ಪುಟ:ಕಥಾಸಂಗ್ರಹ ಸಂಪುಟ ೧.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 KANARESE SELECTIONS-PART I ಹಾಕು ಎಂದು ಸ್ವಲ್ಪ ಮಣ್ಣನ್ನು ಅವನ ಮುಂದೆ ಹಾಕಿದನು, ಅವನು ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಆ ರತ್ನದ ಗಾತ್ರಕ್ಕೆ ಸರಿಯಾಗಿ ಉಂಡೆಯನ್ನು ಮಾಡಿ ಹಾಕಿ ದನು. ಅನಂತರ ಅವನನ್ನು ದೂರವಾಗಿ ಕಳುಹಿಸಿಬಿಟ್ಟು ವರ್ತಕನನ್ನು ಕರಿಸಿ ಅವ ನನ್ನು ಕುರಿತು ಉಂಡೆಯನ್ನು ಮಾಡಿ ಹಾಕು ಎಂದು ಹೇಳಿದುದಕ್ಕೆ ಅವನು ಆ ರತ್ನವನ್ನು ನೋಡಿದ್ದವನಾದುದರಿಂದ ಅವನೂ ಅದೇ ಪ್ರಮಾಣವಾಗಿ ಮಾಡಿ ಹಾಕಿದನು. ಇವನನ್ನೂ ದೂರವಾಗಿ ಕಳುಹಿಸಿ ಆ ಸಾಕ್ಷಿಗಳಲ್ಲಿ ಮುಂದಾಗಿ ಒಬ್ಬ ನನ್ನು ಕರಿಸಿ--ನೀನು ನೋಡಿದ ರತ್ನ ವು ಬಹಳ ಬೆಲೆಯುಳ್ಳದು ಎಂದು ಹೇಳು ವೆಯಲ್ಲಾ ಅದು ಎಷ್ಟು ಗಾತ್ರವಿದ್ದಿತು ಎಂದು ಕೇಳಿ ಗಾಬರಿ ಮಾಡಿದು ದಕ್ಕೆ ಅವನು ಒಂದು ದೊಡ್ಡ ನಿಂಬೆಯ ಕಾಯಿಯ ಗಾತ್ರ ಉಂಡೆಯನ್ನು ಮಾಡಿ ಇಟ್ಟನು. ಆತರು ವಾಯ ಅವನನ್ನು ಬಹಳ ದೂರವಾಗಿ ಕಳುಹಿಸಿಬಿಟ್ಟು ನಿಂತ ಮರು ಜನಗಳನ್ನು ಕರಿಸಿ ಬೇರೆ ಬೇರೆ ಯುಕ್ಕಿ ಚಮತ್ಕಾರಗಳಿಂದ ಕೇಳು ವಾಗೆ ಒಬೊಬ್ಬರು ಒಂದೊಂದು ವಿಧವಾಗಿ ಹೇಳಿ ಬಹಳ ಹೆಚ್ಚು ಕಡಮೆಯಾಗಿ ಉಂಡೆಗಳನ್ನು ಮಾಡಿ ಹಾಕಿದರು. ಆ ಮೇಲೆ ಅವರೆಲ್ಲರನ್ನೂ ಕಳುಹಿಸಿಬಿಟ್ಟು ನೋಡಲು ಆ ಉಂಡೆಗಳೊಳಗೆ ಬ್ರಾಹ್ಮಣ ವರ್ತಕ ಇವರಿಬ್ಬರೂ ಮಾಡಿದ ಉಂಡೆಗಳೆ ರಡೂ ಒಂದೇ ಸಮನಾಗಿಯ ಸಾಕ್ಷಿಗಳಲ್ಲಿ ಒಬ್ಬ ಮಾಡಿದುದು ದೊಡ್ಡದಾಗಿಯ ಇನ್ನೊಬ್ಬ ಮಾಡಿದುದು ಚಿಕ್ಕದಾಗಿಯೂ ಇರುವುದನ್ನು ನೋಡಿ ತನ್ನ ಮನಸ್ಸಿನಲ್ಲಿ ಆಲೋಚನೆ ಮಾಡಿ ಸಾಕ್ಷಿಗಳು ಆ ರತ್ನ ವನ್ನು ನೋಡಿದ್ದು ದೂ ಕೊಟ್ಟಿದ್ದು ದೂ ಸುಳ್ಳು ಎಂಬದಾಗಿ ನಿರ್ಣಯಿಸಿ ಸಾಕ್ಷಿಗಳಲ್ಲಿ ಒಬ್ಬನನ್ನು ಕರಿಸಿ ಅವನು ಹತ್ತಿರಕ್ಕೆ ಬಂದ ಮಾತ್ರದಲ್ಲೇ ಸೇವಕರನ್ನು ನೋಡಿ- ಎಲಾ ! ಅವನಾರೋ ? ಆ ದೊಣ್ಣೆ ಯಿಂದ ಇವನ ತಲೆಯನ್ನು ಒಡೆದುಹಾಕು ಎಂದು ಭಯವನ್ನು ಹುಟ್ಟಿಸಿ-ಬ್ರಾಹ್ಮಣ ವರ್ತಕ ಇವರು ಮಾಡಿದ ಉಂಡೆಗಳು ಲೇಶವ್ಯತ್ಯಾಸವಿಲ್ಲದೆ ಎರಡೂ ಒಂದೇ ಸಮನಾಗಿ ಇವೆ, ನೀವು ಮಾಡಿದ ಉಂಡೆಗಳು ಒಂದಕ್ಕೊಂದು ಭೇದವಾಗಿ ಇವೆ. ಇದರ ನಿಜಸ್ಥಿತಿಯನ್ನು ವಂಚಿಸದೆ ಹೇಳು ಎನಲು ಅವನು ಭಯದಿಂದ ನಾನು ಹೇಳಿದುದೂ ನನ್ನ ಜೊತೆಯ ಸಾಕ್ಷಿಗಳು ಹೇಳಿದುದೂ ಸುಳ್ಳು, ವರ್ತಕನಲ್ಲಿ ನಾನು ಸಂಬಳಕ್ಕೆ ಇರುವುದರಿಂದ ಅವನ ಹೇಳಿಕೆಯ ಮೇಲೆ ನಾನು ಸುಳ್ಳು ನುಡಿದಿರು ವುದುಂಟೆಂದು ಹೇಳಲು ಕಡಮೆ ಮೂರು ಜನಗಳನ್ನೂ ಕರಿಸಿ ಪೂರಾ ಭಯಪ ಡಿಸಿ ಕೇಳುವಾಗ್ಗೆ ಅವರೂ ಅವನಂತೆಯೇ ಹೇಳಿಬಿಟ್ಟರು. ಆ ಮೇಲೆ ವರ್ತಕನನ್ನು ಕರಿಸಿ ಮಣ್ಣಿನ ಉಂಡೆಗಳನ್ನೆಲ್ಲಾ ತೋರಿಸಿ ಆ ವಿವರವನ್ನೆಲ್ಲಾ ಹೇಳಿ ಸಾಕ್ಷಿಗಳನ್ನು ಸಮಕ್ಷದಲ್ಲಿ ನಿಲ್ಲಿಸಿ ಹೇಳಿಸಿದುದರ ಮೇಲೆ ಅವನು ಒಪ್ಪಿಕೊಂಡು ತನ್ನ ಟೊಂಕದಲ್ಲಿ ಇದ್ದ ರತ್ನ ವನ್ನು ಬಿಚ್ಚಿ ಮುಂದಿಟ್ಟನು. ಅನಂತರ ಬ್ರಾಹ್ಮಣನನ್ನು ಕರಿಸಿಕೊಂಡು ಅವರೆಲ್ಲರ ಎದುರಿಗೆ ಈ ಬ್ರಾಹ್ಮಣವರ್ತಕರಿಬ್ಬರು ಮಾಡಿರುವ ಉಂಡೆಗಳಿಗೆ ಸರಿಯಾಗಿರುವ ರತ್ನ ವನ್ನು ತೋರಿಸಿ, ವರ್ತಕನ ಮೇಲೆ ತಪ್ಪು ಹೊರಿಸಿ, ಬ್ರಾಹ್ಮಣನ ಹೆಂಡತಿಯನ್ನು ಕರಿಸಿ ಬ್ರಾಹ್ಮಣನ ವಶವನ್ನು ಮಾಡಿದನು. ಇವರೆಲ್ಲರೂ ಬಹಳ