ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 KANARESE SELECTIONS-PART I ಮುಖವನ್ನೊ ಬ್ಬರು ನೋಡುತ್ತಾ ಬಹಳ ಚಿಂತಾಕ್ರಾಂತರಾಗಿ ಉತ್ತರವನ್ನು ಕೊಡಲ ರಿಯದೆ ತಲೆಗಳನ್ನು ಬೊಗ್ಗಿಸಿಕೊಂಡು ಸುಮ್ಮನಿರಲು ಅವರೊಳಗೆ ಎಷ್ಟು ಶರ್ಮನೆಂಬ ಒಬ್ಬ ಬ್ರಾಹ್ಮಣನು ಧಿಗ್ಗನೆ ಎದ್ದು--ಎಲೈ ರಾಜಕಂಠೀರವಾ ! ರಾಜಮಾರ್ತಾಂಡಾ ರಾಜಚೂಡಾಮಣೀ ! ದಾನಚಿಂತಾಮಣೀ ! ಶಿ ಮದ್ವಿದ್ವಜ್ಜನಮನಃಕುಮುದರಾಕಾ ಸುಧಾಕರೋಪಮಾನಾ ! ಪದವಾಕ್ಯಪ್ರಮಾಣಜ್ಞಾ !*ಕರುಣಾಕಟಾಕ್ಷ ವೀಕ್ಷಣಾ ! ಕಲ್ಪವೃಕ್ಷದಂತಿರುವ ನಿನ್ನನ್ನು ನಂಬಿ ಸುಖಿಸುವಂಥಾ ಈ ವಿದ್ವಜ್ಜನರ ಮೇಲೆ ಕೋಪವು ಏತಕ್ಕೆ ? ನಾನು ನಿನ್ನ ಮೂರು ಮಂದಿ ಕುಮಾರರನ್ನೂ ಆರು ತಿಂಗಳಲ್ಲಿ ವಿದ್ವಜ್ಯೋರರನ್ನು ಮಾಡುವೆನು. ಇದು ಸತ್ಯವು, ನನ್ನ ಸಾಮರ್ಥವನ್ನು ನೋಡೆಂದು ಶಪಥವನ್ನು ಮಾಡಿಕೊಳ್ಳಲು ಆ ರಾಯನು ಕೋಪವನ್ನು ಶಾಂತಪಡಿಸಿಕೊಂಡು ನಿರ್ಭರವಾದ ಹರ್ಷದಿಂದ ಉಬ್ಬಿ ದರಿದ್ರ ಬ್ರಾಹ್ಮಣನಾದ ಆ ವಿಷ್ಣು ಶರ್ಮನಿಗೆ ಹಿತ್ತಾಳೆ ತಾಮ್ರ ಕಬ್ಬಿಣ ಸೀಸ ಕಂಚು ಎಂಬ ಪಂಚಲೋಹಗಳು ಮುತ್ತು ರತ್ನ ಪಚ್ಚೆ ನೀಲ ಪುಷ್ಯರಾಗ ವೈಡೂರ್ಯ ವಜ್ರ ಗೋಮೇಧಿಕ ಹವಳಗಳೆಂಬ ನವರತ್ನ ಗಳು, ಆನೆ ಕುದುರೆ ಮೊದಲಾದ ಯಾನಗಳು, ಶಾಲು ಸಕಲಾತಿ ಮೊದಲಾದ ವಸ್ತ್ರಗಳು, ಗಂಧ ಕಸ್ತೂರಿ ಪ್ರಣಗು ಜಾಜಿ ಮೊದಲಾದ ಅನುಲೇಪನಗಳು, ತೊಟ್ಟಿ ಪಡಸಾಲೆ ಮಹಡಿಗಳುಳ್ಳ ಮನೆಗಳು, ಗದ್ದೆ ಹೊಲ ತೋಟ ಮುಂತಾದ ಕ್ಷೇತ್ರಗಳು, ಇವುಗ ಳನ್ನು ಕೊಟ್ಟನು. ಹೀಗೆ ಆ ರಾಯನು ವಿಷ್ಣು ಶರ್ಮನಿಗೆ ಬಹಳ ಬಹುಮಾನದ್ರವ್ಯಗಳನ್ನು ಕೊಟ್ಟು ವಂದನೋಪಚಾರಗಳಿಂದ ಸತ್ಕರಿಸಿ ತನ್ನ ಕುಮಾರರನ್ನು ಕರಿಸಿ ಆ ಮನ ರನ್ನೂ `ವೈಷ್ಣವಶಿಖಾಮಣಿಯ ಜೆಷ್ಟು ಭೋಗಿಯ ವಿಷ್ಣು ಭಕ್ತನೂ ಕುಲವರ್ಧಿಷ್ಟು ವೂ ಆದ ವಿಷ್ಣು ಶರ್ಮನ ವಶಕ್ಕೆ ಕೊಟ್ಟು ಕಳುಹಿಸಲು ಆ ಬ್ರಾಹ್ಮಣನು ತನ್ನ ತೃಷ್ಣಾ ತುರವನ್ನು ಕೃಷ್ಣನ ಕಟಾಕ್ಷದಿಂದ ನೀಗಿದೆನೆಂದು ರಾಜಕುಮಾರರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಈ ವರ್ತಮಾನವನ್ನೆಲ್ಲಾ ತನ್ನ ಹೆಂಡತಿಯ ಸಂಗಡ ಹೇಳುತ್ತಿರುವ ಸಮಯದಲ್ಲಿ ಆ ಸಭೆಯಲ್ಲಿದ್ದ ವಿದ್ವಾಂಸರೆಲ್ಲರೂ ರಾಯನನ್ನು ಆಶೀರ್ವದಿಸಿ ಅವನ ಅಪ್ಪಣೆಯನ್ನು ತೆಗೆದುಕೊಂಡು ಹೊರಟು ರಾಜದ್ವಾರಕ್ಕೆ ಬಂದು ವಿಷ್ಣುಶರ್ಮನು ರಾಜಾಸ್ಥಾನದಲ್ಲಿ ನಮಗೆ ಅಪಮಾನವಾಗುವ ಹಾಗೆ ಮಾಡಿದನೆಂದು ಬಹಳ ಚಿಂತಾಕ್ರಾಂತರಾಗಿ ಎಲ್ಲರೂ ಒಟ್ಟುಗೂಡಿ ಮನೆಯನ್ನು ಹುಡುಕಿಕೊಂಡು ಬಂದು ಅವನನ್ನು ಕಂಡು-ಎಲೆ ಎಷ್ಟು ಶರ್ಮನೇ ? ನೀನು ಶಕ್ರಸಮನಾದ ಚಕ್ರೇಶ್ವರನ ಕುಮಾರರನ್ನು ತಿದ್ದುವೆನೆಂದು ನಿರ್ವಕವಾದ ಶಪಥ ವನ್ನು ಮಾಡಿಕೊಳ್ಳಬಹುದೇ ? ನಮ್ಮೆಲ್ಲರಿಗಿಂತ ನೀನು ಘನ ವಿದ್ವಾಂಸನೇ ? ಈ ದುಷ್ಟ ರಾದ ರಾಜಪುತ್ರರನ್ನು ತಿದ್ದುವುದು ನಿನ್ನ ಕೈಲಾಗುವುದೇ ? ರಾಜಸ್ಥಾನದಲ್ಲಿ ನಾವೆ ಲ್ಲರೂ ಸಮ್ಮತಿಸದೆ ಇದ್ದ ಕಾರ್ಯವನ್ನು ನೀನು ಮಾಡುತ್ತೇನೆಂದು ಗರ್ವೋಕ್ತಿ ಗಳನು ಹೇಳಿ ನಮ ನು ಅವಮಾನಪಡಿಸಬಹುದೇ ? ಎಂದು ಅತ್ಯಂತ ಕೋಪದಿಂದ ಗಳನ್ನು ಹೇಳಿ ನಮ್ಮನ್ನು ಅವಮಾನಪಡಿಸಬ ಜರಿಯಲಾಗಿ ಆ ವಿಷ್ಣುಶರ್ಮನು-ಚಕ್ರಪಾಣಿಯೇ ! ತ್ರಿವಿಕ್ರಮಮೂರ್ತಿಯೇ !