ಕಥಾಸಂಗ್ರಹ_ ೧ನೆಯ ಭಾಗ S3 ಸಂತೋಷಪಟ್ಟವರಾಗಿ ಈ ದನಗಳನ್ನು ಕಾಯುವ ಹುಡುಗರ ಬುದ್ದಿಗೆ ಆಶ್ಚರ್ಯ ಪಟ್ಟು ಕೊಂಡು ಹೋದರು. ಅಂದಿನಿಂದ ಆ ಹುಡುಗನು ಮರಾದೆ ಕಾಮಣ್ಣನೆಂಬ ಹೆಸರಿನಿಂದ ಪ್ರಸಿದ್ಧನಾದನು. 44, KING SUDARSHANA AND HIS SONS ೪೪, ಸುದರ್ಶನನೆಂಬ ರಾಜನೂ ಆತನ ಕುಮಾರರೂ. ಪಾಟಲೀಪುರವೆಂಬ ಪಟ್ಟಣದಲ್ಲಿ ಸುದರ್ಶನನೆಂಬ ರಾಯನು ಅಮರಶಕ್ತಿ ಎಂಬ ಪ್ರಧಾನನೊಡನೆ ರಾಜ್ಯ ಪರಿಪಾಲನೆಯನ್ನು ಮಾಡಿಕೊಂಡು ಇರುತ್ತಿದ್ದನು ಬಂಧು ಜನರಲ್ಲಿ ದಾಕ್ಷಿಣ್ಯವೂ ಸೇವಕ ಜನರಲ್ಲಿ ದಯೆಯ ಸೀಜನರಲ್ಲಿ ಧೂರ್ತತ್ವವೂ ದುರ್ಜ ನರಲ್ಲಿ ಕೋಪವೂ ಸಜ್ಜನರಲ್ಲಿ ಪ್ರೀತಿಯ ನೃಪಜನರಲ್ಲಿ ನಯವೂ ಗುರುಜನಗಳಲ್ಲಿ ಕ್ಷಮೆಯ ವಿದ್ವಾಂಸರಲ್ಲಿ ತ್ಯಾಗವೂ ಶತ್ರುಗಳಲ್ಲಿ ಪರಾಕ್ರಮವೂ ಇವುಗಳು ಯಾವ ಪುರುಷನಲ್ಲಿ ಇವೆಯೋ ಅವನೇ ಸಕಲ ಲೋಕವ್ಯಾಪಾರಗಳನ್ನೂ ತಿಳಿದು ಜನರನ್ನು ಪರಿಪಾಲಿಸುವನು, ಮತ್ತು ಯಾವ ಅರಸಿಗಾದರೂ ಯಾವ ಮನುಷ್ಯನಿಗಾದರೂ ಮೊದಲು ಧರ್ಮದಲ್ಲಿ ಚಿಂತೆ ಇರಬೇಕು. ಅರಸನು ತನ್ನ ಆಪ್ತ ಪ್ರಧಾನರ ಸ್ವಭಾವ ಗುಣಗಳನ್ನು ತಿಳಿಯಬೇಕು, ಸಮಯಕ್ಕೆ ತಕ್ಕ ಹಾಗೆ ಕೋಪವನ್ನೂ ದಯೆಯನ್ನೂ ತೋರಿಸಬೇಕು, ಆತ್ಮಸಂರಕ್ಷಣೆಯಲ್ಲಿ ಅತಿಜಾಗರೂಕನಾಗಿರಬೇಕು, ರಣಾಗ್ರದಲ್ಲಿ ಈ ಶರೀರವು ತನ್ನದಲ್ಲವೆಂಬ ಧೈರ್ಯವುಳ್ಳವನಾಗಿರಬೇಕು. ಇಂಥಾ ಗುಣಾತಿಶಯಗಳು ಇವನೇ ರಾಜಶ್ರೇಷ್ಠನೆನಿಸಿಕೊಳ್ಳುವನು, ಮತ್ತು ಸತ್ಪಾತ್ರವನ್ನು ತಿಳಿದು ದಾನವನ್ನು ಮಾಡಬೇಕು, ಪರರೆ ಗುಣದೋಷಗಳನ್ನು ತಿಳಿದು, ರಕ್ಷಿ ಸುವವನಾಗಿರಬೇಕು, ಸೇವ ಕರೇ ಮೊದಲಾದ ಸಮಸ್ತ ಪ್ರಾಣಿಗಳನ್ನೂ ತನ್ನ ಹಾಗೆಯೇ ನೋಡಿಕೊಳ್ಳಬೇಕು. ಪರರ ಮನೋಭಾವಗಳನ್ನು ತಿಳಿಯಬೇಕು ರಣದಲ್ಲಿ ವೈರಿಗಳನ್ನು ಜಯಿಸಬೇಕು. ಈ ಸುದರ್ಶನರಾಜನು ಹೀಗಿರುವ ನೀತಿಶಾಸ್ಕೂಕ್ತವಾದ ಸಮಸ್ತ ರಾಜಗುಣ ಸಂಪನ್ನನಾಗಿ ತಾರತಮ್ಯವನ್ನು ತಿಳಿದು ರಾಜ್ಯವನ್ನಾಳುತ್ತಾ, ಬಹುಕಾಲ ಮಕ್ಕಳಿ ಅದೆ ಕಡೆಗೆ ದೈವಾನುಗ್ರಹದಿಂದ ವಸುಶಕ್ತಿ ರುದ್ರ ಶಕ್ತಿ ಮೃದುಶಕ್ತಿ ಎಂಬ ಹೆಸರುಳ್ಳ ಮೂರು ಮಂದಿ ಕುಮಾರರನ್ನು ಪಡೆದು ಸುಖದಿಂದಿರಲು ಆ ಮರು ಮಂದಿಯ ತಾಯಿ ತಂದೆಗಳ ಮಾತನ್ನು ಕೇಳದೆ ದುರ್ಜನರಾಗಿ ಸಮಸ್ತರಿಗೂ ಉಪದ್ರವಗಳನ್ನು ಮಾಡುತ್ತಾ ಇದ್ದರು ಅವರ ದುರ್ಗುಣಗಳು ಯಾವುವಂದರೆ-ಜೂಜಾಡುವುದು ಸುರಾಪಾನ ಮಾಡುವುದು ಚಾರ್ವಾಕರ ಸಂಗಡ ಸ್ನೇಹವನ್ನು ಮಾಡುವುದು ಬೇಟೆಯಾಡುವುದು ವ್ಯಭಿಚಾರ ಮಾಡುವುದು ಕಳ್ಳತನ ಮಾಡುವುದು ನೀಚರ ಸೇವೆಯನ್ನು ಮಾಡುವುದು ಇವು ಏಳೂ ಸಪ್ತ ವ್ಯಸನಗಳೆನಿಸಿಕೊಳ್ಳುವುವು. ಆ ಕುಮಾರರು ಇಂಥಾ ದುರ್ಗುಣಗಳಲ್ಲಿಯೇ ನಿರಂತರವೂ ಆಸಕ್ತರಾಗಿದ್ದರು.
ಪುಟ:ಕಥಾಸಂಗ್ರಹ ಸಂಪುಟ ೧.djvu/೬೫
ಗೋಚರ