ್ನವನ್ನೂ ಹೆಂಗ ಸಿಗೆ ಕೊಟ್ಟಿರುವುದು ನಿಶ್ಚಯವೆಂದು ತೀರ್ಪುಮಾಡಿದನು. ತರುವಾಯ ಬ್ರಾಹ್ಮಣನಿಗೆ ಮೊದಲೇ ಹೆಂಡತಿಯ ಮೇಲೆ ಸಂಶಯವಿದ್ದಿತು ಅದಕ್ಕೆ ಅನುಸಾರವಾಗಿ ಈ ನ್ಯಾಯಾ ಧಿಪತಿಯು ಮಾಡಿದ ತೀರ್ಪಿನಿಂದ ಆಕೆಯ ಮೇಲೆ ಮತ್ತಷ್ಟು ಆಗ್ರಹ ಉಂಟಾಗಿ ತಾವೆಲ್ಲ ರೂ ವಾಹನಗಳ ಮೇಲೆ ಕುಳಿತು ಕೊಂಡು ಆ ಹೆಂಗಸನ್ನು ಆಳಿನ ಕೈಯಿಂದ ಎಳೆಸಿಕೊಂಡು ಊರಿಗೆ ಹೊರಟು ಬರುತ್ತಾ ಇರುವಲ್ಲಿ ಮಧ್ಯಮಾರ್ಗದಲ್ಲಿರುವ ಒಂದು ಮಹತ್ತಾದ ಅರಣ್ಯದಲ್ಲಿ ಇನ್ನೂ ರು ಮುನ್ನೂರು ಜನ ದನಗಳನ್ನು ಕಾಯುವ ಹುಡು ಗರು ದನಗಳನ್ನು ಬಿಟ್ಟು ಕೊಂಡು ಅವರಲ್ಲಿ ರಾಮಣ್ಣನೆಂಬ ಒಬ್ಬನು ಅರಸನೆಂತಲೂ ಕೆಲವರು ಮಂತ್ರಿ ಪ್ರಧಾನಿಗಳೆಂತಲೂ ಕೆಲವರು ಸೇನಾಪತಿಗಳೆಂತಲೂ ಇನ್ನು ಕೆಲವರು ಕಾಲ್ಬಲಗಳೆಂತಲೂ ಈ ರೀತಿಯಾಗಿ ವಿಭಾಗಿಸಿ ವಿನೋದವಾಗಿ ಆಟವಾಡಿಕೊಂಡು ಇದ್ದರು, ಆ ಅರಸಾಗಿ ಇರುವ ಹುಡುಗನು ಆ ಮಾರ್ಗವಾಗಿ ಬರುವ ಈ ಬ್ರಾಹ್ಮಣ ಮುಂತಾದವರನ್ನೂ ರೋದನವನ್ನು ಮಾಡಿಕೊಂಡು ಹೋಗುವ ಹೆಂಗುಸನ್ನೂ ನೋಡಿ ಅವರೆಲ್ಲರನ್ನೂ ತಳ್ಳಿಕೊಂಡು ಬನ್ನಿರಿ ಎಂಬದಾಗಿ ತನ್ನ ಕಡೆಯ ಪರಿವಾರಕ್ಕೆ ಹೇಳಲು ಅದೇ ಪ್ರಕಾರ ಅವರು ಹೋಗಿ ಅವರನ್ನು ಹಿಡಿದು ತಂದು ನಿಲ್ಲಿಸಿದರು. ಅರಸನಾಗಿದ್ದ ಹುಡುಗನು ಆ ಜನಗಳನ್ನು ನೋಡಿ--ನೀವು ಯಾರು ? ಎಲ್ಲಿಂದ ಬಂದಿರಿ ? ಎಲ್ಲಿಗೆ ಹೋಗುತ್ತೀರಿ ? ನಿಮ್ಮ ಸಂಗತಿ ಏನು ? ಎಂದು ಕೇಳಿದನು. ಅದಕ್ಕಾ ಬ್ರಾಹ್ಮಣನುನೀವು ದನಗಳನ್ನು ಕಾಯುವ ಹುಡುಗರು ; ನಿಮಗೆ ನಮ್ಮ ಗೊಡವೆ ಏಕೆ ? ನೀವು ಈ ಸಂಗತಿಯನ್ನು ಕೇಳುವುದರಿಂದ ಪ್ರಯೋಜನವೇನು ? ನಾವು ಹೇಳಿ ಫಲವೇನು ? ಎಂದು ಹೇಳಿದನು, ಆಹಾ ! ಹಾಗೋ ? ನಾವು ದನಗಳನ್ನು ಕಾಯುವ ಹುಡುಗರೇ ಆಗಲಿ ! ಎಲಾ ! ಯಾರೋ ? ನೀವೆಲ್ಲರೂ ಜನಕ್ಕೆ ಒಂದೊಂದು ದೊಣ್ಣೆಯನ್ನು ತೆಗೆ ದುಕೊಂಡು ಬನ್ನಿರಿ ಎಂದು ಆಜ್ಞೆಯನ್ನು ಮಾಡಿದನು. ಅದಕ್ಕೆ ಅವರೆಲ್ಲ ರೂ ದೊಣ್ಣೆ ಗಳನ್ನು ತೆಗೆದುಕೊಂಡು ಬಂದು ಸ್ವಾಮೀಾ ! ಬುದ್ದೀ ! ಎಂದು ಎದುರಲ್ಲಿ ನಿಲ್ಲಲು ಇವರೆಲ್ಲರನ್ನೂ ಸಾಲಿಗೆ ನಿಲ್ಲಿಸಿ ತಲೆಗಳನ್ನು ಹೊಡೆದು ಬಿಡಿರಿ ಎಂದು ಅಪ್ಪಣೆಯನ್ನು ಕೊಟ್ಟನು. ಆಗ ಅವರು ತಮ್ಮ ಕಡೆಯ ಜನರೆಲ್ಲರೂ ಒಟ್ಟು ನಲ್ವತ್ತು ಐವತ್ತು ಮಂದಿ ಮಾತ್ರ ಇರುವರು. ಈ ದನಗಳನ್ನು ಕಾಯುವ ಹುಡುಗರಾದರೋ ಇನ್ನೂ ರು ಮುನ್ನೂರು ಜನರು. ತಾವು ಅನ್ಯಾಯವಾಗಿ ಸಾಯುವ ಹೊತ್ತು ಬಂದಿತಲ್ಲಾ ! ಎಂದು ಬಹಳ ಭಯಪಟ್ಟು-ಅಪ್ಪಾ ! ನಮ್ಮ ವೃತ್ತಾಂತವನ್ನೆಲ್ಲಾ ಹೇಳುತ್ತೇವೆ ; ನಮ್ಮನ್ನು ಪ್ರಾಣದಿಂದ ಬಿಟ್ಟರೆ ಸಾಕು ಎಂದು ಆದಿಯಿಂದ ನಡೆದ ಸಂಗತಿಗಳನ್ನು ಸರಿಯಾಗಿ ಹೇಳಿದರು. ಆ ಅರಸ ಮಂತ್ರಿ ಪ್ರಧಾನಿಗಳೂ ಆ ಸಂಗತಿಗಳನ್ನು ಚೆನ್ನಾಗಿ ಕೇಳಿ ಅವರೆಲ್ಲರನ್ನೂ ಬೇರೆ ಬೇರೆ ದೂರವಾಗಿ ಒಂದೊಂದು ಮರದ ಬುಡದಲ್ಲಿ ಒಬ್ಬೊ ಬ್ಬರನ್ನು ನಿಲ್ಲಿಸಿ ಒಂದು ತೆಂಗಿನಕಾಯಷ್ಟು ಎರೆಯ ಮಣ್ಣನ್ನು ತರಿಸಿ ಅದನ್ನು ತನ್ನಲ್ಲಿ ಮುಚ್ಚಿಟ್ಟು ಕೊಂಡು ಮೊದಲು ಆ ಸುಶೀಲನೆಂಬ ಬ್ರಾಹ್ಮಣನನ್ನು ಕರಿಸಿ ನೀನು ಕೊಟ್ಟ ರತ್ನವು ಎಷ್ಟು ಗಾತ್ರವಿದ್ದಿತು ? ಈ ಮಣ್ಣಿನಿಂದ ಉಂಡೆಯನ್ನು ಮಾಡಿ