ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 KANARESE SELECTIONS-PARTI ಮತ್ತು ಯೌವನವು ಧನಸಂಪತ್ತಿಯು ಪ್ರಭುತ್ವವು ಅವಿವೇಕವೂ ಈ ನಾಲ್ಕರಲ್ಲಿ ಒಂದೊಂದೇ ಅನರ್ಥಕ್ಕೆ ಕಾರಣವಾದುದು, ಆದರೆ ನಾಲ್ಕೂ ಒಬ್ಬನಲ್ಲಿಯೇ ಇದ್ದರೆ ಕೇಳತಕ್ಕಿದೇನು ? ಎಂದು ನೀತಿಯುಂಟು. ಆ ಕುಮಾರರಲ್ಲಿ ಈ ನಾಲ್ಕು ಗುಣ ಗಳೂ ಇದ್ದುದರಿಂದ ಹೀಗೆ ಮದಾಂಧರಾಗಿ ದುರ್ಮಾರ್ಗದಲ್ಲಿ ನಡೆಯುತ್ತಿರುವ ತನ್ನ ಕುಮಾರರನ್ನು ನೋಡಿ ರಾಯನು ತನ್ನ ಮನಸ್ಸಿನಲ್ಲಿ ನೊಂದುಕೊಂಡು ಪ್ರಧಾನನೊಡನೆ ಹೀಗೆಂದನು-ಎಲೈ ಮಂತ್ರಿಯೇ ! ವಿದ್ವಾಂಸನಲ್ಲದೆಯ ಧರ್ಮಿಷ್ಣನಲ್ಲದೆಯ ಇರುವ ಮಗನಿಂದಲೂ ಈಯದೆಯ ಹಾಲನ್ನು ಕರೆಯ ದೆಯ ಇರುವ ಹಸುವಿನಿಂದಲೂ ಏನು ಪ್ರಯೋಜನವು ? ಮತ್ತು ವಿದ್ಯಾಬುದ್ದಿ ಸೌ ಜನ್ಯಮರ್ಯಾದೆಗಳಿಲ್ಲದ ಕುಮಾರನು ಹುಟ್ಟುವುದಕ್ಕಿ೦ತ ಗರ್ಭವು ಇಳಿದು ಹೋಗುವುದೇ ಮೇಲು. ಹುಟ್ಟಿದರೆ ಆ ಶಿಶುವು ಆ ಕೂಡಲೇ ಮೃತವಾಗುವುದೇ ಮೇಲು, ಅಥವಾ ಹೆಣ್ಣಾಗಿ ಹುಟ್ಟು ವುದು ಲೇಸು, ಅಂಧ ಮಕ್ಕಳನ್ನು ಹೆತ್ತು ಮೈನೋವು ಮಾಡಿಕೊಳ್ಳುವುದಕ್ಕಿಂತ ತಾಯಿಯು ಬಂಜೆಯಾಗಿರುವುದೇ ಒಳ್ಳೆ ಯದು, ಅಥವಾ ಅದನ್ನು ಮತ್ತೊಬ್ಬರಿಗೆ ಸಾಕುವುದಕ್ಕಾಗಿ ಕೊಟ್ಟು ಬಿಡುವುದೇ ಉತ್ತಮವು, ಯಾಕಂದರೆ ಅರಣ್ಯ ದಲ್ಲಿ ದಟ್ಟವಾಗಿ ಬೆಳೆದು ಇರುವ ಬಿದಿರುಗಳು ಒಂದಕ್ಕೊಂದು ಉಜ್ವಲಾಗಿ ಆ ಕಾವಿನಿಂದ ಆಗ್ನಿ ಯು ಹುಟ್ಟಿ ಅದು ಆ ವನವೆಲ್ಲ ವನ್ನೂ ದಹಿಸುವ ರೀತಿಯಲ್ಲಿ ದುರ್ಮಾರ್ಗಿಗಳಾದ ಕುಮಾರರು ಹುಟ್ಟಿ ದುಷ್ಕಲಹ ದಿಂದ ಎರಡು ಕುಲವನ್ನೂ ಕೆಡಿಸುವರು ಎಂದು ಆನೇಕ ಪ್ರಕಾರದಿಂದ ಹೇಳಿಕೊಂಡು ರಾಯನು ಬಿಸುಸುಯ್ದನು. - ಬುದ್ಧಿಯುಳ್ಳವನಾಗಿರಬೇಕು ; ಸ್ಥಿರವಾಗಿ ಮಾತಾಡಬೇಕು ; ಗುಣಾವಗುಣ ಭಾವಗಳನ್ನು ತಿಳಿದಿರಬೇಕು ; ಐಶ್ವರ್ಯವಂತನಾಗಿರಬೇಕು ; ಕೀರ್ತಿವಂತನಾಗ ಬೇಕು ; ಪರರ ಇಂಗಿತವನ್ನು ತಿಳಿಯುವವನಾಗಿರಬೇಕು ; ಸಕಲ ಜನರಿಗೂ ಸಮ್ಮತ ನಾಗಿರಬೇಕು ; ಪಂಡಿತನಾಗಿರಬೇಕು ; ಸಾತ್ವಿಕನಾಗಿರಬೇಕು ; ನಾನಾ ಭಾಷೆಗಳ ಲ್ಲಿಯ ನವರಸಾಲಂಕಾರಯುಕ್ತವಾಗಿ ಕವಿತ್ವವನ್ನು ಹೇಳುವ ಪ್ರೌಢಿಮೆಯುಳ್ಳವ ನಾಗಿರಬೇಕು ; ರಸಜ್ಞನಾಗಬೇಕು ಎಂಬ ನೀತಿಶಾಸ್ಕೋಕಮಾದ ಸಕಲ ಮಂತ್ರಿಗು ಣಯುಕ್ತನಾಗಿದ್ದ ಆ ಪ್ರಧಾನನು ರಾಯನನ್ನು ಕುರಿತು-ಎಲೈ ರಾಯಾ ! ಸಕಲ ಗುಣಸಂಪನ್ನನಾದ ಒಬ್ಬನೇ ಕುಮಾರನು ಸಾಕು, ದುರ್ಮಾರ್ಗಿಗಳಾದ ಕುಮಾರರು ನೂರುಮಂದಿ ಇದ್ದರೂ ಏನು ಪ್ರಯೋಜನ ? ಹೇಗೆಂದರೆ ಒಬ್ಬ ಚಂದ್ರನು ಉದಯ ವಾದರೆ ಪಂಚಾಶತ್ರೋಟಿಯೋಜನವಿಸ್ತಾರವಾದ ಈ ಭೂಮಂಡಲವೆಲ್ಲವೂ ಪ್ರಕಾಶ ಮಾನವಾಗಿ ಇರುವುದು ಆ ಒಬ್ಬ ಚಂದ್ರನು ಇಲ್ಲದೆ ನಕ್ಷತ್ರಗಳು ಎಷ್ಟು ಇದ್ದಾ ಗ್ರೂ ಏನು ಪ್ರಯೋಜನವು ? ಮತ್ತು ಪ್ರಿಯಳಾದ ಹೆಂಡತಿ ದೊರಕುವುದೂ” ವಿನಯ ವಂತರಾದ ಕುಮಾರರು ಹುಟ್ಟುವುದೂ ಸೌಜನ್ಯವುಳ್ಳ ಅಣ್ಣತಮ್ಮಂದಿರು ಇರುವುದೂ ಮರ್ಯಾದೆಯುಳ್ಳ ಬಂಧುಗಳು ಇರುವುದೂ ಜಾಣನಾದ ಸ್ನೇಹಿತನು ದೊರಕು ವದೂ ಧರ್ಮಗುಣ ಉಂಟಾಗುವುದೂ ಇವೆಲ್ಲಾ ಪೂರ್ವಜನ್ಮದ ಪುಣ್ಯದ ಫಲಗಳು.