ಕಥಾಸಂಗ್ರಹ-೧ ನೆಯ ಭಾಗ ಈ ವಕ್ರವನ್ನು ಪರಿಹರಿಸಿ ರಕ್ಷಿಸೆಂದು ಮನಸ್ಸಿನಲ್ಲಿ ತನ್ನ ಇಷ್ಟದೈವವನ್ನು ಧ್ಯಾನಿಸಿ ದವನಾಗಿ ಸಮಸ್ತ ವಿದ್ವಾಂಸರಿಗೂ ಸಾಷ್ಟಾಂಗಪ್ರಣಾಮವನ್ನು ಮಾಡಿ ಸ್ವಾಮಿಾ! ನಾನು ನಿಮ್ಮೆಲ್ಲರಿಗೂ ಸೇವಕನು; ನನ್ನ ಸಾಮರ್ಧವೂ ನನ್ನ ವಿದ್ಯೆಯ ಎಷ್ಟರವು? ಆ ಮಹಾರಾಜನು ಕೋಪವನ್ನು ಮಾಡಿಕೊಂಡುದರಿಂದ ಸಕಲ ವಿದ್ವಾಂಸರ ಅನ್ನ ಸ್ಥಿತಿಯು ಹೋಗುವ ವೇಳೆ ಬರಲು ನಿಮ್ಮ ಸಂದರ್ಶನಾನುಗ್ರಹವೆಂಬ ಬಲದಿಂದ ನನಗೆ ಒಂದು ಯುಕಿ ಯು ತೋರಿತು, ಏನಂದರೆ ಈ ಕ ಣದಲಿ ಹೊಗುವ ನಮ. ಅನ್ನ ಸ್ಥಿತಿಯು ಇನ್ನು ಆರು ಮಾಸಗಳಾದರೂ ನಿಶ್ಚಿಂತೆಯಾಗಿರಲಿ ಎಂಬುವುದೇ. ನಾನು ಹೀಗೆ ಹೇಳಿದುದರಿಂದ ರಾಯನು ಒಡಂಬಟ್ಟು ನಮ್ಮೆಲ್ಲರನ್ನೂ ಮನ್ನಿಸಿ ಕಳುಹಿಸಿದನು. ಆದಕಾರಣ ನೀವು ಇದನ್ನೆಲ್ಲಾ ಯೋಚಿಸಿ ನನ್ನ ಮೇಲೆ ಪೂರ್ಣಾ ನುಗ್ರಹವಿಟ್ಟು ಉದ್ದಾರವನ್ನು ಮಾಡಬೇಕು ಎಂದು ಹೇಳಲು ಆ ವಿದ್ವಾಂಸರೆಲ್ಲರೂ ಸಂತೋಷಪಟ್ಟು ಎಷ್ಟು ಶರ್ಮನನ್ನು ಸಂತೈಸಿ ತಮ್ಮ ತಮ್ಮ ಮನೆಗಳಿಗೆ ಹೋದರು - ಇತ್ತಲಾ ರಾಜಕುಮಾರರು ಬಹಳ ದುಷ್ಟರಾದುದರಿಂದ ವಿಷ್ಣು ಶರ್ಮನು ಅವರು ಹೇಳಿದ ಹಾಗೆ ಕೇಳಿಕೊಂಡು ಕೆಲವು ದಿವಸ ಕಾಲಕ್ಷೇಪವನ್ನು ಮಾಡುತ್ತಾ ಇರಲು ಒಂದು ದಿನ ಆ ರಾಜಕುಮಾರರು ಅರಣ್ಯದಲ್ಲಿ ಬೇಟೆಯಾಡಬೇಕೆಂದು ಪ್ರಯಾಣವಾಗಿ ಸನ್ನಾ ಹದೊಡನೆ ಹೊರಟರು. ಆಗ ವಿಷ್ಣು ಶರ್ಮನು ಕೈಯಲ್ಲಿ ಬುತ್ತಿಯನ್ನು ತೆಗೆದು ಕೊಂಡು ಅವರ ಹಿಂದೆಯೇ ಹೋಗುತ್ತಿದ್ದನು. ಅವರು ಘೋರವಾದ ಅರಣ್ಯವನ್ನು ಪ್ರವೇಶಿಸಿ ಮನಸ್ಸಿಗೆ ಬಂದ ಹಾಗೆ ಬೇಟೆಯನ್ನಾಡಿ ಬಹಳ ದಣಿದು ಈ ಬ್ರಾಹ್ಮಣನು ತಂದು ಇದ್ದ ಬುತ್ತಿಯನ್ನು ನೋಡಿ-ಎಲೋ ಬ್ರಾಹ್ಮಣಾ ! ನಾವು ಬೇಟೆಯಾಡಿ ಬಹಳ ದಣಿದು ಇದ್ದೇವೆ ; ಬುತ್ತಿಯ ಅನ್ನವನ್ನು ಕೊಡೋ ಎಂದು ಕೇಳಲು ವಿಷ್ಣು ಶರ್ಮನು ಅವರಿಗೆ ಬುತ್ತಿಯನ್ನು ಕೊಟ್ಟನು. ಅವರು ಅದನ್ನು ಉಂಡು ತಿಳಿಯಾದ ನೀರನ್ನು ಕುಡಿದು ಒಂದು ಮರದ ನೆರಳಿನಲ್ಲಿ ಕುಳಿತುಕೊಂಡು ಬಳಲಿದವರಾದಕಾರಣ ಪವಡಿಸಿ ಆ ವಿಷ್ಣು ಶರ್ಮನನ್ನು ನೋಡಿ ಎಲೈ ಬ್ರಾಹ್ಮಣೋತ್ತಮನೇ ! ನಮಗೆ ಹೊತ್ತು ಹೋಗುವ ಹಾಗೆ ಒಂದು ಕಥೆಯ ನ್ನು ಹೇಳು ಎನ್ನಲು ಆ ಬ್ರಾಹ್ಮಣನು ಬಹಳ ಸಂತುಷ್ಟನಾಗಿ ಇವರನ್ನು ಬುದ್ದಿ ವಂತರಾಗುವಂತೆ ಮಾಡುವುದಕ್ಕೆ ಇದೇ ಸಮಯವೆಂದು ಎಣಿಸಿ ಕೇಳುವುದಕ್ಕೆ ಚೆನ್ನಾಗಿಯ ಸಕಲ ನೀತಿಯುಕ್ತವಾಗಿಯೂ ಇರುವಂಥಾ ಐದು ಕಥೆಗಳನ್ನು ಕಲ್ಪಿಸಿ ಅವುಗಳನ್ನು ಅವರಿಗೆ ಚೆನ್ನಾಗಿ ತಿಳಿಯುವಂತೆ ಹೇಳುವುದಕ್ಕೆ ಆರಂಭಿಸಿ ಆರು ತಿಂಗಳೊಳಗೆ ಅವರನ್ನು ಸಕಲ ನೀತಿವಿಶಾರದರನ್ನಾಗಿ ಮಾಡಿ ಕೃತಾರ್ಧನಾದ ನೆಂದು ಸಂತೋಷಪಟ್ಟು ಕೊಂಡು ಆ ಕುಮಾರರನ್ನು ರಾಯನ ಬಳಿಗೆ ಕರಕೊಂಡು ಹೋಗಿ ಅವರ ವಿದ್ಯಾಪರೀಕ್ಷೆಯನ್ನು ತೋರಿಸಲು ರಾಯನು ತನ್ನ ಮಕ್ಕಳು ಬುದ್ದಿವಂತರಾದುದನ್ನು ನೋಡಿ ಬಹಳ ಸಂತೋಷವನ್ನು ಹೊಂದಿ ಆ ವಿಷ್ಣು ಶರ್ಮನಿಗೆ ಬಹಳ ಉಡುಗೆರೆಗಳನ್ನು ಕೊಟ್ಟು ಜೇಷ್ಠ ಪುತ್ರನಿಗೆ ಪಟ್ಟವನ್ನು ಕಟ್ಟಿ ಸುಖದಿಂದ್ದನು.
ಪುಟ:ಕಥಾಸಂಗ್ರಹ ಸಂಪುಟ ೧.djvu/೬೯
ಗೋಚರ