ಪುಟ:ಕಥಾಸಂಗ್ರಹ ಸಂಪುಟ ೧.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 KANARESE SELECTIONS-PART T 45, TALES OF ANIMALS. ೪೫, ಪ್ರಾಣಿಗಳ ವಿಷಯದಲ್ಲಿ ಕಥೋಪಕಥೆಗಳು ಕಾವೇರೀತೀರದಲ್ಲಿ ವಿಶಾಲವತಿ ಎಂಬ ಪಟ್ಟಣವಿರುವುದು, ಅ ಪಟ್ಟಣದ ಪ್ರಾಂತ್ಯದಲ್ಲಿ ಒಂದು ಅಗ್ರಹಾರವಿರುವುದು, ಆ ಅಗ್ರಹಾರದಲ್ಲಿ ದೇವಶರ್ಮನೆಂಬ ಬ್ರಾಹ್ಮಣನು ಪತ್ನಿ ಪುತ್ರಾದಿಗಳೊಡನೆ ಸಂಸಾರವನ್ನು ಮಾಡುತ್ತಾ ಇದ್ದು ಕಡೆಗೆ ಅದರಲ್ಲಿ ಉಂಟಾದ ವೈರಾಗ್ಯದಿಂದ ಗಂಗಾಸ್ನಾನವನ್ನು ಮಾಡಬೇಕೆಂದು ಕಾಶೀ ಯಾತ್ರೆಗೆ ಹೊರಟು ಗೊಂಡಾರಣ್ಯವನ್ನು ಹೊಕ್ಕು ಬರುತ್ತಾ ಮಾರ್ಗದಲ್ಲಿ ಒಂದು ತಮಾಕವನ್ನು ಕಂಡು ಅದರಲ್ಲಿ ಸ್ನಾನ ಸಂಧ್ಯಾವಂದನೆ ಮೊದಲಾದ ಅನುಷ್ಠಾನಗ ಳನ್ನು ಮಾಡುವ ಸಮಯದೊಳಗೆ ಆ ತಟಾಕದಲ್ಲಿ ಇದ್ದ ಒಂದು ಮಂಡೂಕವು ಈ ವಿಪ್ರನನ್ನು ನೋಡಿ--ನನ್ನ ನ್ನು ತೆಗೆದು ಕೊಂಡು ಹೋಗಿ ಗಂಗೆಯಲ್ಲಿ ಬಿಟ್ಟರೆ ನಿನಗೆ ಪ್ರತ್ಯುಪಕಾರವನ್ನು ಮಾಡುತ್ತೇನೆಂದು ಹೇಳಲು ಆ ಬ್ರಾಹ್ಮಣನು ಮಂಡೂಕವನ್ನು ನೋಡಿ ನಿನ್ನ ೦ಧ ಅಲ್ಪ ಜೀವಿಗಳು ಮನುಷ್ಯರಿಗೆ ಉಪಕಾರವನ್ನು ಮಾಡುವುದುಂಟೇ ? ಎನಲು ಆ ಮಂಡೂಕವು ಅವನಿಗೆ ಒಂದು ಕಥೆಯನ್ನು ಹೇಳಿತು ಹೇಗಂದರೆ :- ಯಮುನಾತೀರದಲ್ಲಿರುವ ಪ್ರಜಾವತಿ ಎಂಬ ಅಗ್ರಹಾರದೊಳಗೆ ವೇದಪಾಲ ನೆಂಬ ರಾಯನು ಬ್ರಾಹ್ಮಣರನ್ನು ಅನೇಕ ವಿಧದಿಂದ ರಕ್ಷಿಸಿ ಪೂಜಿಸುತ್ತಾ ಕೀರ್ತಿ ಯನ್ನು ಸಂಪಾದಿಸಿಕೊಂಡು ಪುಣ್ಯವಂತನಾಗಿ ಇದ್ದನು. ಆ ರಾಯನು ಒಂದು