ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ SS ಮತ್ತು ಸಾಲವನ್ನು ಮಾಡಿದ ತಂದೆಯ ಹಾದರವನ್ನು ಮಾಡುವ ತಾಯಿ ಯ ಸೌಂದರ್ಯವಂತಳಾದ ಹೆಂಡತಿಯ ಮೂರ್ಖನಾದ ಮಗನೂ ಪರಮಶತ್ರು ಗಳೆನ್ನಿಸಿಕೊಳ್ಳುವರು ಎಂದು ನೀತಿ ಇರುವುದರಿಂದ ಈ ಕುಮಾರರು ನಿನಗೆ ಶತ್ರುಗಳೇ ಸರಿ ಎಂದು ಹೇಳಿ ದೀರ್ಘಾಲೋಚನೆಯನ್ನು ಮಾಡಿ-ಎಲೈ ರಾಯನೇ! ನಿನ್ನ ಮಕ್ಕಳನ್ನು ದೊಡ್ಡ ವಿದ್ವಾಂಸರಲ್ಲಿ ಸೇವೆಗೆ ನಿಲ್ಲಿಸಿ ವಿದ್ಯಾಭ್ಯಾಸವನ್ನು ಮಾಡಿಸಿದರೆ ಅವರ ಅನುಗ್ರಹಬಲದಿಂದ ಬುದ್ದಿವಂತರಾದಾರು ಎನಲು ಆ ರಾಯನು ಪ್ರಧಾನಿಯ ಮಾತು ನಿಶ್ಚಯವೆಂದೆಣಿಸಿ ತನ್ನ ದೇಶದಲ್ಲಿ ಇರುವ ವಿದ್ವಾಂಸರೆಲ್ಲರನ್ನೂ ಕರಿಸಿ ಅವ ರಿಗೆ ವಂದನಾದ್ಯುಪಚಾರಗಳನ್ನು ಮಾಡಿ ಉಚಿತಾಸನಗಳಲ್ಲಿ ಕುಳ್ಳಿರಿಸಿ ತಾನು ಬದ್ಧಾಂಜಲಿಯಾಗಿ ನಿಂತು-ವಿದ್ಯೆಯೆಂಬ ಮಹದೈಶ್ವರ್ಯಸಂಪನ್ನ ರೂ ಪರಮಶ್ರೀ ರೂ ಆಗಿರುವ ದೈವಜ್ಞ ಮೂರ್ತಿಗಳಿರಾ ! ನನ್ನ ಕುಮಾರರನ್ನು ಬುದ್ದಿವಂತರನ್ನಾಗ ಮಾಡಿರಯ್ಯಾ ! ಅನ್ನಲಾಗಿ ಆ ವಿದ್ವಾಂಸರೆಲ್ಲರೂ ಈ ಕುಮಾರರ ಲಕ್ಷಣಗಳನ್ನು ನೋಡಿದವರೂ ಕೇಳಿದವರೂ ಆದಕಾರಣ ಏಕಮುಖವಾಗಿ ರಾಯನೊಡನೆ ಹೀಗೆಂ ದರು-ಎಲೈ ರಾಯನೇ ! ನಿನ್ನ ಕುಮಾರರು ಅತಿಮರ್ಖರು ; ಮಹಾ ದುಷರು ; ದುರಾಚಾರಿಗಳು ; ಲೋಕದಲ್ಲಿ ವಿವೇಕಿಯನ್ನು ತಿದ್ದಬಹುದು ; ಅವಿವೇಕಿಯನ್ನೂ ತಿದ್ದಬಹುದು. ತಿಳಿದೂ ತಿಳಿಯದ ಮೂರ್ಖನನ್ನು ಸೃಷ್ಟಿಕರ್ತನಾದ ನಾಲ್ಕು ಮುಖ ಗಳುಳ್ಳ ಬ್ರಹ್ಮನೂ ತಿದ್ದಲಾರನು. ಇದಲ್ಲದೆ ಬಹಳ ಪ್ರಯಾಸಪಟ್ಟು ಮರಳಿನಿಂದಾ ದರೂ ತೈಲವನ್ನು ತೆಗೆಯಬಹುದು. ದಾಹಗೊಂಡವನು ಬಯಲುಗೊರೆಗಳಲ್ಲಾದರೂ ನೀರನ್ನು ಕುಡಿಯಬಹುದು, ಬಹುಕಾಲ ಭೂಮಿಯಲ್ಲಿ ಸುತ್ತಿ ಮೊಲದ ಕೊಂಬನ್ನಾ ದರೂ ಸಂಪಾದಿಸಬಹುದು. ಇಂಥಾ ಮರ್ಖರ ಮನಸ್ಸನ್ನು ಯಾರೂ ತಿದ್ದಲರಿ ಯರು, ಮತ್ತು ಉಗ್ರವಾದ ನೆಗಳಿನ ಬಾಯಿಯಲ್ಲಿರುವ ರತ್ನವನ್ನಾದರೂ ಬಲಾತ್ಕಾರ ದಿಂದ ಹೊರಗೆ ತೆಗೆಯಬಹುದು ಚಲಿಸುತ್ತಿರುವ ತೆರೆಗಳಿಂದ ತುಂಬಿರುವ ಸಮುದ್ರ ವನ್ನಾ ದರೂ ಕಾಲಿನಿಂದ ದಾಟಿಹೋಗಬಹುದು, ಬಹಳ ಕೋಪಿಷ್ಠ ವಾದ ಸರ್ಪವನ್ನಾ ದರೂ ತಲೆಯಮೇಲೆ ಹೂವಿನ ಹಾಗೆ ಧರಿಸಬಹುದು. ಆದರೆ ಮರ್ಖರನ್ನು ತಿದ್ದು ವದು ಮಾತ್ರ ಯಾರಿಂದಲೂ ಆಗುವುದಿಲ್ಲ, ಆದುದರಿಂದ ನಾವು ನಿನ್ನ ಕುಮಾರ ರನ್ನು ತಿದ್ದಲಾರೆವೆಂದು ಹೇಳಲು ರಾಯನು ಮಹಾ ಕೋಪದಿಂದ ಗರ್ಜಿಸಿ-ಎಲೈ ವಿದ್ಯಾಂಸರುಗಳಿರಾ ! ನೀವು ಮಹಾ ಸಮರ್ಥರೆಂದು ನಿಮ್ಮ ಸಂಗಡ ನಾನು ಹೇಳಿ ಕೊಂಡರೆ ನಮ್ಮ ಕೈಲಾಗದೆಂದು ನೀವು ಹೇಳಿದ ಮೇಲೆ ನೀವು ನನ್ನ ರಾಜ್ಯದಲ್ಲಿ ಯಥೇಚ್ಚವಾಗಿ ಉಂಬಳಿ ಉಡುಗೆರೆಗಳನ್ನು ಪಡೆದು ವಾಸವನ್ನು ಮಾಡಿಕೊಂಡು ಇರುವುದರಿಂದ ಪ್ರಯೋಜನವೇನು ? ಇನ್ನು ಮೇಲೆ ನಿಮಗೆ ನಡೆಯುತ್ತಿರುವ ವರ್ತನ ಮರ್ಯಾದೆ ಮುಂತಾದವುಗಳನ್ನು ನನ್ನ ಅರಮನೆಗೆ ಸೇರಿಸಿಕೊಳ್ಳುತ್ತೇನೆ ; ನನ್ನ ಕುಮಾರರನ್ನು ತಿದ್ದಿ ಬುದ್ದಿವಂತರನ್ನಾ ಗಮಾಡಲಾರದ ನಿಮ್ಮಿಂದ ನನಗೆ ಏನು ಉಪ ಯೋಗ ? ನಿಮ್ಮನ್ನು ಆದರಿಸಿದುದರಿಂದ ನನಗೆ ಏನುಫಲ ? ನೀವು ನನ್ನ ದೇಶದಲ್ಲಿಯೇ ಇರಕೂಡದೆಂದು ಕಠಿಣವಾದ ಮತು