ದಿನ ಬೇಟೆಗೋಸ್ಕರ ಅರಣ್ಯವನ್ನು ಕುರಿತು ಹೊರಟು ಅಲ್ಲಿ ದುಷ್ಟಜಂತುಗಳನ್ನು ಸಂಹರಿಸಿ ಬರುವ ಮಾರ್ಗದೊಳಗೆ ಸತ್ಯಸೇನನೆಂಬ ಒಂದು ಮದದಾನೆಯು ತನ್ನ ಸೈನ್ಯದ ಮೇಲೆ ಬಿದ್ದು ನೂರಾರು ಮಂದಿಯನ್ನು ಕೊಂದು ಹೋಗಲು ಆಗ ರಾಯನು ಕೊಪಾರೂಢನಾಗಿ ತನ್ನ ದೇಶದಲ್ಲಿ ಇದ್ದ ಕಾಮಾಟದ ಜನರನ್ನು ಕರಿಸಿ ಆನೆ ಇರುವ ಸ್ಥಳಕ್ಕೆ ಬಂದು ವಿಸ್ತಾರವಾದ ವಾದವನ್ನು ತೆಗೆಯಿಸಿ ಅದು ಕಾಣ ದಂತೆ ಕಟ್ಟಿಗೆ ಸೊಪ್ಪಗಳಿಂದ ಮುಚ್ಚಿ ಮಣ್ಣು ಹಾಕಿ ಅದರ ಮೇಲೆ ಹಂದರವನ್ನು ಹಾಕಿಸಿ ಸುತ್ತಲೂ ಜನಗಳು ಆನೆಗಳನ್ನು ಬೆದರಿಸುತ್ತಾ ಬರಲು ಆ ಗಜರಾಜನು ಈ ಸೈನ್ಯವೆಲ್ಲವನ್ನೂ ಕೊಲ್ಲುವೆನೆಂದು ಮಹಾರೋಷಾವೇಶದಿಂದ ಓಡಿಬಂದು ವಾದದಲ್ಲಿ ಬಿದ್ದಿತು. ಆ ರಾಯನು ಬಂದು, ನೋಡಿ ಮರು ದಿನಗಳ ಮೇಲೆ ಇದನ್ನು ತನ್ನ ಪಟ್ಟಣಕ್ಕೆ ತೆಗೆದು ಕೊಂಡು ಹೋಗಬೇಕೆಂದು ಚತುರಂಗಬಲದೊಡನೆ ತಿರಿಗಿ ತನ್ನ ಪಟ್ಟಣಕ್ಕೆ ಹೋದನು. ಇತ್ತಲಾ ಗಜರಾಜನು ವಾದದಲ್ಲಿ ಬಿದ್ದು ಏಳ ಲಾರದೆ ಮಹಾಸಂಕಟಪಡುತ್ತಿರುವ ಸಮಯದೊಳಗೆ ಒಬ್ಬ ಬ್ರಾಹ್ಮಣನು ಆ ಮಾರ್ಗದಲ್ಲಿ ಬರುವುದನ್ನು ಕಂಡು-ಎಲೈ ಬ್ರಾಹ್ಮಣೋ ಮನೇ ! ನನ್ನ ನ್ನು ಹೊರಗೆ ತೆಗೆಯಲಾರೆಯಾ ? ಎಂದು ಬೇಡಿಕೊಳ್ಳಲು ಅವನು ಆ ಆನೆಯನ್ನು ನೋಡಿ ನಾನು ಅಶಕ್ತನು ; ನಿನ್ನನ್ನು ಹೊರಗೆ ತೆಗೆಯುವ ಸಾಮರ್ಥ್ಯವು ನನಗಿಲ್ಲ. ನೀನು ಜನ್ಮಾರಭ್ಯ ಯಾರಿಗಾದರೂ ಉಪಕಾರವನ್ನು ಮಾಡಿದುದು ಇಲ್ಲವೇ ? ಅನ್ನ ಲು ಆ ಗಜವು ಇಂತೆಂದುದು-ಎಲೈ ಬ್ರಾಹ್ಮಣನೇ ! ನಾನು ನನ್ನ ಮದೋನ್ಮತ್ತತೆಯಿಂದ